ಹಾಸನ: ಯುವ ಸಮುದಾಯದಿಂದ ಅತ್ಯುತ್ತಮ ಪ್ರಜಾಪ್ರಭುತ್ವ ಕಟ್ಟಲು ಸಾಧ್ಯ. ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಉತ್ತಮ ದೇಶದ ಭವಿಷ್ಯ ರೂಪಿಸಲು ಕೈ ಜೋಡಿಸಬೇಕು ಎಂದು ರ್ಯಾಪ್ ಗಾಯಕ ಚಂದನ್ ಶೆಟ್ಟಿ ಮನವಿ ಮಾಡಿದರು.
ಲೋಕಸಭಾ ಚುನಾವಣೆಗೆ ಹಾಸನ ಜಿಲ್ಲೆಯ ಮತದಾರರ ಜಾಗೃತಿ ರಾಯಭಾರಿಯಾಗಿ ಆಗಮಿಸಿದ ಅವರು ನಗರದ ಮಲಾ°ಡ್ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು.
ಕಡ್ಡಾಯವಾಗಿ ಮತದಾನ ಮಾಡಿ: ಏ.18 ರಂದು ಪ್ರತಿಯೊಬ್ಬ ನಾಗರಿಕರೂ ತಪ್ಪದೇ ಕಡ್ಡಾಯವಾಗಿ ಮತ ಚಲಾಯಿಸುವುದರಿಂದ ಒಂದು ಉತ್ತಮ ದೇಶದ ಭಷ್ಯವನ್ನು ನಿರ್ಮಿಸುವುದರಲ್ಲಿ ಪಾಲ್ಗೊಳ್ಳಬೇಕು. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಹಣ ಆಮಿಮಿಷಗಳಿಗೆ ಒಳಗಾದರೆ ಮುಂದೆ ನಾವೇ ಪಶ್ಚಾತ್ತಾಪ ಪಡುವಂತಹ ಪರಿಸ್ಥಿತಿ ಬರುತ್ತದೆ ಎಂದರು. ನಮ್ಮ ಹಕ್ಕನ್ನು ವಿವೇಚನೆಯಿಂದ ಚಲಾ ಯಿಸೋಣ ದೇಶದ ಉಜ್ವಲ ಭಷ್ಯಕ್ಕೆ ಭಾಗಿಗಳಾ ಗೋಣ. ಇಂದಿನ ಯುವ ಸಮುದಾಯ ಮತ ಚಲಾಯಿಸುವ ಮೂಲಕ ತಮ್ಮ ಸುತ್ತ-ಮುತ್ತಲಿನ ಜನತೆಗೂ ಕೂಡ ಮತದಾನದ ಅರಿವು ಮೂಡಿಸುವ ಕಾರ್ಯ ಮಾಡ ಬೇಕು. ಮತದಾನದಂತಹ ಪವಿತ್ರವಾದ ಕಾರ್ಯದ ಬಗ್ಗೆ ಅರಿವು ಮೂಡಿಸಿ ಕೊಳ್ಳಬೇಕು ಎಂದು ಹೇಳಿದರು.
ಕರ್ತವ್ಯ ಮರೆಯದಿರಿ: ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ನಮ್ಮ ಮತದಾನದಿಂದ ದೃಢ ಭಾರತ ನಿರ್ಮಾಣ ಸಾಧ್ಯವಾಗುತ್ತದೆ. ಈ ಅವಕಾಶವನ್ನು ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯವನ್ನು ನಿರ್ವಹಿಸೋಣ ಎಂದು ಹೇಳಿದರು.
ಯುವ ಮತದಾರರ ಕರ್ತವ್ಯ: ಇಂದಿನ ಯುವ ಸಮುದಾಯವೇ ಮತದಾನದಿಂದ ಹಿಂದೆ ಸರಿಯುತ್ತಿದ್ದಾರೆ. ಯುವ ಪೀಳಿಗೆಗೆ ಜಾಗೃತಿ ಮೂಡಿ ಸುವ ನಿಟ್ಟಿನಲ್ಲಿ ಈ ರೀತಿ ಮತದಾರರ ಜಾಗೃತಿ ಜಾಥಾ ಮಾಡುತ್ತಿದ್ದು, ಪ್ರತಿಯೊಬ್ಬ ಯುವಕರು ಏ.18 ರಂದು ಮತದಾನ ಮಾಡುವ ಮೂಲಕ ಈ ರೀತಿ ಕಾರ್ಯಕ್ರಮಗಳನ್ನು ಸಾರ್ಥಕಗೊಳಿಸೋಣ ಎಂದರು.
ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿಯ ಅಧ್ಯಕ್ಷ ಕೆ. ಎನ್. ವಿಜಯ್ ಪ್ರಕಾಶ್ ಮತದಾನದ ಪ್ರತಿಜ್ಞಾಧಿ ಬೋಧಿಸಿದರು. ಜಿಪಂ ಉಪ ಕಾರ್ಯದರ್ಶಿ ಪುಟ್ಟಸ್ವಾಮಿ, ಯೋಜನಾ ನಿರ್ದೇಶಕ ಪರಪ್ಪ ಸ್ವಾಮಿ, ಮಲಾ°ಡು ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಜಯಂತ್, ಸ್ವೀಪ್ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ವಾರ್ತಾಧಿಕಾರಿ ವಿನೋದ್‌ಚಂದ್ರ ಮತ್ತಿತರರು ಉಪಸ್ಥಿತರಿದ್ದರು