Advertisement

ಜಿಲ್ಲಾಧಿಕಾರಿಗಳಿಂದ ಮತಯಂತ್ರ, ವಿವಿಪ್ಯಾಟ್‌ ಪರಿಶೀಲನೆ

05:27 PM Feb 26, 2018 | Team Udayavani |

ಯಾದಗಿರಿ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಿಂದ ಮತಯಂತ್ರಗಳು ಜಿಲ್ಲೆಗೆ ತರಲಾಗಿದ್ದು, ಸಿಸಿ ಕ್ಯಾಮರಾ, ಬಿಗಿ ಪೊಲೀಸ್‌ ಬಂದೋಬಸ್ತ್ನಲ್ಲಿ ಸುರಕ್ಷಿತವಾಗಿಡಲಾಗಿದೆ.

Advertisement

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಗೋದಾಮಿನಲ್ಲಿ 1500 ಬ್ಯಾಲೆಟ್‌ ಯೂನಿಟ್‌, 1300 ಕಂಟ್ರೋಲ್‌ ಯೂನಿಟ್‌ಗಳನ್ನು ಸಂಗ್ರಹಿಸಿಡಲಾಗಿದೆ. ಇನ್ನೂ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ವಿವಿ ಪ್ಯಾಟ್‌ ಬಳಸಲಾಗುತ್ತಿದೆ. ಈ ವಿವಿಪ್ಯಾಟ್‌ಗಳನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಚುನಾವಣಾ ಶಾಖೆಯಲ್ಲಿ ಸಂಗ್ರಹಿಸಿಡಲಾಗಿದೆ.

ಈ ಬಾರಿ ಚುನಾವಣೆಯಲ್ಲಿ ವಿವಿ ಪ್ಯಾಟ್‌ನಲ್ಲಿ ಮತದಾರರು ಯಾರಿಗೆ ಮತ ಹಾಕಿದ್ದೇವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬಹುದಾಗಿದೆ. ಬೆಂಗಳೂರಿನ ಜಾಲಹಳ್ಳಿ ಬಳಿಯಲ್ಲಿರುವ ಭಾರತ ಎಲೆಕ್ಟ್ರಿಕಲ್‌ ಲಿಮಿಟೆಡ್‌ ವತಿಯಿಂದ 1420 ಯಂತ್ರಗಳು ಜಿಲ್ಲೆಗೆ ಬಂದಿದ್ದು, ಪೊಲೀಸ್‌ ಸುರ್ಪದಿಯಲ್ಲಿ ಬಿಗಿ ಭದ್ರತೆ ನೀಡಲಾಗಿದೆ. ವಿವಿ ಪ್ಯಾಟ್‌ಗಳ ಭದ್ರತೆಗಾಗಿ ಮೂರು ಜನ ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಉತ್ತರ ಪ್ರದೇಶದಿಂದ ಬಂದಿರುವ ಮತ ಯಂತ್ರಗಳ ಭದ್ರತೆಗಾಗಿ ಆರು ಜನ ಪೊಲೀಸ್‌ ಸಿಬ್ಬಂದಿ ನೇಮಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ. 

ವಿಧಾನಸಭೆ ಚುನಾವಣೆಗಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಈಗಾಗಲೇ ಮತಯಂತ್ರಗಳು ಬಂದಿವೆ. ಶೀಘ್ರದಲ್ಲಿಯೇ ಭಾರತ ಎಲೆಕ್ಟ್ರಿಕಲ್‌ ಲಿಮಿಟೆಡ್‌ನ‌ ತಂಡದ ಸದಸ್ಯರು ಜಿಲ್ಲೆಗೆ ಆಗಮಿಸಲಿದ್ದು, ಜಿಲ್ಲೆಯ ವಿವಿಧ ಪಕ್ಷದ ರಾಜಕೀಯ ಮುಖಂಡರ ಸಮ್ಮುಖದಲ್ಲಿ ಮತಯಂತ್ರಗಳ ಪರಿಶೀಲನೆ ನಡೆಸಲಾಗುವುದು. ಕೆಟ್ಟು ಹೋಗಿರುವ ಮತಯಂತ್ರಗಳನ್ನು ತಿರಸ್ಕಾರ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜೆ. ಮುಂಜುನಾಥ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next