Advertisement

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

01:02 AM Apr 27, 2024 | Vishnudas Patil |

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ 14 ಕ್ಷೇತ್ರಗಳಿಗೆ ಶುಕ್ರವಾರ ಮತದಾನ ನಡೆಯಿತು. ಸಂಜೆ 7 ಗಂಟೆಯ ವೇಳೆಗೆ ಬಂದ ಮಾಹಿತಿ ಪ್ರಕಾರ 14 ಕ್ಷೇತ್ರಗಳಲ್ಲಿ ಶೇಕಡಾ 69.23 ರಷ್ಟು ಮತದಾನವಾಗಿದೆ.

Advertisement

ಬೆಂಗಳೂರಿನಲ್ಲಿ ಅರ್ಧಕ್ಕರ್ಧ ಮತದಾರರು ಮತಗಟ್ಟೆಗೆ ಬರಲು ಉತ್ಸಾಹ ತೋರದಿರುವುದು ಕಂಡು ಬಂದಿತು.ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಕಡಿಮೆ ಪ್ರಮಾಣದ 52.81 % ಮತದಾನ ನಡೆದಿದೆ. ಬೆಂಗಳೂರು ದಕ್ಷಿಣದಲ್ಲೂ 53.15 % ಮತದಾನ ನಡೆದಿದೆ. ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 54.42 %, ಹೈವೋಲ್ಟೇಜ್ ಬೆಂಗಳೂರು ಗ್ರಾಮಾಂತರದಲ್ಲಿ 67.29 % ಮತದಾನವಾಗಿದೆ ಎಂದು ವಿವರಗಳು ಲಭ್ಯವಾಗಿವೆ.

ಚಾಮರಾಜನಗರದಲ್ಲಿ 76.59 %, ಚಿಕ್ಕಬಳ್ಳಾಪುರದಲ್ಲಿ 76.82% , ಚಿತ್ರದುರ್ಗದಲ್ಲಿ 73.11% , ದಕ್ಷಿಣ ಕನ್ನಡದಲ್ಲಿ 77.43% , ಹಾಸನದಲ್ಲಿ 77.51 % , ಕೋಲಾರದಲ್ಲಿ 78.07% ಮತದಾನವಾಗಿದೆ.

ಮಂಡ್ಯದಲ್ಲಿ ಅತಿ ಹೆಚ್ಚು  81.48 % ಮತಗಳು ಚಲಾವಣೆಯಾಗಿರುವ ಬಗ್ಗೆ ವರದಿಯಾಗಿದೆ. ಮೈಸೂರು -ಕೊಡಗು 70.55 % , ತುಮಕೂರು 77.70 % ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 76.06 % ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಕೆಲವು ಕಡೆ ಸಣ್ಣ ಪುಟ್ಟ ಗಲಾಟೆಗಳು, ಚಾಮರಾಜ ನಗರದ ಮತಗಟ್ಟೆಯೊಂದರಲ್ಲಿ ಮತಗಟ್ಟೆ ಧ್ವಂಸಗೈದಿರುವ ಬಗ್ಗೆ ವರದಿಯಾಗಿದೆ.

Advertisement

ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ  13 ರಾಜ್ಯಗಳ 88 ಸ್ಥಾನಗಳಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ನಡೆದಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಮತಗಟ್ಟೆಗಳಲ್ಲಿ ಇವಿಎಂ ಮತ್ತು ವಿವಿಪ್ಯಾಟ್ ಯಂತ್ರಗಳನ್ನು ಸೀಲ್ ಮಾಡಲಾಗಿದೆ. ದೇಶದ ಸಂಜೆ 7 ಗಂಟೆ ವೇಳೆಗೆ ಒಟ್ಟಾರೆ ಶೇ.60.96ರಷ್ಟು ಮತದಾನವಾಗಿದೆ. ಸಂಜೆ 5 ಗಂಟೆಯವರೆಗೆ 77.53% ಮತದಾನದೊಂದಿಗೆ ತ್ರಿಪುರಾ ಮುನ್ನಡೆಯಲ್ಲಿದ್ದು ಉತ್ತರಪ್ರದೇಶದಲ್ಲಿ 52.74% ರಷ್ಟು ಕಡಿಮೆ ಮತದಾನವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next