Advertisement
ನಗರದ ಕಲ್ಪತರು ಆಡಿಟೋರಿಯಂನಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಜಗತ್ತಿ ನಲ್ಲಿಯೇ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ 18 ವರ್ಷ ಪೂರ್ಣಗೊಂಡ ಪ್ರತಿ ಯೊಬ್ಬರು ಮತದಾನದ ಹಕ್ಕು ಪಡೆದಿರುತ್ತಾರೆ. ಅದನ್ನು ಯಾವುದೇ ಪ್ರಭಾವಕ್ಕೆ ಒಳಗಾಗದೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಚಲಾಯಿಸಬೇಕು. ಮತ ಚಲಾಯಿಸುವುದು ನಮ್ಮ ಹಕ್ಕು ಮತ್ತು ಕರ್ತವ್ಯವಾಗಿದ್ದು, ಚುನಾವಣಾ ಆಯೋಗ ಹಾಗೂ ಸಂವಿಧಾನದ ನಿಯಮಾವಳಿ, ಮಾರ್ಗಸೂಚಿ ಪರಿಪೂರ್ಣವಾಗಿ ಮನನ ಮಾಡಿಕೊಂಡು ಅವುಗಳ ಪಾವಿತ್ರ್ಯತೆ ಕಾಪಾಡಬೇಕು ಎಂದರು.
Related Articles
Advertisement
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಿ.ಆರತಿ ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಎಲ್ಲಾ ಹೋಬಳಿಗಳ ಮತಗಟ್ಟೆ ಅಧಿಕಾರಿಗಳನ್ನು ಅಭಿನಂದಿಸ ಲಾಯಿತು. ಮತದಾನದ ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿಕೊಡಲಾಯಿತು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ, ತಹಶೀಲ್ದಾರ್ ಹಾಗೂ ನಗರಸಭೆ ಸಿಬ್ಬಂದಿ ವರ್ಗ ದವರು, ಬಿಎಲ್‌ಒಗಳು, ಶಿಕ್ಷಕರು, ಮತದಾರರು ಭಾಗವಹಿಸಿದ್ದರು. ಉಪನ್ಯಾಸಕ ಮಹದೇವಯ್ಯ ನಿರೂಪಿಸಿ, ವಂದಿಸಿದರು.
ಪ್ರಾಮಾಣಿಕ ವ್ಯಕ್ತಿಗೆ ಮತ ಚಲಾಯಿಸಿ
ಕುಣಿಗಲ್: ಮತದಾನದ ಹಕ್ಕಿನ ಮಹತ್ವ ತಿಳಿದು ಪ್ರಾಮಾಣಿಕ ವ್ಯಕ್ತಿಗೆ ಮತ ಚಲಾಯಿಸಿ, ಆಯ್ಕೆ ಮಾಡುವ ಮೂಲಕ ದೇಶದಲ್ಲಿನ ಭ್ರಷ್ಟಾಚಾರ ತಡೆಗಟ್ಟ ಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಮ್ಮದ್ ಮೊಯುದ್ದೀನ್ ಸಲಹೆ ನೀಡಿದರು. ಪಟ್ಟಣದ ಕಂದಾಯ ಭವನದಲ್ಲಿ ಚುನಾವಣಾ ಆಯೋಗ ಹಾಗೂ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮತ ದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಭ್ರಷ್ಟಾಚಾರ ಇಳಿಮುಖವಾಗಿಲ್ಲ: ಚುನಾವಣಾ ಆಯೋಗದ ಪ್ರಕಾರ 2014ರಲ್ಲಿ ದೇಶದಲ್ಲಿ 86.68 ಕೋಟಿ ಮತದಾರರಿದ್ದಾರೆ. ಆದರೆ, ನೂರಕ್ಕೆ ನೂರಷ್ಟು ಮತದಾನ ದೇಶದಲ್ಲಿ ಎಲ್ಲೂ ನಡೆದಿಲ್ಲ, ಶೇ. 75 ರಷ್ಟು ಮಾತ್ರ ಮತದಾನವಾಗುತ್ತದೆ. ಮತದಾನದ ದಿನ ದಂದು ಪ್ರಜ್ಞಾವಂತರು ತಮ್ಮ ಹಕ್ಕು ಚಲಾಯಿಸದೆ ಕುಟುಂಬದೊಂದಿಗೆ ಪ್ರವಾಸ ಹೋಗುತ್ತಿರುವುದು ಮತದಾನ ಕಡಿಮೆಯಾಗಲು ಕಾರಣವಾಗಿದೆ. ಇದ ರಿಂದ ಪ್ರಾಮಾಣಿಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗದೇ ದೇಶದಲ್ಲಿ ಭ್ರಷ್ಟಾಚಾರ ಇಳಿಮುಖವಾಗಿಲ್ಲ ಎಂದು ವಿಷಾದಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶ ಜೆ.ಕೃಷ್ಣ ಮಾತ ನಾಡಿ, ದೇಶದ ಅಭಿವೃದ್ಧಿಯ ಹಿತ ದೃಷ್ಟಿಯಿಂದ ಮತ ದಾನ ಮಾಡಿ ಉತ್ತಮ ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳದಿದ್ದರೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಮಾನ ಮಾಡಿದಂತ್ತಾಗುತ್ತದೆ ಎಂದು ಹೇಳಿದರು. ತಹಶೀಲ್ದಾರ್ ವಿ.ಆರ್ ವಿಶ್ವನಾಥ್ ಪ್ರತಿಜ್ಞಾನ ವಿಧಿ ಬೋಧಿಸಿದರು. ಈ ವೇಳೆ ಯುವ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಕಿಶೋರ್‌ಕುಮಾರ್, ತಾಪಂ ಇಒ ಶಿವರಾಜಯ್ಯ, ಡಿವೈಎಸ್‌ಪಿ ಎಚ್.ಎಸ್.ರಾಮಲಿಂಗೇಗೌಡ, ಪುರಸಭೆ ಮುಖ್ಯಾಧಿಕಾರಿ ಆರ್.ರಮೇಶ್, ಬಿಇಒ ಎಸ್.ಆರ್.ಬಂಡಿವೀರಪ್ಪ, ಎಪಿಪಿ ರಘು ಇದ್ದರು.