Advertisement

ಮತ ಚಲಾವಣೆ ಪವಿತ್ರ ಕರ್ತವ್ಯ

12:30 AM Jan 28, 2019 | Team Udayavani |

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳಿರುವ ಹಿನ್ನೆಲೆಯಲ್ಲಿ ಮತ ಚಲಾವಣೆ ಅತ್ಯಂತ ಪವಿತ್ರ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Advertisement

ಪಾಕ್ಷಿಕ ಮನ್‌ ಕಿ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾವಣೆ ಮಾಡದ ಪ್ರತಿ ವ್ಯಕ್ತಿಗೂ ಆ ಬಗ್ಗೆ ಬೇಸರ ಉಂಟಾಗಬೇಕು ಎಂದಿದ್ದಾರೆ.

ಇದೇ ವೇಳೆ, ಚುನಾವಣೆ ನಡೆಸುವಲ್ಲಿ ಚುನಾವಣಾ ಆಯೋಗದ ಪರಿಶ್ರಮವನ್ನೂ ಇದೇ ವೇಳೆ ಅವರು ಶ್ಲಾ ಸಿದ್ದಾರೆ. 21ನೇ ಶತಮಾನದಲ್ಲಿ ಜನಿಸಿದವರು ಇದೇ ಮೊದಲ ಬಾರಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. 

ಮತ ಚಲಾವಣೆ ಮಾಡುವುದು ವ್ಯಕ್ತಿಯ ಜೀವನದಲ್ಲಿ ಪ್ರಮುಖ ಸಂಗತಿ. ಇದೊಂದು ಪವಿತ್ರ ಕರ್ತವ್ಯ ಎಂದು ಜನರು ಭಾವಿಸಬೇಕು. ಒಂದು ವೇಳೆ ಮತ ಹಾಕದಿದ್ದರೆ, ನಂತರ ದೇಶದಲ್ಲಿ ನಡೆದ ಯಾವುದೇ ಅಹಿತಕರ ಘಟನೆಗೂ ಬೇಸರ ಉಂಟಾಗಬೇಕು. ನಾನು ಮತ ಹಾಕದೇ ಇದ್ದುದರಿಂದಲೇ ಹೀಗಾಯಿತು ಎಂಬ ಪಶ್ಚಾತ್ತಾಪ ಜನರಲ್ಲಿ ಮೂಡಬೇಕು ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಜ.29ರಂದು ವಿದ್ಯಾರ್ಥಿಗಳ ಜತೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರೀಕ್ಷೆಯಲ್ಲಿ ಬರೆಯುವುದರ ಮೇಲೆ ಇರುವ ಹೆದರಿಕೆ ನಿವಾರಿಸುವ ಬಗ್ಗೆ ವಿದ್ಯಾರ್ಥಿಗಳ ಜತೆಗೆ ಸಂವಾದ ನಡೆಸು ವುದಾಗಿ ಹೇಳಿದ್ದಾರೆ. ಇದರ ಜತೆಗೆ ನೇತಾಜಿ ಯವರಿಗೆ ಸೇರಿದ ಕೆಲ ಕಡತ, ನಾಲ್ಕು ವರ್ಷಗಳ ಸಾಧನೆಯ ಬಗ್ಗೆ ಅವರು ಮಾತನಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next