Advertisement

ರಾಜ್ಯದಲ್ಲಿ ಮತ ನಿರ್ಲಕ್ಷ್ಯ ಹೆಚ್ಚು: ಚುನಾವಣ ಆಯುಕ್ತ ರಾಜೀವ್‌ ಕುಮಾರ್‌

12:12 AM Mar 30, 2023 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಮತದಾನದಿಂದ ಹೊರಗೆ ಉಳಿಯುವವರ ಪ್ರಮಾಣ ಹೆಚ್ಚು ಎಂದು ಚುನಾವಣ ಆಯುಕ್ತ ರಾಜೀವ್‌ ಕುಮಾರ್‌ ಹೇಳಿದರು.

Advertisement

2018ರ ವಿಧಾನಸಭೆ ಚುನಾವಣೆಯಲ್ಲಿ ಶೇ.72 ಹಕ್ಕು ಚಲಾವಣೆಯಾಗಿತ್ತು. ಆದರೆ ಬೆಂಗ ಳೂರು ವ್ಯಾಪ್ತಿಯಲ್ಲಿ ಇರುವ ವಿಧಾನಸಭಾ ಕ್ಷೇತ್ರಗಳಲ್ಲಿ ಶೇ.55 ಹಕ್ಕು ಚಲಾವಣೆಯಾಗಿತ್ತು. ಅದನ್ನು ನಿವಾರಿಸುವ ನಿಟ್ಟಿನಲ್ಲಿ ಚುನಾವಣ ಆಯೋಗ ಮಾಹಿತಿ ತಂತ್ರಜ್ಞಾನ ಕಂಪೆನಿಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳು, ಸ್ಟಾರ್ಟಪ್‌ಗ್ಳಲ್ಲಿ ಕೆಲಸ ಮಾಡುವವರನ್ನು ಸಂಪರ್ಕಿಸಿ ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದು ಹಕ್ಕು ಚಲಾವಣೆ ಮಾಡುವಂತೆ ಮನವೊ ಲಿಲಾಗಿದೆ. ಅದಕ್ಕಾಗಿ ವಿವಿಧ ಕಂಪೆನಿಗಳ ಸಹ ಯೋಗದಲ್ಲಿ “ಹ್ಯಾಕಥಾನ್‌’ ಮಾದರಿಯಲ್ಲಿ “ಎಲೆಕ್ತಾನ್‌’ (ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಮಾಡುವಂತೆ ಮನವೊಲಿಕೆ ಕಾರ್ಯಕ್ರಮ) ನಡೆಸಲಾಗುತ್ತದೆ ಎಂದರು.

ಶೇ.100 ಸಾಧನೆ: ರಾಜ್ಯದ ಬುಡಕಟ್ಟು ಜನಾಂಗ ದವರು ಇರುವ ಪ್ರದೇಶಗಳಲ್ಲಿ ಶೇ.100ರಷ್ಟು ಪ್ರಮಾಣದಲ್ಲಿ ಮತದಾರರನ್ನು ನೋಂದಣಿ ಮಾಡುವ ವ್ಯವಸ್ಥೆ ಪೂರ್ಣಗೊಂಡಿದೆ. ಅದಕ್ಕಾಗಿ “ವಿಶೇಷವಾಗಿ ಬುಡಕಟ್ಟು ಜನಾಂಗದ ಗುಂಪು’ಗಳನ್ನು ರಚಿಸಲಾಗಿತ್ತು ಎಂದು ರಾಜೀವ್‌ ಕುಮಾರ್‌ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯ ವಾದ ಮಣಿಪುರ ವಿಧಾನಸಭೆಯಲ್ಲಿ ಇದೇ ಮಾದರಿ ಅನುಸರಿಸಲಾಗಿತ್ತು. ಸುಮಾರು 40 ಇಂಥ ಬುಡಕಟ್ಟು ಜನರ ಗುಂಪುಗಳನ್ನು ರಚಿಸಿ, ಅವರಲ್ಲಿ ಹೆಚ್ಚಿನ ಪ್ರಮಾಣದ ಮತ ಚಲಾ ವಣೆಯಾಗುವಂತೆ ಮಾಡಲಾಗುತ್ತದೆ ಎಂದರು.

5,24,11,557- ಒಟ್ಟುಮತದಾರರು
2,63,32, 445- ಪುರುಷ ಮತದಾರರು
2,60,26, 752- ಮಹಿಳಾ ಮತದಾರರು
4,751- ತೃತೀಯ ಲಿಂಗಿ ಮತದಾರರ
58,282- ಪ್ರಸಕ್ತ ಸಾಲಿನ ಮತಗಟ್ಟೆ
24,063- ನಗರ ಪ್ರದೇಶ ಮತಗಟ್ಟೆ
34,219- ಗ್ರಾಮೀಣ ಪ್ರದೇಶ ಮತಗಟ್ಟೆ
1,320- ಮಹಿಳೆಯರೇ ನಿರ್ವಹಿಸಲಿರುವ ಮತಗಟ್ಟೆ‌
224- ಯುವಕರೇ ನಿರ್ವಹಿಸಲಿರುವ ಮತಗಟ್ಟೆ

Advertisement
Advertisement

Udayavani is now on Telegram. Click here to join our channel and stay updated with the latest news.

Next