ಮಂಗಳೂರು: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು ಅಂತಿಮ ಮತದಾರರ ಪಟ್ಟಿಗಳನ್ನು ಗುರುವಾರವೇ ಮತದಾರರ ನೋಂದಣಾಧಿಕಾರಿ ಕಚೇರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿ ಹಾಗೂ ಎಲ್ಲ ಮತಗಟ್ಟೆಗಳಲ್ಲಿ ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
Advertisement
9.11.2022ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಹಕ್ಕು, ಆಕ್ಷೇಪಗಳ ಸೀÌಕಾರದ ಬಳಿಕ ವಿಶೇಷ ನೋಂದಣಿ ಅಭಿಯಾನ ನಡೆದಿದ್ದು ಗುರುತು ಚೀಟಿ ವಿತರಣೆಯೂ ಪ್ರಗತಿಯಲ್ಲಿದೆ. ವಿಶೇಷ ಪರಿಷ್ಕರಣೆ ಮುಕ್ತಾಯಗೊಂಡಿದ್ದರೂ ನಿರಂತರ ಪರಿಷ್ಕರಣೆ ಎಂದಿನಂತೆ ಮುಂದುವರಿಯಲಿದೆ ಎಂದರು.
Related Articles
ಅಭಿಯಾನದ ಭಾಗವಾಗಿ ಈಗಾಗಲೇ ಸೃಜಿಸಲಾಗಿರುವ ಎಪಿಕ್ ಕಾರ್ಡ್‌ಗಳನ್ನು ಸೀ³ಡ್ ಪೋಸ್ಟ್ ಮೂಲಕ ಮತದಾರರ ಮನೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ, 16099 ಗುರುತು ಚೀಟಿ ಮುದ್ರಣಕ್ಕೆ ಹೋಗಿದ್ದು, ಅದರಲ್ಲಿ 15760 ಸಿಕ್ಕಿದೆ, 14610 ಈಗಾಗಲೇ ವಿತರಣೆ ಕೂಡಾ ಆಗಿದೆ.
Advertisement
ಆಧಾರ್ ಜೋಡಣೆಮತದಾರರ ಗುರುತುಚೀಟಿಯನ್ನು ಆಧಾರ್ ಜೊತೆ ಜೋಡಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ನಡೆದಿದೆ, 12,46,710 ಮತದಾರರು ಈಗಾಗಲೇ ಆಧಾರ್ ಜೊತೆ ಜೋಡಿಸಿದ್ದಾರೆ ಎಂದ ಡಿಸಿ, ಚುನಾವಣಾ ಆಯೋಗದ ಆದೇಶದಂತೆ ಆಧಾರ್ ಜೋಡಣೆ ಕಡ್ಡಾಯವಾಗಿರುವುದಿಲ್ಲ ಎಂದೂ ಸ್ಪಷ್ಟಪಡಿಸಿದರು. ಚುನಾವಣಾ ಆಯೋಗದ ಗುರಿ ಸಾಧನೆ
ಚುನಾವಣಾ ಆಯೋಗ ನಮ್ಮ ಜಿಲ್ಲೆಗೆ ವಿಶೇಷ ಪರಿಷ್ಕರಣ ಅಭಿಯಾನದಲ್ಲಿ 17,40,515 ಮತದಾರರ ಗುರಿ ನೀಡಿದ್ದು, ಈಗ ಶೇ 99.84ರಷ್ಟು ಗುರಿಸಾಧಿಸುವ ಮುಖೇನ 17,37,688 ಮಂದಿಯನ್ನು ಸೇರ್ಪಡೆ ಮಾಡಿದಂತಾಗಿದೆ ಎಂದು ಡಿಸಿ ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ಮೋಹನ್ ಹಾಜರಿದ್ದರು.
**
ಉಡುಪಿ: 10.16 ಲಕ್ಷ ಮತದಾರರು
ಉಡುಪಿ: ಚುನಾವಣೆ ಆಯೋಗದ ನಿರ್ದೇಶನದಂತೆ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ವಿವಿಧ ರಾಜಕೀಯ ಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 2023 ಜ.1ರ ಅರ್ಹತಾ ದಿನಾಂಕವನ್ನಾಗಿ ಟ್ಟುಕೊಂಡು ಐದು ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಜ.5ರಂದು ಎಲ್ಲ ಮತಗಟ್ಟೆಗಳಲ್ಲಿ, ಉಪ ವಿಭಾಗೀಯ, ತಾಲೂಕು ಕಚೇರಿ, ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದರು. ಕ್ಷೇತ್ರವಾರು ಮತದಾರರು
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,12,126 ಪುರುಷರು, 1,17,421 ಮಹಿಳೆಯರು, 3 ಲಿಂಗತ್ವ ಅಲ್ಪಸಂಖ್ಯಾಕರು ಸೇರಿದಂತೆ 2,29,550 ಮತದಾರರಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ 98,224 ಪುರುಷರು, 1,06,298 ಮಹಿಳೆಯರು, 3 ಲಿಂಗತ್ವ ಅಲ್ಪಸಂಖ್ಯಾಕರು ಸೇರಿ 2,04,525 ಮತದಾರರಿದ್ದಾರೆ. ಉಡುಪಿ ಕ್ಷೇತ್ರದಲ್ಲಿ 1,02,192 ಪುರುಷರು, 1,09,439 ಮಹಿಳೆಯರು ಸೇರಿ 2,11,631 ಮತದಾರರಿದಾರೆ. ಕಾಪು ಕ್ಷೇತ್ರದಲ್ಲಿ 88,114 ಪುರುಷರು, 95,968 ಮಹಿಳೆಯರು, 6 ಲಿಂಗತ್ವ ಅಲ್ಪಸಂಖ್ಯಾಕರು ಸೇರಿ 1,84,088 ಮತದಾರರಿದ್ದಾರೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 89,404 ಪುರುಷರು, 97,047 ಮಹಿಳೆಯರು ಸೇರಿ 1,86,451 ಮತದಾರರಿದ್ದಾರೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಂದ 4,90,060 ಪುರುಷರು, 5,26173 ಮಹಿಳೆಯರು, 12 ಲಿಂಗತ್ವ ಅಲ್ಪಸಂಖ್ಯಾಕರು ಸೇರಿ 10,16,245 ಮತದಾರರಿದ್ದಾರೆ ಎಂದರು. 16 ಸಾವಿರ ಹೊಸ ಮತದಾರರು
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಅವಧಿಯಲ್ಲಿ ಹೊಸದಾಗಿ 16,827 ಮತದಾರರು ಸೇರ್ಪಡೆಯಾದರೆ, 5783 ಮತದಾರರನ್ನು ತೆಗೆದುಹಾಕಲಾಗಿದೆ. 13,321 ತಿದ್ದುಪಡಿ ಹಾಗೂ ವರ್ಗಾವಣೆಗೊಳಿಸಲಾಗಿದೆ. ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಸಂದರ್ಭದಲ್ಲಿ 13,816 ಯುವ ಮತದಾರರು ಹಾಗೂ 11,331 ವಿಶೇಷ ಚೇತನರು ನೋಂದಣಿಯಾಗಿದ್ದಾರೆ ಎಂದರು. ಸಹಾಯವಾಣಿ
1950 ಸಂಖ್ಯೆಗೆ ಕರೆಮಾಡಿ ಮತದಾರರು ಪಟ್ಟಿ ಪರಿಷ್ಕರಣೆ ಸಹಿತ ಚುನಾವಣೆ ಸಂಬಂಧಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಮತದಾರರ ದಿನ
ಜ. 25ರಂದು ರಾಷ್ಟ್ರೀಯ ಮತದಾರರ ದಿನಾಚರಣೆಯು ಅಜ್ಜರಕಾಡು ಪುರಭವನದಲ್ಲಿ ನಡೆಯುತ್ತಿದ್ದು, ಅದೇ ರೀತಿಯಲ್ಲಿ ತಾಲೂಕು ಮತ್ತು ಮತಗಟ್ಟೆಗಳ ವ್ಯಾಪ್ತಿಯಲ್ಲಿ ನಡೆಯಲಿದೆ ಎಂದರು. ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್., ವಿವಿದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.