Advertisement
ಉಡುಪಿ, ದ.ಕ., ಕೊಡಗು ಜಿಲ್ಲೆಯ ಪೈಕಿ ತಾಲೂಕೊಂದರಲ್ಲಿ ಅತೀ ಹೆಚ್ಚು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದಿರುವುದು ಬೆಳ್ತಂಗಡಿಯಲ್ಲಿ ಎಂಬು ದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ. ಒಟ್ಟು 40 ಗ್ರಾ.ಪಂ.ಗಳ ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿ ಸಜ್ಜಾಗಿದೆ. ಈ ಪೈಕಿ 12 ಗ್ರಾ.ಪಂ.ಗಳ ಸಂಪೂರ್ಣ ಸ್ಥಾನ ಗಳು ಬಿಜೆಪಿ ಪಾಲಾಗಿವೆ. ಇದರ ಹಿಂದೆ ಶಾಸಕ ಹರೀಶ್ ಪೂಂಜ ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರ ಶ್ರಮ ಪ್ರತಿಫಲಿಸುತ್ತಿದೆ.
ತಾಲೂಕಿನ 46 ಗ್ರಾ.ಪಂ.ಗಳಲ್ಲಿ ಕುಟುಂಬ ಮಿಲನ ಕಾರ್ಯಕ್ರಮ ಆಯೋಜಿಸಿ ಪ್ರತಿ ಗ್ರಾ.ಪಂ.ಮಟ್ಟದಲ್ಲಿ 1,000ಕ್ಕೂ ಅಧಿಕ ಮಂದಿಯನ್ನು ಸೇರಿಸುವ ಮೂಲಕ ಹರೀಶ್ ಪೂಂಜ ದಾಖಲೆ ನಿರ್ಮಿಸಿದ್ದರು. ತಾಲೂಕು ಮಟ್ಟದಲ್ಲಿ ಮಾತ್ರವಲ್ಲದೆ 241 ಬೂತ್‌ಗಳಿಗೆ ಮೂರು ಬಾರಿ ಭೇಟಿ ನೀಡಿ ಕಾರ್ಯಕರ್ತರೊಂದಿಗೆ ಸಂವಾದ, ಶಕ್ತಿ ಕೇಂದ್ರಗಳ ಸಭೆ ನಡೆಸುವ ಮೂಲಕ ನಿಕಟ ಸಂಪರ್ಕ ಬೆಳೆಸಿದ್ದರಿಂದ ಯುವಕರಲ್ಲಿ ರಾಜಕೀಯ ಪ್ರಭಾವ ಬೆಳೆಸಿದ್ದರು. 2015ರ ಚುನಾವಣೆಯಲ್ಲಿ ಬಿಜೆಪಿ 22 ಗ್ರಾ.ಪಂ.ಗಳ ಅಧಿಕಾರ ಚುಕ್ಕಾಣಿ ಹಿಡಿದಿದ್ದರೆ ಈ ಬಾರಿ 18 ಗ್ರಾ.ಪಂ.ಗಳಲ್ಲಿ ಬಿಜೆಪಿ ಅಧಿಕಾರ ಹೆಚ್ಚಿಸಿಕೊಂಡಿದೆ. ಇದರ ಜತೆಗೆ ಅವಧಿ ಮುಗಿಯದ ವೇಣೂರು, ಆರಂಬೋಡಿ ಗ್ರಾ.ಪಂ.ನ 24 ಸ್ಥಾನ ಮತ್ತು ಪ್ರಸಕ್ತ 481 ಸ್ಥಾನ ಸೇರಿ ಒಟ್ಟು 505 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. 241 ಬೂತ್‌ಗೆ 2.41 ಕೋ.ರೂ.
ತಾಲೂಕಿನ ಅಭಿವೃದ್ಧಿಗೆ ಸರಕಾರದ ವಿವಿಧ ಯೋಜನೆಗಳಡಿ 670 ಕೋ.ರೂ. ಅನುದಾನ ತರಿಸಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಆದ್ಯತೆಯನ್ನು ಹರೀಶ್ ಪೂಂಜ ಅವರು ನೀಡಿದರು. ಇದರ ಜತೆಗೆ 241 ಬೂತ್‌ಗೆ ತಲಾ 10 ಲಕ್ಷ ರೂ. ನಂತೆ 2.41 ಕೋ.ರೂ. ನೀಡುವ ಮೂಲಕ ಮತದಾರರ ಪೂರ್ಣ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ.
Related Articles
ಎಸ್‌ಡಿಪಿಐ ದೇಶದ್ರೋಹಿ ಘೋಷಣೆ ಮಾಡುವ ಮೂಲಕ ಭಾರತಾಂಬೆಗೆ ಅವಮಾನ ಮಾಡಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದ್ದು ಇಂತಹವರನ್ನು ಪೊಲೀಸ್ ಇಲಾಖೆ ತತ್‌ಕ್ಷಣ ಬಂಧಿಸಲಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದ್ದಾರೆ.
Advertisement