Advertisement

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

06:13 PM Apr 20, 2024 | Shreeram Nayak |

ತೀರ್ಥಹಳ್ಳಿ : ನನ್ನ ತಂದೆ ಬಂಗಾರಪ್ಪನವರಿಗೆ ಪ್ರೀತಿ, ಗೌರವ ನೀಡಿದ ಕ್ಷೇತ್ರವಿದು. ಅವರು ನೀಡಿದ ಜನಪ್ರಿಯ ಯೋಜನೆಗಳು ಎಂದಿಗೂ ಅಮರ.ಬಸವಣ್ಣನವರ ಮಾತಿನಂತೆ ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ನನಗೊಂದು ಅವಕಾಶ ನೀಡಿ ಎಂದು ಶಿವಮೊಗ್ಗ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದರು.

Advertisement

ತಾಲೂಕಿನ ಹೊದಲ ಅರಳಾಪುರ ಗ್ರಾ.ಪಂ ವ್ಯಾಪ್ತಿಯ ಹೊದಲದ ದಿ.ವೀರಪ್ಪ ಗೌಡ ವೃತ್ತದಲ್ಲಿ ಕಾಂಗ್ರೆಸ್‌ ಪಕ್ಷ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿಯವರು ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನ ಮೆಚ್ಚುಗೆಗಳಿಸಿದೆ. ಬಂಗಾರಪ್ಪನವರ ಅಂದಿನ ಯೋಜನೆಗಳಾದ ಗ್ರಾಮೀಣ ಕೃಪಾಂಕ,ಆಶ್ರಯ, ಉಚಿತ ವಿದ್ಯುತ್ ಮುಂತಾದ ಜನಪರ ಯೋಜನೆಗಳು ಇಂದಿಗೂ ಜನರನ್ನು ಕಾಪಾಡಿದೆ. ಮಧು ಬಂಗಾರಪ್ಪ ಈ ಸರ್ಕಾರದ ಸಚಿವರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ, ಮಲೆನಾಡಿನ ಸಮಸ್ಯೆಯಾದ ಬಗರ್ ಹುಕುಂ,ಅರಣ್ಯ ಹಕ್ಕುಪತ್ರ ವಿಚಾರಗಳ ಬಗ್ಗೆ ಜನರಿಗೆ ನ್ಯಾಯ ಸಿಗಬೇಕಾದರೆ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂದರು.

ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥ್‌ ಗೌಡ ಮಾತನಾಡಿ ಹತ್ತು ವರುಷ ಆಡಳಿತ ನಡೆಸಿದ ಕೇಂದ್ರದ ಬಿಜೆಪಿ ಸರ್ಕಾರ ಏನು ಮಾಡಿದೆ. ಅರಣ್ಯ ಹಕ್ಕು ವಿಚಾರಗಳ ತುಟಿ ಬಿಚ್ಚದ ಬಿಜೆಪಿ ಸಂಸದರು ಧರ್ಮ, ಜಾತಿ ರಾಜಕಾರಣ ಮಾಡುತ್ತ ಬಂದಿದ್ದಾರೆ. ಬಿಜೆಪಿಗೆ ಅಂತಿಮ ಹಾಡಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವುದು ನಮ್ಮೆಲ್ಲರ ಗುರಿ ಎಂದರು.

ಚಿತ್ರ ನಟ ಶಿವರಾಜ್ ಕುಮಾರ್ ಮಾತನಾಡಿ ನನ್ನ ಮಾವ ಬಂಗಾರಪ್ಪನವರ ಪ್ರೀತಿಯ ಊರಿದು, ಆ ಪ್ರೀತಿಯನ್ನು ಗೀತಾಳ ಮೇಲೆ ತೋರಿ ಗೆಲ್ಲಿಸಿ, ಹೆಣ್ಣು ಶಕ್ತಿಗೆ ಅವಕಾಶ ನೀಡಿ ಮಹಾಶಕ್ತಿಯನ್ನಾಗಿ ಮಾಡಿ ಗೆಲ್ಲಿಸಿ. ಒಂದು ಅವಕಾಶ ನೀಡಿ, ಹೊಸತನದೊಂದಿಗೆಹೊಸ ಅಲೆ ಮೂಡಿಸಿ ಗೆಲ್ಲಿಸಿ ಕೊಡಿ, ಗೀತಾ ಮಾತು ಕಡಿಮೆ ಕೆಲಸ ಮಾಡಿ ತೋರಿಸುತ್ತಾರೆ. ಹಿಂದೆ ಜಾಸ್ತಿ ಮಾತನಾಡಿದವರೆಲ್ಲಾ ಏನು ಕೆಲಸ ಮಾಡಿದ್ದಾರೆ ? ಈ ಕ್ಷೇತ್ರದ ಮನೆ ಮಗಳನ್ನು ಗೆಲ್ಲಿಸಿ ನಿಮ್ಮೊಂದಿಗೆ ನಾನು ನಿಂತು ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ ಮಲೆನಾಡಿನ ಗೇಣಿದಾರರಿಗೆ ಹಕ್ಕು ನೀಡಿದ್ದು ಕಾಂಗ್ರೆಸ್ ಪಕ್ಷ. ಇಂದಿರಾ ಗಾಂಧಿ, ದೇವರಾಜ್ ಅರಸುರಂತಹ ಮಹಾನ್ ವ್ಯಕ್ತಿಗಳ ಜನಪರ ಚಿಂತನೆಗಳನ್ನು ಜನ ಮರೆಯಬಾರದು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಟ್ಟಿ ಭಾಗ್ಯ ಇದರಿಂದ ದೇಶಕ್ಕೆ ನಷ್ಟ ಎನ್ನುವ ಆರಗ ಜ್ಞಾನೇಂದ್ರ ಮತ್ತು ಬಿ.ವೈ.ರಾಘವೇಂದ್ರರವರೇ ಮೋದಿಯವರು ಅದಾನಿ, ಅಂಬಾನಿಯವರ ಸಾಲಮನ್ನಾ
ಮಾಡಿದ್ದರಿಂದ ದೇಶಕ್ಕೆ ನಷ್ಟವಾಗಲಿಲ್ಲವೇ? ಬಡವರಿಗೆ ಯೋಜನೆಗಳನ್ನು ನೀಡಿದರೆ ಬಿಜೆಪಿ ಅಪಪ್ರಚಾರ ಮಾಡುತ್ತದೆ.ಮೋದಿ ಪ್ರಧಾನಿಯಾಗಿ ಬಡವರಿಗೆ ನೀಡಿದ ಕೊಡುಗೆ ಏನು ನನ್ನೊಂದಿಗೆ ಚರ್ಚೆಗೆ ಬನ್ನಿ ಎಂದು ಆಹ್ವಾನಿಸಿದರು.

Advertisement

ವೇದಿಕೆಯಲ್ಲಿ ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್,ಮುಡುಬಾ ರಾಘವೇಂದ್ರ, ಕಾಂಗ್ರೆಸ್ ಮುಖಂಡರಾದ ಮಹಾಬಲೇಶ್‌, ಜಿ.ಎಸ್.ನಾರಾಯಣ್ ರಾವ್, ಡಾ.ಸುಂದರೇಶ್, ಕಡ್ತೂರ್ ದಿನೇಶ್, ವಾದಿರಾಜ್ ಭಟ್, ಹಾರೊಗೊಳಿಗೆ ಪದ್ಭನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಅಮರನಾಥ್ ಶೆಟ್ಟಿ, ಪಿ.ರಾಘವೇಂದ್ರ, ಶೃತಿ ವೆಂಕಟೇಶ್‌,ಗ್ರಾ.ಪಂ.ಸದಸ್ಯ ಡಿ.ಮಂಜುನಾಥ್, ಹೊದಲ ಶಿವು ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next