Advertisement

ವೋಟರ್‌ ಹೆಲ್ಪ್ ಲೈನ್‌: ಚನ್ನರಾಯಪಟ್ಟಣ ಫ‌ಸ್ಟ್‌

06:08 PM Dec 06, 2019 | Suhan S |

ಚನ್ನರಾಯಪಟ್ಟಣ: 18 ವರ್ಷ ತುಂಬಿದ ಅರ್ಹ ಮತದಾರರ ಪಟ್ಟಿಗೆ  ಸೇರ್ಪಡೆ ಸೇರಿದಂತೆ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಇದೆಯಾ ಅಥವಾ ಇಲ್ಲವಾ ಇದ್ದರೂ ತಿದ್ದುಪಡಿಗಳು ಏನು ಇಲ್ಲದೆ ಸರಿಯಾಗಿದೆಯಾ ಎಂಬುದನ್ನು ಸ್ವತಃ ಮತದಾರರೇ ಖಾತ್ರಿ ಪಡಿಸಿಕೊಳ್ಳುವ ವೋಟರ್‌ ಹೆಲ್ಪ್ಲೈನ್‌ ಬಳಕೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Advertisement

ಡಿಜಿಟಲ್‌ಗೆ ಒಪ್ಪಿಕೊಳ್ಳುತ್ತಿಲ್ಲ: ಇ-ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳೂ ಡಿಜಿಟಲೀಕರಣಗೊಳ್ಳುತ್ತಿರುವಾಗ ಎಲ್ಲರ ಕೈಲೂ ಸ್ಮಾರ್ಟ್‌ ಮೊಬೈಲ್‌ ಇದ್ದರೂ ವೋಟರ್‌ ಹೆಲ್ಪ್ಲೈನ್‌ ಮೂಲಕ ಮತದಾರರ ಮಟ್ಟಿಯಲ್ಲಿನ ತನ್ನ ಹೆಸರು ಇದೆಯೇ, ಇಲ್ಲವೆ ಎಂಬುದನ್ನು ಜಿಲ್ಲೆಯಲ್ಲಿ ಪರಿಶೀಲಿಸಿಕೊಂಡ ಮತದಾರರ ಸಂಖ್ಯೆಮಾತ್ರ ಶೇ.1 ರಷ್ಟು ಅದರಲ್ಲಿ ಕೆಲ ತಾಲೂಕಿನಲ್ಲಿ ಶೇ.0.5 ರಷ್ಟಿಗಿಂತಲೂ ಕಡಿಮೆ ಇದೆ.

ಶೇಕಡವಾರು ವಿವರ: ಭಾರತೀಯ ಚುನಾವಣಾ ಆಯೋಗವು ಸೆ.1 ರಿಂದ ನ.30ರ ವರೆಗೆ ವಿಶೇಷವಾಗಿ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನವನ್ನು ಪ್ರತಿ ತಾಲೂಕಿನಲ್ಲಿ ಚುನಾವಣಾ ಶಾಖೆ ನಡೆಸಿದ್ದು ಜಿಲ್ಲೆಯಲ್ಲಿ ಚನ್ನರಾಯಪಟ್ಟಣ ಶೇ.99.98ರಷ್ಟು ಕಾರ್ಯ ಸಾಧನೆ ಮಾಡಿ ಮೊದಲ ಸ್ಥಾನ ಪಡೆದರೆ, ಹೊಳೆನರಸೀಪುರ ಶೇ.99.69 ರಷ್ಟು ಮುಕ್ತಾಯ ಮಾಡಿದೆ, ಹಾಸನ 99.22, ಅರಕಲಗೂಡು 97.73, ಸಕಲೇಶಪುರ 97.56, ಅರಸೀಕೆರೆ 97.33, ಬೇಲೂರು 96.62 ರಷ್ಟು ಮಂದಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಮುಗಿಸಿವೆ.

ಪರಿಷ್ಕರಣೆ ಆಗದೆ ಉಳಿತ ಮತದಾರರ ಸಂಖ್ಯೆ: ಭಾರತೀಯ ಚುನಾವಣಾ ಆಯೋಗವು ಕೋಟ್ಯಂತರ ರೂ. ವೆಚ್ಚ ಮಾಡಿ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ ಇದರಿಂದ ಜಿಲ್ಲೆಯಲ್ಲಿ ಏಳು ವಿಧಾನ ಸಭಾ ಕ್ಷೇತ್ರದಲ್ಲಿ 24187 ಮಂದಿ ಮತದಾರರ ಪರಿಷ್ಕರಣೆಯಾಗಿಲ್ಲ. ಶ್ರವಣಬೆಳಗೊಳ ವಿಧಾನ ಸಭಾ ಕ್ಷೇತ್ರದಲ್ಲಿ 2,016,38 ಮತದಾರರಲ್ಲಿ 2,015,99 ಮಂದಿ ಮತದಾರರ ಪರಿಷ್ಕರಣೆ ಮಾಡಿ 39 ಮಂದಿ ಬಾಕಿ ಉಳಿಸಿದ್ದಾರೆ. ಇದೇ ರೀತಿ ಅರಸೀಕರೆ ಕ್ಷೇತ್ರದಲ್ಲಿ 2,10,537 ರಲ್ಲಿ 2,04,923 ಪರಿಷ್ಕರಣೆ ಗೊಂದು 5,614 ಮಂದಿ ಬಾಕಿ ಇದ್ದಾರೆ, ಬೇಲೂರು ಕ್ಷೇತ್ರದಲ್ಲಿ 1,89,406 ಮತದಾರರಲ್ಲಿ 1,83,009 ಪರಿಷ್ಕರಣೆ ಮಾಡಿ 6,397 ಉಳಿದಿದ್ದಾರೆ. ಹಾಸನ 2,16,267 ರಲ್ಲಿ 2,14,581 ಪರಿಷ್ಕರಣೆಗೊಂಡು 1686 ಬಾಕಿ, ಹೊಳೆನರಸೀಪುರ 2,12,620 ರಲ್ಲಿ 2,11,962 ಪರಿಷ್ಕರಣೆ ಆಗಿದ್ದು 658 ಬಾಕಿ ಇದ್ದಾರೆ, ಅರಕಲಗೂರು 2,19,578ರಲ್ಲಿ 2,14,585 ಮಾಡಿ 4993 ಬಾಕಿ, ಸಕಲೇಶಪುರ ಕ್ಷೇತ್ರದಲ್ಲಿ 1,97,049 ಮತದಾರರಲ್ಲಿ 1,92,249 ಮಂದಿ ಪರಿಷ್ಕರಣೆ ಮಾಡಿ 4800 ಮಂದಿ ಮತದಾರರ ಉಳಿದಿದ್ದಾರೆ.

90 ದಿವಸ ನಡೆಯ ಅಭಿಯಾನ: ಚುನಾವಣಾ ಆಯೋಗ 90 ದಿವಸ ಮತದಾರರ ಪಟ್ಟಿ ಪರಿಷ್ಕರಣೆ ಮಾಡಲು ಅಭಿಯಾನ ಪ್ರಾರಂಭಿಸಿದ್ದು ಮತಗಟ್ಟೆಅಧಿಕಾರಿಗಳು(ಬಿಎಲ್‌ಒ) ಮತ್ತು ತರಬೇತಿದಾರರು ಸುಮಾರು 90 ದಿವಸ ವಿಶೇಷ ಅಭಿಯಾನ ನಡೆಸಿದ್ದಾರೆ. ತಾಲೂಕಿನಲ್ಲಿ 271 ಬಿಎಲ್‌ಒಗಳು ಸರ್ಕಾರ ನಿಗದಿಪಡಿಸಿದ್ದ ದಿನಾಂಕದ ವರೆಗೆ ಶ್ರಮಿಸಿದ್ದರಿಂದ ತಾಲೂಕಿಗೆ ಪ್ರಥಮ ಸ್ಥಾನ ಬರುವಂತಾಗಿದ್ದು ಶೇ.99.98 ರಷ್ಟು ಕಾರ್ಯ ಸಾಧನೆ ಆಗಿದೆ.

Advertisement

ಪ್ರಚಾರ ಕೊರತೆ ವಿಎಫ್ಸಿ ಬಳಕೆ ಆಗಿಲ್ಲ: ಪ್ರತಿ ವಿಧಾನ ಸಭಾ ಕ್ಷೇತ್ರದಲ್ಲಿ ಪದವಿಪೂರ್ವ ಕಾಲೇಜು, ಪದವಿ ಕಾಲೇಜುಗಳು, ಐಟಿಐ ಕಾಲೇಜು, ಸಂತೆಗಳು, ಜಾತ್ರೆ, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಮಂದಿರ ಮಸೀದಿ ಹೀಗೆ ಹೆಚ್ಚು ಜನಸಂದಣಿ ಪ್ರದೇಶಗಳಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮೊಬೈಲ್‌ ಬಳಸಿ ವೋಟರ್‌ ಹೆಲ್ಪ್ಲೈನ್‌ ಮೂಲಕ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಪರಿಶೀಲಿಸಿಕೊಳ್ಳವ ಬಗ್ಗೆ ಪಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದ್ದರೆ ಯುವಸಮುದಾರ ತಮ್ಮ ಸ್ಮಾರ್ಟ್‌ ಪೋನ್‌ನಲ್ಲಿ ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವುದನ್ನು ಖಾತ್ರ ಮಾಡುತ್ತಿದ್ದಾರೆ ಆದರೆ ಜಿಲ್ಲೆಯ ಚುನಾವಣಾ ವಿಭಾಗ ಅರಿವು ಮೂಡಿಸುವಲ್ಲಿ ವಿಫ‌ಲವಾಗಿದೆ.

 

-ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next