ಕಾಸರಗೋಡು: ಲೋಕಸಭೆ ಚುನಾವಣೆ ಸಂಬಂಧ ಮತಯಂತ್ರಗಳ ವಿಧಾನಸಭೆ ಕ್ಷೇತ್ರ ಮಟ್ಟದ ರಾಂಡಮೈಸೇಷನ್ ಜಿಲ್ಲಾಧಿಕಾರಿ ಅವರ ಚೇಂಬರ್‌ನಲ್ಲಿ ನಡೆಯಿತು.
ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ| ಡಿ. ನಸಜಿತ್ ಬಾಬು ರಾಂಡಮೈಸೇಷನ್ ನಡೆಸಿದರು.
ಶೇ. 21 ಹೆಚ್ಚುವರಿ ಬ್ಯಾಲೆಟ್ ನಿಯಂತ್ರಣ ಯೂನಿಟ್‌ಗಳು, ಶೇ. 32 ವಿವಿ ಪ್ಯಾಟ್ ಮೆಷಿನ್ ಮಂಜೂರಾಗಿದೆ. ಪಡನ್ನಕ್ಕಾಡ್ ಸ್ಟಾಟ್‌ವೇರ್ ಹೌಸ್ ದಾಸ್ತಾನುಗೃಹದಲ್ಲಿ ಇರಿಸಲಾದ ಇ.ವಿ.ಎಂ.ಗಳು ರಾಜಕೀಯ ಪಕ್ಷ ಗಳ ಪ್ರತಿನಿಧಿಗಳ ಸಮಕ್ಷದಲ್ಲಿ ಮಂಡಲ ಮಟ್ಟದಲ್ಲಿ ವಿನ್ಯಾಸಗೊಳಿಸಲಾಗುವುದು.
ಪಡನ್ನಕ್ಕಾಡ್ ನೆಹರೂ ಕಾಲೇಜಿನ ಮತ್ತು ಕಾಸರಗೋಡು ಸರಕಾರಿ ಕಾಲೇಜಿನ ಸ್ಟಾÅಂಗ್ ರೂಂಗಳಲ್ಲಿ ಇರಿಸಲಾಗಿದೆ. ಬೂತ್ ಮಟ್ಟದ ವಿನ್ಯಾಸ ಎರಡನೇ ಹಂತದ ರಾಂಡಮೈಸೇಷನ್‌ನಲ್ಲಿ ನಡೆಸಲಾಗುವುದು.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳಾದ ಗೋವಿಂದನ್ ಪಳ್ಳಿಕಾಪಿಲ್, ಮೂಸಾ ಬಿ.ಚೆರ್ಕಳ, ಸದಾನಂದ ರೈ, ಸ್ವತಂತ್ರ ಪ್ರತಿನಿಧಿ ಕೆ.ನರೇಂದ್ರ ಕುಮಾರ್, ಚುನಾವಣೆ ವಿಭಾಗ ಸಹಾಯಕ ಜಿಲ್ಲಾಧಿಕಾರಿ ವಿ.ಪಿ.ಅಬ್ದುಲ್ ರಹಮಾನ್, ಗೋವಿಂದನ್ ರಾವಣೇಶ್ವರ, ಶ್ರೀಜಾ, ವಿನೋದ್ ಕುಮಾರ್ ಮೊದಲಾದವರು ಭಾಗವಹಿಸಿದರು.