ನವದೆಹಲಿ: ದೇಶದಲ್ಲಿ ಡಿಜಿಟಲ್ ಇಂಡಿಯಾಕ್ಕೆ ಹೆಚ್ಚು ಒತ್ತು ನೀಡುವ ಕಾರ್ಯ ಆರಂಭವಾಗಿದ್ದು, ಈ ನಿಟ್ಟಿನಲ್ಲಿ 2021ರಲ್ಲಿ ಆಧಾರ್ ಕಾರ್ಡ್ ರೀತಿ ವೋಟರ್ ಐಡಿ ಕೂಡಾ ಡಿಜಿಟಲ್ ಆಗುವ ಸಾಧ್ಯತೆ ಇದ್ದಿರುವುದಾಗಿ ಮಾಧ್ಯಮದ ವರದಿಗಳು ತಿಳಿಸಿವೆ.
ನ್ಯೂಸ್ 18 ವರದಿ ಪ್ರಕಾರ, ಕೇಂದ್ರ ಚುನಾವಣಾ ಆಯೋಗ ಪ್ರಸ್ತುತ ಇರುವ ವೋಟರ್ ಐಡಿಯನ್ನು ಡಿಜಿಟಲ್ ಆಗಿ ಪರಿವರ್ತಿಸುವ ಸಿದ್ಧತೆಯಲ್ಲಿದೆ ಎಂದು ಹೇಳಿದೆ. ಮತದಾರರು ತಮ್ಮ ಫೋಟೋ ಗುರುತಿನ ಕಾರ್ಡ್ (ಇಪಿಐಸಿ) ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಅವಕಾಶವಿದೆ ಎಂದು ಹೇಳಿದೆ.
ಮೂಲಗಳು ತಿಳಿಸಿರುವಂತೆ 2021ರಲ್ಲಿ ಐದು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಡಿಜಿಟಲ್ ವೋಟರ್ ಐಟಿ ಮತದಾರರಿಗೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದೆ.
ಇದನ್ನೂ ಓದಿ:ಫಿಟ್ ನೆಸ್ ಟೆಸ್ಟ್ ನಲ್ಲಿ ತೇರ್ಗಡೆಯಾದ ರೋಹಿತ್: ಆಸೀಸ್ ಗೆ ಹಾರಲಿದ್ದಾರೆ ಹಿಟ್ ಮ್ಯಾನ್
ವರದಿಯ ಪ್ರಕಾರ, ಡಿಜಿಟಲ್ ಐಡಿಗಾಗಿ ಚುನಾವಣಾ ಆಯೋಗ ಸಿದ್ದತೆ ನಡೆಸುತ್ತಿದೆ. ಹೊಸದಾಗಿ ದಾಖಲಾದ ಮತದಾರರು ಸ್ವಯಂಚಾಲಿತವಾಗಿ ಡಿಜಿಟಲ್ ಐಡಿ ಕಾರ್ಡ್ ಪಡೆಯಲಿದ್ದಾರೆ. ಉಳಿದ ಮತದಾರರು ವೋಟರ್ ಹೆಲ್ಪ್ ಲೈನ್ ಆ್ಯಪ್ ಮೂಲಕ ಕೆಲವು ಮಾಹಿತಿ ನೀಡುವ ಮೂಲಕ ವೋಟರ್ ಐಡಿ ಪಡೆದುಕೊಳ್ಳಲು ಅವಕಾಶವಿದೆ ಎಂದು ವಿವರಿಸಿದೆ.