Advertisement

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

01:53 AM Sep 16, 2024 | Team Udayavani |

ಮಡಿಕೇರಿ: ಪ್ರಜಾಪ್ರಭುತ್ವವನ್ನು ಬಲಪಡಿಸಿ, ಅದರ ಮೌಲ್ಯಗಳನ್ನು ನಾಡಿನುದ್ದಕ್ಕೂ ಪಸರಿಸುವ ವಿಶಾಲ ದೃಷ್ಟಿಕೋನದಡಿ ರೂಪಿಸಲಾದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ವಿದ್ಯಾರ್ಥಿಗಳು ಸಾರ್ವಜನಿಕರನ್ನು ಒಳಗೊಂಡಂತೆ ಸಂಪಾಜೆಯಿಂದ ಶಿರಂಗಾಲದವರೆಗಿನ 72.2 ಕಿ.ಮೀ. ಅಂತರದ ಮಾನವ ಸರಪಳಿಯನ್ನು ರೂಪಿಸುವ ಮೂಲಕ ಯಶಸ್ವಿಗೊಳಿಸಲಾಯಿತು.

Advertisement

ಜಿಲ್ಲಾಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ರವಿವಾರ ಬೆಳಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜು ಅವರು ಇಲ್ಲಿನ ವೃತ್ತದ ಬಳಿಯ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಬೃಹತ್‌ ಮಾನವ ಸರಪಳಿ
ಈ ಸಂದರ್ಭ ಉಸ್ತುವಾರಿ ಸಚಿವ ಭೋಸರಾಜು ಒಳಗೊಂಡಂತೆ ಶಾಸಕರುಗಳಾದ ಎ.ಎಸ್‌. ಪೊನ್ನಣ್ಣ, ಡಾ| ಮಂತರ್‌ ಗೌಡ, ಜಿಲ್ಲಾಧಿಕಾರಿ ವೆಂಕಟ್‌ ರಾಜಾ, ಹೆಚ್ಚುವರಿ ಜಿಲ್ಲಾಧಿಕಾರಿ ಐಶ್ವರ್ಯಾ, ಎಸ್‌ಪಿ ವೆಂಕಟ್‌ ರಾಜಾ, ಎಎಸ್‌ಪಿ ಸುಂದರರಾಜ್‌, ಜಿಪಂ ಸಿಇಒ ವಿನಾಯಕ ನರ್ವಾಡೆ, ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ರಾಜೇಶ್‌ ಗೌಡ ಅವರು, ವಿದ್ಯಾರ್ಥಿಗಳು, ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಕೈ ಕೈ ಜೋಡಿಸುವುದರೊಂದಿಗೆ ಬೃಹತ್‌ ಮಾನವ ಸರಪಳಿ ರಚನೆಗೆ ಸಾಕ್ಷಿಯಾದರು. ಮಾನವ ಸರಪಳಿಯಲ್ಲಿ 30 ಸಾವಿರ ಮಂದಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next