Advertisement

ಮತದಾರ ಪಟ್ಟಿ ಪರಿಷ್ಕರಣೆ ಆರಂಭ

01:34 PM Sep 17, 2021 | Team Udayavani |

ಚಿಕ್ಕಮಗಳೂರು: ಕೇಂದ್ರ ಚುನಾವಣಾಆಯೋಗದ ನಿರ್ದೇಶನದಂತೆ 2021-22ನೇಸಾಲಿಗಾಗಿ ಜಿಲ್ಲೆಯ ಮತದಾರ ವಿಶೇಷಪರಿಷ್ಕರಣೆ ಆರಂಭವಾಗಿದ್ದು ಹೊಸಮತದಾರರ ಸೇರ್ಪಡೆ ತಿದ್ದುಪಡಿ, ಸ್ಥಳಬದಲಾವಣೆ ಸೇರಿದಂತೆ ವಿವಿಧ ಹಕ್ಕು ಮತ್ತುಆಕ್ಷೇಪಣೆಗಳಿಗಾಗಿ ಅರ್ಹ ಮತದಾರರನಿಗ ದಿತ ಅರ್ಜಿ ನಮೂನೆಯನ್ನುಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಧಿಕಾರಿಕೆ.ಎನ್‌. ರಮೇಶ್‌ ತಿಳಿಸಿದ್ದಾರೆ.

Advertisement

ಗುರುವಾರ ನಗರದ ಜಿಲ್ಲಾ ಧಿಕಾರಿಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿವಿಶೇಷ ಪರಿಷ್ಕರಣೆ ಕುರಿತು ರಾಜಕೀಯಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಅವರುಮಾತನಾಡಿದರು.ಸಾರ್ವಜನಿಕರಿಂದ ಸ್ವೀಕೃತವಾಗಿರುವಅರ್ಜಿ 06, 07, 08, ಮತ್ತು 08 (ಎ) ನಮೂನೆಗಳ ನ್ನು ಪರಿಶೀಲಿಸಿ ಪೂರಕಮತದಾರರ ಕರಡು ಪ್ರತಿಯನ್ನುನ.8ರಂದು ಪ್ರಕಟಿಸಲಾಗುವುದು. ನಂತರನ.1 ರಿಂದ ನ.30ರ ವರೆಗೆ ಮತದಾರರಪಟ್ಟಿಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನುಆಹ್ವಾನಿಸಲಾಗುತ್ತದೆ.

ತದನಂತರ 2021ರನ.7, ನವೆಂಬರ್‌ 14, ನ.21 ಹಾಗೂನ.28 ಭಾನುವಾರದಂದು ವಿಶೇಷಆಂದೋಲನ ಕೈಗೊಂಡು ಮತದಾರರು 2021 ಡಿ.20 ರೊಳಗೆ ಎಲ್ಲಾ ಆಕ್ಷೇಪಣೆ,ವಿಲೇವಾರಿ ಮಾಡಲಾಗುತ್ತದೆ. ಚುನಾವಣಾಆಯೋಗದಿಂದ ಅನುಮತಿ ಪಡೆದುಕೊಂಡು2022 ಜ.5ರಂದು ಅಂತಿಮ ಮತದಾರರಪಟ್ಟಿ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ರಾಜಕೀಯ ಪಕ್ಷಗಳ ಮುಖಾಂತರ ತಮ್ಮಕ್ಷೇತ್ರಗಳಲ್ಲಿ ಕಾನೂನು ರೀತಿಯಲ್ಲಿ ಅರ್ಹಮತ ದಾರರನ್ನು ಗುರುತಿಸಿ ಮತದಾರರಪಟ್ಟಿಗೆ ಸೇರಿಸಲು ತಮ್ಮ ಬಿಎಲ್‌ಒಗಳಿಗೆಸಹಕರಿಸುವಂತೆ ಮನವಿ ಮಾಡಿದರು.ಅಪರ ಜಿಲ್ಲಾ ಧಿಕಾರಿ ಬಿ.ಆರ್‌. ರೂಪಇತರೆ ರಾಜಕೀಯ ಪಕ್ಷಗಳ ಮುಖಂಡರುಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next