ಲಕ್ಷದ್ವೀಪ: ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಒಂದು ಲೋಕಸಭಾ ಕ್ಷೇತ್ರ. ಇದು 36 ಪುಟ್ಟ ದ್ವೀಪಗಳನ್ನು ಒಳಗೊಂಡಿದೆ. ಅತಿ ಕಡಿಮೆ ಮತದಾರರಿರುವ ಲೋಕಸಭಾ ಕ್ಷೇತ್ರವೂ ಹೌದು.
ಪರಿಶಿಷ್ಟ ಪಂಗಡದವರಿಗೆ ಸೀಮಿತವಾಗಿರುವ ಈ ಲೋಕಸಭಾ ಕ್ಷೇತ್ರದಲ್ಲಿ ನಡೆದ 2019ರ ಚುನಾವಣೆಯಲ್ಲಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ (ಎನ್‌ಸಿಪಿ) ಮೊಹಮ್ಮದ್ ಫೈಜಲ್ ಜಯ ಗಳಿಸಿದ್ದಾರೆ.
ಕಾಂಗ್ರೆಸ್‌ನ ಭದ್ರಕೋಟೆ ಎನಿಸಿಕೊಂಡಿರುವ ಇಲ್ಲಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಹಮ್ದುಲ್ಲಾ ಸಯೀದ್ ಸೋತು ಹೋಗಿದ್ದಾರೆ. ಇವರು ಕಾಂಗ್ರೆಸ್‌ನ ಹಿರಿಯ ನಾಯಕ ಪಿ.ಎಂ.ಸಯೀದ್ ಪುತ್ರ ಎನ್ನುವುದು ಗಮನಾರ್ಹ.
ಅಂಡಮಾನ್ ನಿಕೋಬಾರ್‌ನಲ್ಲಿ ಗೊಂದಲ: ವಿಚಿತ್ರವೆಂದರ್ ಅಂಡಮಾನ್-ನಿಕೋಬಾರ್‌ನಲ್ಲಿ ಯಾವ ಪಕ್ಷ ಗೆದ್ದಿದೆ ಎನ್ನುವುದು ಕಡೆಯ ತನಕ ಸ್ಪಷ್ಟವಾಗಿರಲಿಲ್ಲ.
ಕೆಲವು ಆಂಗ್ಲ ಮಾಧ್ಯಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಲದೀಪ್ ಶರ್ಮ ಗೆದ್ದಿದ್ದಾರೆ ಎಂದು ವರದಿಯಾಗಿದ್ದರೆ, ಇನ್ನು ಕೆಲವು ಮಾಧ್ಯಮಗಳಲ್ಲಿ ಬಿಜೆಪಿಯ ವಿಶಾಲ್ ಜೊಲ್ಲಿ ಗೆದ್ದಿದ್ದಾರೆ ಎಂಬ ವರದಿಗಳು ಕಂಡುಬಂದಿದ್ದವು. ಗೆಲುವಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ನಿಕಟ ಹೋರಾಟ ಕಂಡುಬಂದಿತ್ತು.
ಗೆದ್ದ ಪ್ರಮುಖರು
-ಮೊಹಮ್ಮದ್ ಫೈಜಲ್, ಎನ್‌ಸಿಪಿ
ಸೋತ ಪ್ರಮುಖರು
-ಹಮ್ದುಲ್ಲಾ ಸೈಯದ್, ಕಾಂಗ್ರೆಸ್