Advertisement

ಕೆಲಸ ಮಾಡುವವರಿಗೆ ಮತ ನೀಡಿ: ಸಿದ್ದು ಟ್ವೀಟ್‌

11:47 AM Apr 19, 2019 | Team Udayavani |

ಬೆಂಗಳೂರು: “ರಾಜಕೀಯ ಪಕ್ಷಗಳು ಕಳೆದ ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿವೆಯೋ ಇಲ್ಲವೋ ಎನ್ನುವುದನ್ನು ಯೋಚಿಸಿ ಮತ ದಾನ ಮಾಡಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಣಿ ಟ್ವೀಟ್‌ ಮಾಡುವ ಮೂಲಕ ಮತದಾರರಲ್ಲಿ ಮನವಿ ಮಾಡಿದ್ದಾರೆ.

Advertisement

“ಕಳೆದ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತ್ತು ಅವುಗಳ ಅಭ್ಯರ್ಥಿಗಳು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿ ದ್ದಾರೆಯೇ ಎನ್ನುವುದನ್ನು ಕುರಿತು ಯೋಚನೆ ಮಾಡಬೇಕು. ಚುನಾವಣಾ ಕಾಲದಲ್ಲಿ ಪ್ರಮುಖವಾಗಿ ಪಕ್ಷ ಮತ್ತು ಅಭ್ಯರ್ಥಿಗಳ ವಚನ ಪಾಲನೆಯ ಚರ್ಚೆ ನಡೆಯಬೇಕೆ ಹೊರತು ಜಾತಿ, ಧರ್ಮ, ಇಲ್ಲವೇ ಇತರೆ ಭಾವನಾತ್ಮಕ ವಿಷಯಗಳ ಬಗ್ಗೆ ಅಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ಸರ್ವ ಜನಾಂಗದ ಶಾಂತಿಯ ತೋಟವಾಗಿ ಸಮಾಜವನ್ನು ಕಟ್ಟಬೇಕು. ನಾವು ಸಮಾಜವನ್ನು ಒಡೆಯುವವರಲ್ಲ. ಸಮಾಜ ಕಟ್ಟುವವರು. ಕಳೆದ ಎಪ್ಪತ್ತು ವರ್ಷಗಳಲ್ಲಿ ಕಾಂಗ್ರೆಸ್‌ ಪಕ್ಷ ಅಭಿವೃದಿಟಛಿ, ಸುರಕ್ಷತೆ ಮತ್ತು ಸೌಹಾರ್ದತೆಯ ಮಂತ್ರದಿಂದ ಭಾರತವನ್ನು ಕಟ್ಟಿದೆ. ನಾನು ಮುಖ್ಯಮಂತ್ರಿಯಾಗುವ ಮೊದಲು ನಡೆದ ಚುನಾವಣೆಯಲ್ಲಿ ನಮ್ಮ ಪಕ್ಷ ಪ್ರಣಾಳಿಕೆಯಲ್ಲಿ 165 ಭರವಸೆಗಳನ್ನು ನೀಡಿತ್ತು. ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವುದು ನನ್ನ ರಾಜಕೀಯ ಧರ್ಮ ಎಂದು ತಿಳಿದುಕೊಂಡವನು ನಾನು.ಅದರಂತೆ ನನ್ನ ಅಧಿಕಾರಾವಧಿಯಲ್ಲಿ ನಾನು ಎಲ್ಲ ಭರವಸೆಗಳನ್ನು
ಈಡೇರಿಸಿದ್ದೇನೆ. ನಾವು ವಚನ ಪಾಲಕರು, ವಚನ ಭ್ರಷ್ಟರಲ್ಲ ಎಂದು ಹೇಳಿದ್ದಾರೆ.

ಎಲ್ಲ ಮಕ್ಕಳಿಗೆ 1 ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ, ನರೇಗಾದಲ್ಲಿ ಕೆಲಸದ ದಿನಗಳನ್ನು 100 ರಿಂದ 150ಕ್ಕೆ ಏರಿಕೆ, ಯುವ ಜನರಿಗೆ ಉದ್ಯೋಗ, ಭಯ ಮುಕ್ತ ಭಾರತ, ಇವು ನಮ್ಮ ಭರವಸೆಗಳು. ಇವುಗಳನ್ನು ತಪ್ಪದೇ ಈಡೇರಿಸುತ್ತೇವೆ. ಮುಂದಿನ ಲೋಕಸಭೆಯಲ್ಲಿ ನಿಮ್ಮನ್ನು ಪ್ರತಿನಿಧಿಸಲು ಪ್ರತಿಯೊಂದು ಕ್ಷೇತ್ರಕ್ಕೂ ದಕ್ಷ,ಯೋಗ್ಯ ಪ್ರಾಮಾಣಿಕ ಹಾಗೂ ಜನಾನುರಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ. ಅವರು ನಿಮಗೆ ನಿಷ್ಠರಾಗಿರುತ್ತಾರೆ. ತಮ್ಮ ಕರ್ತವ್ಯಕ್ಕೆ ಬದಟಛಿರಾಗಿರುತ್ತಾರೆ.

ನಿಮ್ಮ ಹಿತಾಸಕ್ತಿಯ ರಕ್ಷಕರಾಗಿರುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next