Advertisement

ಮತದಾರ ಪಟ್ಟಿ: ಸಿಬ್ಬಂದಿ ನೋಂದಣಿ ಕಡ್ಡಾಯ

12:01 PM Oct 07, 2019 | Suhan S |

ಚಿಂಚೋಳಿ: ತಾಲೂಕಿನ ಎಲ್ಲ ಇಲಾಖೆ ಅ ಧಿಕಾರಿಗಳು, ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರ ಹೆಸರನ್ನು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಬೇಕು ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಅ.15ರೊಳಗೆ ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಬಿ. ಶರತ್‌ ಸೂಚಿಸಿದರು.

Advertisement

ತಹಶೀಲ್ದಾರ್‌ ಕಚೇರಿ ಸಭಾಂಗಣದಲ್ಲಿ ರವಿವಾರ ತಾಲೂಕು ಮಟ್ಟದ ಅಧಿ ಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಾಲೇಜು ಮತ್ತು ವಿದ್ಯಾರ್ಥಿಗಳ ಪಾಲಕರು, ಶಿಕ್ಷಕರು, ಪೌರ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರು, ಪತ್ರಕರ್ತರ ಕುಟುಂಬ ಸದಸ್ಯರ ಬಗ್ಗೆ ಸರ್ವೇ ಮಾಡಿಸಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು ಎಂದು ಹೇಳಿದರು. ರಾಜ್ಯ ಚುನಾವಣಾ ಆಯೋಗ ಹೊಸದಾಗಿ ಎನ್‌ವಿಎಸ್‌ಒ

ವೆಬ್‌ಸೈಟ್‌ ಪ್ರಾರಂಭಿಸಿದೆ. ಮತದಾರರು ಆನ್‌ಲೈನ್‌ ಮೂಲಕ ಆಧಾರ್‌ ಕಾರ್ಡ್‌ ಸಂಖ್ಯೆ ಮತ್ತು ಮತದಾರರ ಗುರುತಿನ ಚೀಟಿ ಬಳಸಿಕೊಂಡು ಮತದಾರರ ಪಟ್ಟಿಯನ್ನು ಪರಿಶೀಲಿಸಬಹುದು ಎಂದರು.

ತಾಲೂಕು ಚುನಾವಣಾ ನೋಡಲ್‌ ಅಧಿ ಕಾರಿ ಸಂತೋಷ ಸಪ್ಪಂಡಿ ಮಾತನಾಡಿ, ತಾಲೂಕಿನಲ್ಲಿ ಒಟ್ಟು 1,94,727 ಮತದಾರರಿದ್ದಾರೆ. ಇದರಲ್ಲಿ 20,451 ನೋಂದಣಿ ಪರಿಷ್ಕರಣೆ ಆಗಿದೆ. ಇನ್ನು ನೋಂದಣಿ ಕಾರ್ಯ ಪ್ರಗತಿಯಲ್ಲಿದೆ ಎಂದರು. ಮುಖ್ಯಾ ಧಿಕಾರಿ ಅಭಯಕುಮಾರ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ಒಟ್ಟು 14 ಸಾವಿರ ಮತದಾರರಿದ್ದು, ಇದರಲ್ಲಿ 12,200 ಡಾಟಾ ಎಂಟ್ರಿ ಮಾಡಲಾಗಿದೆ. ಎಲ್ಲ ವಾರ್ಡುಗಳಿಗೆ ಭೇಟಿ ನೀಡಿ ಡಾಟಾ ಎಂಟ್ರಿ ಮಾಡುವುದಕ್ಕಾಗಿ 18 ಸಿಬ್ಬಂದಿ ನಿಯೋಜಿಸಲಾಗಿದೆ.ಪೌರ ಕಾರ್ಮಿಕರ ಮತ್ತು ಸಿಬ್ಬಂದಿಗಳ

ನೋಂದಣಿ ಮಾಡಲಾಗಿದೆ ಎಂದರು. ಸಭೆಗೆ ಗೈರಾದ ಬಿಇಒ ನಿಂಗಪ್ಪ ಸಿಂಪಿ, ಬಿಆರ್‌ಸಿ ಅ ಧಿಕಾರಿ ರಾಚಪ್ಪ ಭದ್ರಶೆಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ನೋಟಿಸ್‌ ಜಾರಿ

Advertisement

ಮಾಡುವಂತೆ ತಹಶೀಲ್ದಾರ್‌ ಪಂಡಿತ ಬೀರಾದಾರ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಗ್ರೇಡ್‌ 2 ತಹಶೀಲ್ದಾರ್‌ ಮಾಣಿಕಪ್ಪ ಧತ್ತರಗಿ, ತಾ.ಪಂ ಇಒ ಅನೀಲಕುಮಾರ ರಾಠೊಡ, ಸಮಾಜ ಕಲ್ಯಾಣಾ ಧಿಕಾರಿ ಪ್ರಭುಲಿಂಗ ಬುಳ್ಳಿ, ತಾಲೂಕು ಆರೋಗ್ಯಾಧಿಕಾರಿ ಡಾ|ಮಹಮ್ಮದ್‌ ಗಫಾರ, ಬಿಸಿಎಂ ಅ ಧಿಕಾರಿ ಶರಣಬಸಪ್ಪ ಪಾಟೀಲ,ನಾಗೇಶ ಭದ್ರಶೆಟ್ಟಿ, ಎಇಇ ಮಹ್ಮದ ಅಹೆಮದ, ಎಇಇ ಬಸವರಾಜ ನೇಕಾರ, ಎಇಇ ಶಿವಶರಣಪ್ಪ ಕೇಸ್ವಾರ, ಪ್ರಭಾರ ಸಿಡಿಪಿಒ ಪರಿಮಳ, ಮಲ್ಲಿಕಾರ್ಜುನ ಪಾಲಾಮೂರ, ಜಯಪ್ಪ ಚಾಪೆಲ್‌, ರೇವಣಸಿದ್ದಪ್ಪ ದಂಡಿನ್‌, ವೆಂಕಟೇಶ ದುಗ್ಗನ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next