Advertisement

ಮತದಾರರ ಪಟ್ಟಿ : ಸಂಕ್ಷಿಪ್ತ ಪರಿಷ್ಕರಣೆ

12:29 AM Aug 22, 2020 | mahesh |

ಮಂಗಳೂರು: ಭಾರತ ಚುನಾವಣ ಆಯೋಗವು ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2021 ವೇಳಾಪಟ್ಟಿಯನ್ನು ಹೊರಡಿಸಿದೆ. ಮತದಾರರ ಪಟ್ಟಿ ಪೂರ್ವ ಪರಿಷ್ಕರಣೆ ಚಟುವಟಿಕೆಗಳು ಆಗಸ್ಟ್‌ 10ರಿಂದ ನವೆಂಬರ್‌ 15ರ ವರೆಗೆ ನಡೆಯಲಿದೆ. ಕರಡು ಮತದಾರರ ಪಟ್ಟಿಯ ಪ್ರಕಟನೆ ನವೆಂಬರ್‌ 16ಕ್ಕೆ ಆಗಲಿದ್ದು ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್‌ 16ರಿಂದ ಡಿಸೆಂಬರ್‌ 15ರ ವರೆಗೆ ಸ್ವೀಕರಿಸಲಾಗುವುದು. ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ 2021ರ ಜನವರಿ 5ಕ್ಕೆ ಆಗಲಿದ್ದು ಅಂತಿಮ ಮತದಾರರ ಪಟ್ಟಿ ಜನವರಿ 15ರಂದು ಪ್ರಕಟಗೊಳ್ಳಲಿದೆ.

Advertisement

ಮತದಾರರ ಪಟ್ಟಿ ಸೇರ್ಪಡೆಗೆ ಅಗತ್ಯವಿರುವ ದಾಖಲೆಗಳು:
ವಯಸ್ಸಿನ ಬಗ್ಗೆ ದಾಖಲೆಗಳು: ಶಾಲಾ ಪ್ರಮಾಣ ಪತ್ರ /ಜನನ ಪ್ರಮಾಣ ಪತ್ರ,/ಆಧಾರ್‌ ಕಾರ್ಡ್‌/ ಪಾಸ್‌ಪೋರ್ಟ್‌, ಎಸೆಸೆಲ್ಸಿ /ಪಿಯುಸಿ ಅಂಕಪಟ್ಟಿ, ಪಾನ್‌ ಕಾರ್ಡ್‌/ ವೈದ್ಯಕೀಯ ಪ್ರಮಾಣ ಪತ್ರ.

ವಾಸಸ್ಥಳದ ಬಗ್ಗೆ ದಾಖಲೆಗಳು: ಪಡಿತರ ಚೀಟಿ/ ಗ್ಯಾಸ್‌ ಸಿಲಿಂಡರ್‌ ಸ್ವೀಕೃತಿ ರಶೀದಿ/ವಿದ್ಯುತ್‌ ಬಿಲ್‌ ಪಾವತಿ/ ಬ್ಯಾಂಕ್‌ ಪಾಸ್‌ಬುಕ್‌/ ಪಾಸ್‌ ಪೋರ್ಟ್‌/ ವಾಹನ ಚಾಲನ ಪರವಾನಿಗೆ ಪ್ರತಿ/ ಬಾಡಿಗೆ ಕರಾರು ಪತ್ರ ಹಾಗೂ ಇನ್ನಿತರ ದಾಖಲೆಗಳು. ಒಂದು ಪಾಸ್‌ ಪೋರ್ಟ್‌ ಅಳತೆಯ ಭಾವಚಿತ್ರ.

ಅರ್ಜಿ ನಮೂನೆಗಳು
ಅರ್ಜಿ ನಮೂನೆ-6: 18 ವರ್ಷ ಪೂರೈಸಿದ ಹೊಸ ಮತದಾರರು ಹಾಗೂ ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೂಂದೆಡೆ ವಾಸಸ್ಥಳ ಬದಲಾಯಿಸಿದವರು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲು.

ನಮೂನೆ-6ಎ: ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆ ಮಾಡಲು,. ನಮೂನೆ-7: ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲು. ನಮೂನೆ-8: ಹೆಸರು, ತಂದೆಯ ಹೆಸರು, ಮನೆ ವಿಳಾಸ, ವಯಸ್ಸಿಗೆ ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದ ದೋಷಗಳಿದ್ದರೆ ಸರಿಪಡಿಸಿಕೊಳ್ಳಲು, ನಮೂನೆ-8ಎ: ಒಂದೇ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಿದ ಸಂದರ್ಭದಲ್ಲಿ ಸಲ್ಲಿಸಬೇಕಿರುವ ಅರ್ಜಿ.

Advertisement

ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿರುವ ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಬಹುದು. ತಮ್ಮ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಲ್ಲಿ ಪರಿಶೀಲಿಸಬಹುದು. ವೆಬ್‌ಪೋರ್ಟಲ್‌ www.ceokarnataka.kar.nic.in ಮತ್ತು www.nvsp.in, ಮತದಾರರ ಸಹಾಯವಾಣಿ 1950 ಸಂಖ್ಯೆ ಕರೆಮಾಡಿ ಮಾಹಿತಿ ಪಡೆಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next