ಕಾರ್ಕಳ: ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯದಲ್ಲಿ ಎಲ್ಲೂ ಆಗ ದಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆದಿದ್ದು, ಕಾರ್ಕಳದಲ್ಲಿ ಮತ್ತಷ್ಟು ಅಭಿವೃದ್ಧಿಯಾಗಬೇಕಾದರೆ ಅಭಿವೃದ್ಧಿ ಹರಿಕಾರ, ಕ್ಷೇತ್ರದ ಶಾಸಕರಾಗಿರುವ ಹಾಗೂ ಕಾರ್ಕಳದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್ ಕುಮಾರ್ ಅವರಿಗೆ ಮತ್ತೂಮ್ಮೆ ಮತ ನೀಡಿ ಅವರನ್ನು ಕ್ಷೇತ್ರದ ಜನತೆ ಆಶೀರ್ವದಿಸಬೇಕು ಎಂದು ಕಾರ್ಕಳ ಬಿಜೆಪಿ ಪ್ರಚಾರ ಸಮಿತಿ ಅಧ್ಯಕ್ಷರಾಗಿರುವ ಮಹೇಶ್ ಶೆಟ್ಟಿ ಕರೆ ನೀಡಿದರು.
ಕುಡು³ಲಾಜೆ ನಿಟ್ಟೆಯಲ್ಲಿ ನಡೆದ ಬಿಜೆಪಿ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಅವರು ಮತದಾರರಲ್ಲಿ ಮನವಿ ಮಾಡಿದರು. ಒಬ್ಬ ವಿರೋಧ ಪಕ್ಷದ ಶಾಸಕನಾಗಿ ಸುನಿಲ್ ಕುಮಾರ್ ಕಾರ್ಕಳವನ್ನು ಒಂದು ಮಾದರಿ ಕ್ಷೇತ್ರವನ್ನಾಗಿ ಅಭಿವೃದ್ಧಿ ಪಡಿಸಿದ್ದಾರೆ. ಸರಕಾರದ ಅನುದಾನವಿಲ್ಲದೆ ತನ್ನ ವೈಯಕ್ತಿಕ ನೆಲೆಯಲ್ಲಿಯೂ ಸಮಾಜ ಸೇವೆಯೊಂದಿಗೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದಾರೆ. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಶಾಸಕನಾಗಿ ತಾನು ಏನು ಮಾಡಬಹುದು ಅದಕ್ಕಿಂತಲೂ ಮಿಕ್ಕಿ ಶಾಸಕ ಸುನಿಲ್ ಕುಮಾರ್ ಮಾಡಿ ತೋರಿಸಿದ್ದಾರೆ. ಅವರ ಕಾರ್ಯ ವೈಖರಿ ಇಡೀ ದೇಶದ ಶಾಸಕರಿಗೆ ಮಾದರಿ. ಇಂತಹ ಒಬ್ಬ ಜನಪ್ರತಿನಿಧಿಯನ್ನು ನಾವು ಮತ್ತೂಮ್ಮೆ ಆರಿಸಿ ಕಳುಹಿಸುವುದು ಸತøಜೆಗಳಾದ ನಮ್ಮ ಕರ್ತವ್ಯ. ಈ ಕರ್ತವ್ಯವನ್ನು ಕಾರ್ಕಳ ಜನತೆ ಪಾಲಿಸಬೇಕು ಎಂದು ಕೇಳಿಕೊಂಡರು.
ಕಳೆದ ಐದು ವರ್ಷಗಳಲ್ಲಿ ಏನೂ ಮಾಡದ ಕಾಂಗ್ರೆಸಿಗರು ಇನ್ನು ಮತ ದಾನಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವ ಸಂದರ್ಭ ಶಾಸಕರಾದ ಸುನಿಲ್‌ಕುಮಾರ್ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡಲು ಸಿದ್ಧತೆ ಮಾಡು ತ್ತಿದ್ದಾರೆ. ವೈಯಕ್ತಿಕವಾಗಿ ನಿರಂತರ ಅಪಪ್ರಚಾರ ಮಾಡಲು ತಯಾರಿ ನಡೆಸುತ್ತಿದ್ದಾರೆ. ಅವರಿಗೆ ವೈಯಕ್ತಿಕ ಅಪಪ್ರಚಾರ ಬಿಟ್ಟರೆ ಬೇರೆ ಯಾವುದೇ ರೀತಿಯ ಚುನಾವಣಾ ಅಜೆಂಡಾ ಇಲ್ಲ. ಕಾರ್ಕಳದ ಜನತೆ ಒಂದು ಬಾರಿ ಇಂತಹ ಅಪಪ್ರಚಾರಕ್ಕೆ ಬಲಿಯಾಗಿದ್ದಾರೆ. ಆದರೆ ಮುಂದೆ ಇಂತಹ ಯಾವುದೇ ಅಪಪ್ರಚಾರಕ್ಕೆ ಕಾರ್ಕಳ ಜನತೆ ಸೊಪ್ಪು ಹಾಕುವುದಿಲ್ಲ. ಕಾಂಗ್ರೆಸಿಗರಿಗೆ ಕಾರ್ಕಳದ ಮತದಾರರೇ ಸರಿಯಾದ ಉತ್ತರ ನೀಡಲಿದ್ದಾರೆ. ಒಂದೇ ಸುಳ್ಳನ್ನು ಸಾವಿರ ಬಾರಿ ಹೇಳುವುದು ಕಾಂಗ್ರೆಸ್ ಪಕ್ಷದ ಪದ್ಧತಿ. ಅದನ್ನೇ ಎಲ್ಲ ಚುನಾವಣೆಗಳಲ್ಲಿ ಪ್ರಯೋಗಿಸುತ್ತಾರೆ. ಈ ಬಾರಿ ಇಂತಹ ಯಾವುದೇ ಕಾರ್ಯ ಯಶಸ್ವಿ ಆಗಲು ನಮ್ಮ ನಿಷ್ಠಾವಂತ ಕಾರ್ಯಕರ್ತರು ಬಿಡಬಾರದು ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಾಸಕ ಸುನಿಲ್ ಕುಮಾರ್, ಹಿರಿಯರಾದ ಬೋಳ ಪ್ರಭಾಕರ್ ಕಾಮತ್, ರಾಷ್ಟ್ರೀಯ ಪರಿಷತ್ ಸದಸ್ಯರಾದ ಎಂ.ಕೆ. ವಿಜಯ ಕುಮಾರ್, ಕ್ಷೇತ್ರಾಧ್ಯಕ್ಷ ಮಣಿರಾಜ ಶೆಟ್ಟಿ, ವಕೀಲರಾದ ಸುವೃತ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ, ತಾಲೂಕು ಬಿಜೆಪಿ ಕಾರ್ಯದರ್ಶಿ ನವೀನ್ ನಾಯಕ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಪ್ರವೀಣ್ ಸಾಲ್ಯಾನ್, ಪ್ರಶಾಂತ್ ಕುಮಾರ್ ಜೈನ್, ಸ್ಥಾನೀಯ ಸಮಿತಿ ಕಾರ್ಯದರ್ಶಿ ದಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.