Advertisement

ಮತಯಂತ್ರ, ವಿವಿ ಪ್ಯಾಟ್‌ ದಾಸ್ತಾನು

01:06 PM Feb 24, 2018 | Team Udayavani |

ಮೈಸೂರು: ಮುಂಬರುವ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟವಾಗುವ ಮುನ್ನವೇ ಚುನಾವಣೆಗಾಗಿ ಮೈಸೂರು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದ್ದು, ಈ ಹಿನ್ನೆಲೆಯಲ್ಲಿ ಮತಯಂತ್ರಗಳನ್ನು ಸುರಕ್ಷಿತವಾಗಿ ಇರಿಸಲು ಅಗತ್ಯವಿರುವ ಸ್ಥಳಗಳಿಗಾಗಿ ಜಿಲ್ಲಾಧಿಕಾರಿ ರಂದೀಪ್‌ ಡಿ., ಶುಕ್ರವಾರ ಪರಿಶೀಲನೆ ನಡೆಸಿದರು.

Advertisement

ವಿಧಾನಸಭಾ ಚುನಾವಣೆಗೆ ಕೇವಲ ಎರಡು ತಿಂಗಳು ಬಾಕಿಯಿದ್ದು, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಇಡುವ ಸ್ಥಳಗಳಿಗಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದಕ್ಕಾಗಿ ನಗರದ ವಿದ್ಯಾವರ್ಧಕ ಕಾಲೇಜು ಎದುರಿನ ನಗರಪಾಲಿಕೆ ಚುನಾವಣಾ ಶಾಖೆಯ ಗೋದಾಮಿನಲ್ಲಿ 3500 ವಿವಿ ಪ್ಯಾಟ್‌ಗಳನ್ನು ಭದ್ರವಾಗಿ ಇಡಲಾಗಿದೆ.

ಚುನಾವಣೆಗಾಗಿ ತಮಿಳುನಾಡಿನಿಂದ 3600 ಬ್ಯಾಲೆಟ್‌ ಯೂನಿಟ್‌, 3000 ಕಂಟ್ರೋಲ್‌ ಯೂನಿಟ್‌ಗಳು ಮೈಸೂರಿಗೆ ತರಲಾಗಿದ್ದು, ಶೀಘ್ರವೇ ಎಲ್ಲಾ ರಾಜಕೀಯ ಪಕ್ಷಗಳ ಸಮ್ಮುಖದಲ್ಲಿ ವಿವಿ ಪ್ಯಾಟ್‌ಗಳ ಪರಿಶೀಲನೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಇವಿಎಂ ಯಂತ್ರಗಳನ್ನು ಇರಿಸಲಾಗಿರುವ ಸ್ಥಳವನ್ನು ಬಾಂಬ್‌ ಪತ್ತೆ ಹಾಗೂ ಶ್ವಾನದಳದಿಂದ ಪರಿಶೀಲನೆ ನಡೆಸಲಾಗಿದೆ.

ಇವಿಎಂ ಯಂತ್ರ, ವಿವಿಪ್ಯಾಟ್‌ಗಳಲ್ಲಿ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಪರಿಶೀಲನೆ ನಡೆದಿದೆ. ಚುನಾವಣೆ ವೇಳೆ ವಿವಿ ಪ್ಯಾಟ್‌ಗಳಲ್ಲಿ ಕೆಲವೊಂದು ಲೋಪಗಳಾಗುವ ಸಾಧ್ಯತೆ ಇರುವ  ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಶೇ.40 ಹೆಚ್ಚಿನ ವಿವಿ ಪ್ಯಾಟ್‌ಗಳನ್ನು ಸಂಗ್ರಹಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next