Advertisement

ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಮತದಾನ ಮಾಡಿ

07:35 AM Mar 22, 2019 | |

ನೆಲಮಂಗಲ: ಮತದಾನ ಕೇವಲ ಅಭ್ಯರ್ಥಿಗಳ ಗೆಲುವಿಗೆ ಮಾತ್ರ ಕಾರಣವಾಗುವುದಿಲ್ಲ. ದೇಶದ ಪಗ್ರತಿಗೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲ ತಂದು ಕೊಡುತ್ತದೆ. ಹಾಗಾಗಿ, ಕಡ್ಡಾಯ ಮತದಾನ ತೀರಾ ಅಗತ್ಯವೆಂದು ತಾಲೂಕು ಪಂಚಾಯತಿ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು ಹೇಳಿದರು.

Advertisement

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸ್ವೀಪ್‌ ಸಮಿತಿ, ನೆಲಮಂಗಲ ತಾಲೂಕು ಪಂಚಾಯತಿ, ಕಂದಾಯ ಇಲಾಖೆ ಹಾಗು ಕಾಲೇಜು ಶಿಕ್ಷಣ ಇಲಾಖೆ, ಪ್ರಥಮ ದರ್ಜೆ ಕಾಲೇಜಿನ ಚುನಾವಣಾ ಸಾಕ್ಷರತಾ ಕ್ಲಬ್‌ ಮತ್ತು ಎನ್‌ಎಸ್‌ಎಸ್‌ ಘಟಕ ಸಂಯುಕ್ತವಾಗಿ ಆಯೋಜಿಸಿದ್ದ ಚುನಾವಣೆ ಜಾಗೃತಿ ಹಾಗೂ ಕಡ್ಡಾಯ ಮತದಾನದ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭ್ರಷ್ಟರನ್ನು ಆಯ್ಕೆ ಮಾಡಬೇಡಿ: ಯಾವುದೇ ವಸ್ತು, ಹೆಂಡ, ಹಣದ ಆಮಿಷಕ್ಕೆ ಒಳಗಾಗಿ ಭ್ರಷ್ಟರನ್ನು ಆಯ್ಕೆ ಮಾಡಬೇಡಿ. ಹಾಗೆ ಮಾಡಿದರೆ ಮುಂದೆ ನಿಮಗೆ ಅದರ ಫಲ ಘೋರವಾಗಿರುತ್ತದೆ. ವಿದ್ಯಾವಂತರೇ ಹೆಚ್ಚಾಗಿ ಮತದಾನ ಮಾಡದಿರುವುದು ನಾಚಿಕೆಗೇಡಿನ ಸಂಗತಿ. ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚಿನ ಮತದಾನವಾಗುತ್ತಿದ್ದು, ಪಟ್ಟಣ ಪ್ರದೇಶಗಳಲ್ಲಿ ಮತದಾನದ ಪ್ರಮಾಣ ಕುಸಿಯುತ್ತಿರುವುದು ಆತಂಕಕಾರಿ ಸಂಗತಿ. ಎಲ್ಲರೂ ಕಡ್ಡಾಯ ಮತದಾನದಲ್ಲಿ ಭಾಗವಹಿಸಿ ಭವ್ಯ ಭಾರತದ ಕನಸನ್ನು ನನಸು ಮಾಡಬೇಕೆಂದು ಹೇಳಿದರು.

ದೇಶದ ಅಭಿವೃದ್ಧಿಗೆ ಸಹಕರಿಸಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಸಿ.ಬಸವರಾಜು ಮಾತನಾಡಿ, ಸಮಾಜದಲ್ಲಿ ಇಂದು ವಿದ್ಯಾವಂತ ವರ್ಗವೇ ಮತದಾನ ಮಾಡಲು ಮುಂದಾಗುತ್ತಿಲ್ಲ. ಇದು ನಿಜವಾಗಿಯೂ ಪ್ರಜಾತಂತ್ರ ವ್ಯವಸ್ಥೆಯ ದುರಂತ. ಯುವಕರ ಸಂಖ್ಯೆ ಮತದಾನ ಪಟ್ಟಿಯಲ್ಲಿ ಹೆಚ್ಚಿದ್ದು, ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ, ದೇಶದ ಅಭಿವೃದ್ಧಿಗೆ ಸಹಕರಿಸಬೇಕು. ಮತದಾನಕ್ಕೆ ನೀಡುವ ರಜೆಯನ್ನು ತಮ್ಮ ಖಾಸಗಿತನಕ್ಕೆ ಬಳಸದೇ ಮತಗಟ್ಟೆಗೆ ಬಂದು ಮತದಾನ ಮಾಡಬೇಕೆಂದರು.

ಜಾಗೃತಿ ಬೆ„ಕ್‌ ರ್ಯಾಲಿ: ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸ್ವಯಂಸೇವಕರು ಮತದಾನ ಜಾಗೃತಿ ಬೆ„ಕ್‌ ರ್ಯಾಲಿ ನಡೆಸಿದರು. ನಂತರ, ದೇವರಾಜ ಮೊದಲಿಯಾರ್‌ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಮತದಾನದ ಜಾಗೃತಿ ಘೋಷಣೆ ಕೂಗಿದರು. ಅಲ್ಲದೇ, ಮತದಾನ ಮಾಡುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಮತದಾನ ನಮ್ಮ ಹಕ್ಕು ಹಲಗೆಗೆ ಗ್ರಾಮಸ್ಥರಿಂದ ಸಹಿ ಸಂಗ್ರಹಿಸಲಾಯಿತು. ನಂತರ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾಥಾ ಮಾಡುವ ಮೂಲಕ ಸಾರ್ವಜನಿಕರಿಗೆ ಮತದಾನದ ಅರಿವನ್ನು ಮೂಡಿಸಲಾಯಿತು.

Advertisement

ಜಾಥಾದಲ್ಲಿ ಉಪತಹಶೀಲ್ದಾರ್‌ ರಾಜೇಂದ್ರಕುಮಾರ್‌,  ನೆಲಮಂಗಲ ತಾಲೂಕು ಪಂಚಾಯತಿ ಗ್ರಾಮೀಣ ಉದ್ಯೋಗದ ಸಹಾಯಕ ನಿರ್ದೇಶಕ ಲಕ್ಷ್ಮೀನಾರಾಯಣಸ್ವಾಮಿ, ತ್ಯಾಮಗೊಂಡ್ಲು ಪಂಚಾಯತಿ ಪಿಡಿಒ ರವೀಂದ್ರ, ಕಾರ್ಯದರ್ಶಿ ನಾಗರತ್ನಾ,  ಗ್ರಾಮ ಲೆಕ್ಕಿಗ ಮಂಜುನಾಥ್‌, ಪಾರ್ಥಸಾರಥಿ, ನಾಗರತ್ನಾ, ಶ್ರೀನಿವಾಸ್‌, ಕಾಲೇಜಿನ ಉಪನ್ಯಾಸಕರಾದ ಪ್ರೊ.ಶಿವರುದ್ರಯ್ಯ, ಉಮೇಶ್‌, ರಾಜಕುಮಾರ್‌, ಅರವಿಂದ್‌ ಹಾಗೂ ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next