ನನ್ನ ಎರಡು ಅವಧಿಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಅರಂತೋಡು ಸೇತುವೆ ಸಹಿತ, ಪ್ರಮುಖ ಸಂಪರ್ಕ ರಸ್ತೆಗಳ ಅಭಿವೃದ್ಧಿ ಆಗಿದೆ. 110 ಕೆ.ವಿ. ಸಬ್‌ಸ್ಟೇಶನ್ ಗೆ ಮಂಜೂರಾತಿ, ತಾಲೂಕು ಕ್ರೀಡಾಂಗಣಕ್ಕೆ ಮಂಜೂರಾತಿ, ಅಂಬೇಡ್ಕರ್ ಭವನಕ್ಕೆ ಮಂಜೂರಾತಿ ಇವೆಲ್ಲವೂ ನನ್ನ ಅವಧಿಯಲ್ಲೇ ಆದ ಕೆಲಸಗಳು.
Advertisement
ನೀವು ಮಾಜಿ ಶಾಸಕನಾದ ಅನಂತರದ 25 ವರ್ಷಗಳಲ್ಲಿ ಕ್ಷೇತ್ರ ಅಭಿವೃದ್ಧಿ ಕಂಡಿದೆಯೇ?ಇಲ್ಲ. ಉದಾಹರಣೆ ಅಂದರೆ, ನನ್ನ ಅವಧಿಯಲ್ಲಿ ಮಂಜೂರುಗೊಂಡ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಶನ್, ತಾಲೂಕು ಮೈದಾನ, ಅಂಬೇಡ್ಕರ್ ಭವನ ಇತ್ಯಾದಿ ಯೋಜನೆಗಳನ್ನು ಈಗಿನ ಶಾಸಕರಿಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹೇಳಿಕೊಳ್ಳುವಂತೆ ಯಾವುದೇ ಯೋಜನೆಗಳನ್ನು ಅವರು ನೀಡಿಲ್ಲ.
ಮಂಜೂರುಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವುದು. ರಬ್ಬರ್ ಫ್ಯಾಕ್ಟರಿ, ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಅಡಿಕೆ ಮಂಡಳಿ, ಸರಕಾರಿ ತಾಂತ್ರಿಕ ಕಾಲೇಜು ಸ್ಥಾಪನೆ ಆಗಬೇಕು. 25 ವರ್ಷಗಳ ಹಿಂದಿನ ರಾಜಕೀಯ ವ್ಯವಸ್ಥೆಗೂ ಈಗಿನ ವ್ಯವಸ್ಥೆಗೂ ಬದಲಾವಣೆ ಕಂಡುಬರುತ್ತಿದೆಯೇ?
ಹೌದು. ಈಗ ಮೌಲ್ಯಯುತ ರಾಜಕಾರಣಿಗಳ ಕೊರತೆ ಇದೆ. ವಿಧಾನಸಭೆಯಲ್ಲಿ ಚರ್ಚಿಸುವ ಧಾಟಿ ಇತ್ಯಾದಿಗಳಲ್ಲಿ ಸಾಕಷ್ಟು ಬದಲಾವಣೆ ಕಂಡುಬರುತ್ತಿದೆ. ಈಗಲೂ 1980-90ರ ಕಾಲದ ಜನಪ್ರತಿನಿಧಿಗಳ ವರ್ತನೆ, ಕಾಳಜಿ, ಪ್ರಾಮಾಣಿಕತೆಯ ಬಗ್ಗೆ ಮಾತನಾಡುವವರು ಇದ್ದಾರೆ. ಅಂತಹ ಜನಪ್ರತಿನಿಧಿಗಳ ಅಗತ್ಯ ಈಗಲೂ ಇದೆ ಅನ್ನುವುದು ಜನಸಾಮಾನ್ಯರ ಅಭಿಮತ.
Related Articles
ಆಗ ಕೈ ಬರಹದಲ್ಲಿ ಮನವಿ ಬರೆದು ಸರಕಾರಕ್ಕೆ ಕಳುಹಿಸಬೇಕಿತ್ತು. ಈಗ ಎಲ್ಲವೂ ಬದಲಾಗಿದೆ. ಕಂಪ್ಯೂಟರ್ ನಿಂದ ಹಿಡಿದು ಪೂರ್ಣ ಪ್ರಮಾಣದ ಸೌಲಭ್ಯ ಶಾಸಕರಿಗೆ ಇದೆ. ನಮಗೆ 2,500 ರೂ. ಗೌರವ ಧನ ಇತ್ತು. 1,800 ರೂ. ಪಿಂಚಣಿ ಇತ್ತು. ಈಗ ಎಲ್ಲವೂ ದುಪ್ಪಟ್ಟಾಗಿವೆ. ವ್ಯತ್ಯಾಸ ಅಂದರೆ ಆಗ ಸೌಲಭ್ಯಗಳ ಕೊರತೆ ಇದ್ದರೂ ಜನಪ್ರತಿನಿಧಿಗಳು ಜನರ ಸೇವಕರಾಗಿ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರು. ಈಗ ಎಲ್ಲ ಸೌಲಭ್ಯಗಳು ಸಿಕ್ಕಿದರೂ ಜನಪ್ರತಿನಿಧಿಗಳಲ್ಲಿ ಪ್ರಾಮಾಣಿಕತೆ ಉಳಿದುಕೊಂಡಿಲ್ಲ.
Advertisement
ಕಿರಣ್ ಪ್ರಸಾದ್ ಕುಂಡಡ್ಕ