Advertisement
ಅತೀದೊಡ್ಡ ಆದಾಯ ವರ್ಗಗಳಲ್ಲಿ ಒಂದುಅಮೆರಿಕದಲ್ಲಿ ಅತೀಹೆಚ್ಚು ಆದಾಯ ಇರುವ ವರ್ಗಗಳಲ್ಲೂ ಭಾರತೀಯ ಮೂಲದವರ ಪ್ರಮಾಣ ಅಧಿಕವಿದೆ. ಒಂದು ಅಂದಾಜಿನ ಪ್ರಕಾರ ಅಮೆರಿಕ ದಲ್ಲಿನ ಭಾರತೀಯ ಕುಟುಂಬವೊಂದರ ವಾರ್ಷಿಕ ಸರಾಸರಿ ಆದಾಯ 1 ಲಕ್ಷ ಡಾಲರ್‌ನಷ್ಟಿದೆ (74. 58 ಲಕ್ಷ ರೂಪಾಯಿ). ಇದು ರಾಷ್ಟ್ರೀಯ ಸರಾಸರಿಗಿಂತ ದುಪ್ಪಟ್ಟು.
ಭಾರತೀಯ ಮೂಲದ ಮತ ದಾರರ ವರ್ಗ ಅಮೆರಿಕದ ಪಕ್ಷಗಳಿಗೆ ದೇಣಿಗೆ ನೀಡುವಲ್ಲೂ ಮುಂದಿವೆ. 2016ರ ಚುನಾವಣೆಯಲ್ಲಿ ಭಾರತೀಯರು ಡೆಮಾಕ್ರಟಿಕ್ ಪಕ್ಷಕ್ಕೆ 75 ಕೋಟಿ ರೂಪಾಯಿಗೂ ಅಧಿಕ ದೇಣಿಗೆ ನೀಡಿದ್ದರು. ಅದೇ ವರ್ಷ ಶಲಭ್ ಕುಮಾರ್ ಎನ್ನುವ ಉದ್ಯಮಿಯೊಬ್ಬರೇ ಟ್ರಂಪ್‌ರ ಪಕ್ಷಕ್ಕೆ 6.70 ಕೋಟಿ ರೂಪಾಯಿ ನೀಡಿದ್ದರು. ಈ ಸೆಪ್ಟಂಬರ್ ತಿಂಗಳೊಂದರಲ್ಲೇ ಡೆಮಾಕ್ರಟಿಕ್ ಪಕ್ಷಕ್ಕೆ ಭಾರತೀಯ ಮೂಲದ ಮತದಾರರು 24 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಸ್ವಿಂಗ್ ಸ್ಟೇಟ್‌ಗಳಲ್ಲಿ ಗಮನಾರ್ಹ ಸಂಖ್ಯೆಯಲ್ಲಿದ್ದಾರೆ
ಚುನಾವಣ ಫಲಿತಾಂಶದಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ಟೆಕ್ಸಾಸ್, ಮಿಶಿಗನ್, ಕ್ಯಾಲಿಫೋರ್ನಿಯಾ ಮತ್ತು ಪೆಲ್ಸಿಲ್ವೇನಿಯಾದಂಥ ರಾಜ್ಯಗಳಲ್ಲಿ ಭಾರತೀಯರ ಹಾಗೂ ದಕ್ಷಿಣ ಏಷ್ಯನ್ ಸಮುದಾಯಗಳ ಸಂಖ್ಯೆ ಅಧಿಕವಿದ್ದು, ಚುನಾವಣೆಗೆ ತಿರುವು ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಈ ಕಾರಣಕ್ಕಾಗಿಯೇ ಡೆಮಾಕ್ರಾಟ್ಸ್ ಮತ್ತು ರಿಪಬ್ಲಿಕನ್ನರು ಸ್ವಿಂಗ್ ಸ್ಟೇಟ್‌ಗಳತ್ತ ಹೆಚ್ಚು ಗಮನ ಹರಿಸಿದ್ದಾರೆ. ಇಲ್ಲಿಯವರೆಗಿನ ಸಮೀಕ್ಷೆಗಳ ಆಧಾರದಲ್ಲಿ ನೋಡುವುದೇ ಆದರೆ, ಅಮೆರಿಕದಲ್ಲೇ ಹುಟ್ಟಿದ ಭಾರತೀಯ ಕುಟುಂಬದ ಜನ ಡೆಮಾಕ್ರಟಿಕ್ ಪಕ್ಷದ ಪರವಿದ್ದರೆ, ಭಾರತದಲ್ಲಿಯೇ ಹುಟ್ಟಿ ಅಮೆರಿಕದ ಪೌರತ್ವ ಪಡೆದವರು ಡೊನಾಲ್ಡ್ ಟ್ರಂಪ್‌ರ ಪರ ಹೆಚ್ಚು ಒಲವು ಹೊಂದಿದ್ದಾರೆ.
Related Articles
ಕಳೆದ ಕೆಲವು ತಿಂಗಳಿಂದ ಟ್ರಂಪ್ ಹಾಗೂ
ಬೈಡೆನ್‌ರ ಟೆಲೀವಿಷನ್ ಜಾಹೀರಾತುಗಳು, ಹಿಂದಿ ಮತ್ತು ಭಾರತದ ಇತರೆ ಭಾಷೆಗಳಲ್ಲಿ ಪ್ರಸಾರವಾಗುತ್ತಿವೆ. ಟಿವಿ ಏಷ್ಯಾ ಮತ್ತು ಸೋನಿ ಎಂಟಟೇìನ್ಮೆಂಟ್ ಚಾನೆಲ್‌ಗಳಲ್ಲಿ ಈ ಜಾಹೀರಾತುಗಳು ಹೆಚ್ಚು ಪ್ರಚಾರವಾಗುತ್ತಿವೆ.
Advertisement
ಹೌಡಿ ಮೋದಿ, ಟ್ರಂಪ್ ದೋಸ್ತಿಯೂಗೌ ಸಮೀಕ್ಷೆಯ ಪ್ರಕಾರ ಅಮೆರಿಕದಲ್ಲಿನ ಭಾರತೀಯ ಮೂಲದ ಮತದಾರರು ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಶ್ಲಾ ಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ನರೇಂದ್ರ ಮೋದಿ-ಟ್ರಂಪ್‌ರ ನಡುವೆ ದೋಸ್ತಿ ಹೆಚ್ಚಾಗಿರುವುದರಿಂದಾಗಿ ಮತದಾರರು ಟ್ರಂಪ್‌ರ ಪರವೂ ವಾಲುವ ಸಾಧ್ಯತೆಯನ್ನು ಅಲ್ಲಗಳೆಯಲು ಆಗುವುದಿಲ್ಲ. ಭಾರತೀಯ ಮೂಲದ ಮತದಾರರನ್ನು ಸೆಳೆಯಲು ಡೆಮಾಕ್ರಟಿಕ್ ಪಕ್ಷ ಕಮಲಾ ಹ್ಯಾರಿಸ್‌ರನ್ನು ಬಳಸುತ್ತಿದೆಯಾದರೂ, ಕಾಶ್ಮೀರದ ವಿಚಾರದಲ್ಲಿ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದ ಕಮಲಾ ಅವರ ಬಗ್ಗೆ ಈ ಮತ ವರ್ಗದಲ್ಲಿ ಅಷ್ಟು ಸೆಳೆತ ಕಾಣಿಸುತ್ತಿಲ್ಲ.