ಬೀದರ: ಜಿಲ್ಲೆಯಲ್ಲಿ ಕೂಡ ಮತದಾರರ ಕರಡು ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯು ಸುವ್ಯವಸ್ಥಿತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಮತದಾರರ ಪಟ್ಟಿಯ ವೀಕ್ಷಕರು ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ| ರಿಚರ್ಡ ವಿನ್ಸೆಂಟ್ ಡಿಸೋಜಾ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಬೀದರ, ಭಾಲ್ಕಿ, ಔರಾದ್, ಕಮಲನಗರ, ಹುಲಸೂರ, ಬಸವಕಲ್ಯಾಣ, ಚಿಟಗುಪ್ಪಮತ್ತು ಹುಮನಾಬಾದ್ ತಹಶೀಲ್ದಾರ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿ ಅವರು ಮಾತನಾಡಿದರು.
ಜ.13ಕ್ಕೆ ಅಂತಿಮ ಕರಡು ಮತದಾರರ ಪಟ್ಟಿ ಪ್ರಕಟಿಸಬೇಕಿದೆ.ಹೀಗಾಗಿ ಈ ಕಾರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸುವ, ಹೆಸರು ತಿದ್ದುಪಡಿ ಮಾಡುವ, ಹೆಸರು ತೆಗೆದು ಹಾಕುವ, ವರ್ಗಾವಣೆ ಮಾಡುವ ಹೀಗೆ ಯಾವುದೇ ಅರ್ಜಿ ಬರಲಿ ಅದಕ್ಕೆತುರ್ತಾಗಿ ಸ್ಪಂದಿಸಬೇಕು. ನಿಯಮಾನುಸಾರ ಪರಿಷ್ಕರಣ ಪ್ರಕ್ರಿಯೆ ವೇಗಗೊಳಿಸಬೇಕು ಎಂದು ಸೂಚಿಸಿದರು.
ಈ ವೇಳೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್.ಮಾತನಾಡಿ,ಬಸವಕಲ್ಯಾಣ,ಔರಾದ್, ಭಾಲ್ಕಿಯ ಗಡಿಭಾಗದ ಹಳ್ಳಿಗಳಲ್ಲಿ ಕೂಡ ಮತದಾರರ ಪಟಿಯಲ್ಲಿ ಎರಡು ಕಡೆಗಳಲ್ಲಿ ಹೆಸರು ಇರುವುದು ಕಂಡು ಬಂದಲ್ಲಿ ಅದನ್ನು ಗುರು ತಿಸಿ ಸರಿಯಾದ ದಾಖಲೆಗಳೊಂದಿಗೆ ಪರಿಶೀಲಿಸಿ ಸರಿಪಡಿಸಬೇಕು ಎಂದರು.
ಆಯಾ ಕಡೆಗಳಲ್ಲಿ ಬಿಎಲ್‌ಒ ಅವರು ಯಾರು ಯಾರು ಇದ್ದಾರೆ ಎಂಬುದನ್ನು ಪ್ರತಿ ತಿಂಗಳು ಅಪಡೇಟ್ ಮಾಡಬೇಕು. ಆಯಾ ತಾಲೂಕಿನಲ್ಲಿ ವಿಐಪಿ ಗುರುತಿನ ಮತದಾರರೆಷು, ವಿಕಲಚೇತನರು ಎಂದು ಗುರುತಿಸಿದ ಮತದಾರರೆಷ್ಟು ಎಂಬುದನ್ನು ಸರಿಯಾಗಿ ಗುರುತಿಸಬೇಕು ಎಂದರು. ಅಪರ
ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ,ತಹಶೀಲ್ದಾರ್ ಅಹ್ಮದ್ ಶಕೀಲ್ ಇದ್ದರು.