ವಿಜಯಪುರ: ವ್ಯಕ್ತಿಯೊಬ್ಬ ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದನ್ನು ವಿಡಿಯೋ ಮಾಡಿದ್ದು, ಇದೀಗ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಕ್ಷೇತ್ರದಲ್ಲಿ ಗುಪ್ತ ಮತದಾನ ಮಾಡಬೇಕಿದ್ದ ಮತದಾರ ತಾನು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕಿದ್ದನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಡಿದ್ದಾನೆ.
ಇದನ್ನೂ ಓದಿ:Karnataka Polls ಮಸ್ಕಿ: ಬಿಜೆಪಿ ಧ್ವಜವಿರುವ ಕಾರು ನಿಲ್ಲಿಸಿದ್ದಕ್ಕೆ ಗಲಾಟೆ
ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲಗೆ ಮತ ಚಲಾಯಿಸಿದ ವಿಡಿಯೋ ಹರಿಬಿಟ್ಟಿದ್ದಾನೆ. ಇಂಥ ಘಟನೆ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಎದುರಾಳಿ ಅಭ್ಯರ್ಥಿಗಳು ಆಗ್ರಹಿಸುತ್ತಿದ್ದಾರೆ.
Related Articles
ಜಿಲ್ಲೆಯಲ್ಲಿ ಬೆ.9 ಕ್ಕೆ ಶೇ.9.4 ಮತದಾನ
ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಗಾಗಿ ಬುಧವಾರ ಬೆ. 9 ಗಂಟೆ ವರೆಗೆ ಶೇ. 9.4 ರಷ್ಟು ಮತದಾನವಾಗಿದೆ. ಜಿಲ್ಲೆಯ ಹಲವೆಡೆ ಮಂಗಳವಾರ ರಾತ್ರಿ ಅಲ್ಲಲ್ಲಿ ಮಳೆ ಸುರಿದಿದ್ದು, ಬಿಸಿಲ ತಾಪ ತಗ್ಗಿಸಿದೆ. ಹೀಗಾಗಿ ವಿಜಯಪುರ ನಗರ ಕ್ಷೇತ್ರ, ನಾಗಠಾಣ ಕ್ಷೇತ್ರದ ನಾಗಠಾಣ, ಇಂಡಿ ಕ್ಷೇತ್ರದ ಅಥರ್ಗಾ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಿಗ್ಗೆಯೇ ಬಿರುಸಿನ ಮತದಾನ ಕಂಡು ಬಂತು.