ಕೊಪ್ಪಳ: ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆಯಲ್ಲಿ ಬಹುದೊಡ್ಡ ಹಗರಣ ನಡೆಯುತ್ತಿದೆ. ಇದರ ಬಗ್ಗೆ ನಾವೆಲ್ಲ ಜಾಗೃತರಾಗಬೇಕು. ಕೇವಲ ಬೆಂಗಳೂರು ಒಂದೇ ಅಲ್ಲ, ಎಲ್ಲ ಜಿಲ್ಲೆಯಲ್ಲಿಯೂ ನಡೆದಿದೆ. ನಮ್ಮೆಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಜಾಗೃತರಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಮತದಾರರ ಪಟ್ಟಿಯಲ್ಲಿ ನಮ್ಮ ಪರ ಇರುವ ಮತದಾರರನ್ನು ಡಿಲಿಟ್ ಮಾಡುವ ಕೆಲಸ ನಡೆದಿದೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ. ಬಿಜೆಪಿ ಗೆಲ್ಲಲು ನಮ್ಮ ಮತದಾರರನ್ನು ಕಡಿತಗೊಳಿಸುವ ಪ್ರಯತ್ನ ನಡೆಸಿದ್ದಾರೆ. ನಾವು ಏಷ್ಟು ಕೆಲಸ ಮಾಡಿದ್ದೇವೆ. ಮತದಾರರನ್ನು ಕಾಯುವುದು ಅಷ್ಟೇ ಕೆಲಸವಾಗಿದೆ. ಅಹಿಂದ ಮತದಾರರ ಕಡಿತ ವಿಚಾರದಲ್ಲಿ ಬಿಜೆಪಿ ಕಡಿತ ಮಾಡುವ ಪ್ರಯತ್ನ ನಡೆದಿದೆ ಎಂದರು.
ಸಿದ್ದರಾಮಯ್ಯ ಅವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವ ವಿಚಾರ, ಅಭ್ಯರ್ಥಿಗಳ ಘೋಷಣೆ ಮಾಡುವ ಅಧಿಕಾರ ಎಐಸಿಸಿಗೆ ಅಧಿಕಾರವಿದೆ. ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮಾಜಿ ಶಾಸಕರು ಇರುತ್ತಾರೆ. ಅವರನ್ನು ಬಿಡಲು ಆಗುವುದಿಲ್ಲ. ಹಾಗಾಗಿ ಅವರು ಹೇಳಿರುತ್ತಾರೆ. ಅಂತಿಮವಾಗಿ ಹೈಕಮಾಂಡ್ ಅಭ್ಯರ್ಥಿಗಳ ಘೋಷಣೆ ಮಾಡಲಿದೆ ಎಂದರು.
ಎಸ್‌ಸಿ, ಎಸ್‌ಟಿ ಮೀಸಲಾತಿಯಿಂದ ಬಿಜೆಪಿಗೆ ಮತ ಹೋಗುತ್ತವೆ ಎನ್ನುವುದು ಸರಿಯಲ್ಲ. ಬಿಜೆಪಿಯು ಜಾರಿ ಮಾಡಿರುವ ಎನ್‌ಇಪಿ, ಅಗ್ನಿಪಥದಿಂದ ಜನರಿಗೇ ಏಷ್ಟು ಅನ್ಯಾಯ ಮಾಡಿದ್ದಾರೆ ಎನ್ನುವುದುನ್ನು ಜನರ ಮುಂದೆ ಹೇಳುತ್ತೇವೆ. ಮೇ ವರೆಗೂ ನಮಗೆ ಅವಕಾಶವಿದೆ ಎಂದರು.
ಹಿಂದೂಪದ ಹೇಳಿಕೆ ವಿಚಾರದಲ್ಲಿ ಪರ ವಿರೋಧ ಇದ್ದೇ ಇರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇಳುವ ಹಕ್ಕು ಎಲ್ಲರಿಗು ಇರುತ್ತದೆ. ಅದಕ್ಕೆ ಪರ ವಿರೋಧ ಇದ್ದೆ ಇರುತ್ತವೆ. ಈಗ ಅದು ಮುಗಿದು ಹೋದ ಅಧ್ಯಾಯ. ಚಕ್ರವರ್ತಿ ಸೂಲಿಬೆಲೆಗೆ ಈಗಾಗಲೇ ಉತ್ತರ ಕೊಟ್ಟಿದ್ದೇನೆ. ಅವನೊಬ್ಬ ಸುಳ್ಳಿನ ಸರದಾರ. ಅವರು ಸುಳ್ಳು ಹೇಳುವುದರಲ್ಲಿ ಮೊದಲನೇ ವ್ಯಕ್ತಿ. ಅವರಿಗೆ ಸುಳ್ಳಿನ ವಿಶ್ವ ವಿದ್ಯಾಲಯದ ಕುಲಪತಿ ಎಂದು ಬಿರುದು ಕೊಟ್ಟಿದ್ದೇನೆ. ಆತನು ಹೇಳಿದ ಚಿನ್ನದ ರಸ್ತೆ ಏಲ್ಲಿವೆ ? ಬುಲೆಟ್ ಟ್ರೈನ್ ಎಲ್ಲಿದೆ ? ಡಾಲರ್ ಏಲ್ಲಿದೆ ? ಮನೆಯಿಂದಲೇ ಆಸ್ಪತ್ರೆಯ ರೋಗಿಗಳನ್ನು ಲ್ಯಾಪಟಾಪ್‌ನಲ್ಲೇ ನೋಡ್ತಾನಂತೆ ? ಅವೆಲ್ಲವುಗಳನ್ನು ಜನರು ನೋಡುತ್ತಿದ್ದಾರೆ ಎಂದರು.
ಈ ವೇಳೆ ಶಾಸಕ ರಾಘವೇಂದ್ರ ಹಿಟ್ನಾಳ, ಮುಖಂಡ ಕೆ.ಎಂ.ಸೈಯದ್ ಸೇರಿ ಇತರರಿದ್ದರು.