ಉಡುಪಿ: ಜಿಲ್ಲೆಯಲ್ಲಿ ಪ್ರತಿ ಮತಗಟ್ಟೆಯಿಂದ ಮತದಾನದ ಪ್ರಮಾಣವನ್ನು ಸಂಗ್ರಹಿಸುವಾಗ ಅತ್ಯಂತ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತ ದಾನ ಪ್ರಮಾಣ ಸಂಗ್ರಹ ಸಂಗ್ರಹಿಸಲು ನಿಯೋಜಿಸಿರುವ ಅಧಿಕಾರಿ ಗಳು ಮತ್ತು ಸಿಬಂದಿಗೆ ನಡೆದ ತರಬೇತಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಲ್ಲ ಮತಗಟ್ಟೆ ಅಧಿಕಾರಿಗಳು ದೂರವಾಣಿ ಸಂಖ್ಯೆಯನ್ನು ಸಂಗ್ರಹಿಸಿ ಸಂಪರ್ಕದಲ್ಲಿರಬೇಕು. ಚುನಾ ವಣಾ ಆಯೋಗ ಸೂಚಿಸಿರುವ ಮಾರ್ಗ ಸೂಚಿಯನ್ವಯವೇ ಕಾರ್ಯ ನಿರ್ವಹಿ ಸಬೇಕು ಎಂದು ಹೇಳಿದರು.ಪ್ರತಿ 2 ಗಂಟೆಗೊಮ್ಮ ಮತದಾನ ಪ್ರಮಾಣವನ್ನು ಸಂಗ್ರಹಿಸಿ ನಿಗದಿತ ನಮೂನೆಯಲ್ಲಿ ದಾಖಲಿಸಿ ವರದಿ ನೀಡಬೇಕು.
ಮತದಾನ ಮಾಡಿದ ಮಹಿಳೆಯರು, ಪುರುಷರು, ಅಂಗವಿಕಲರ ಕುರಿತು ಕೂಡ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಮತ ಪ್ರಮಾಣ ಸಂಗ್ರಹಿಸುವ ಕುರಿತ ದಾಖಲು ಮಾಡುವ ಕುರಿತು, ವಿವಿಧ ಕಾಲಂಗಳನ್ನು ಭರ್ತಿ ಮಾಡುವ ಕುರಿತಂತೆ ಸಿಬಂದಿಗೆ ತರಬೇತಿ ನೀಡಲಾಯಿತು.
ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ, ಮತ ಪ್ರಮಾಣ ಸಂಗ್ರಹಣೆಯ ನೋಡಲ್ ಅಧಿಕಾರಿ ಚಂದ್ರಶೇಖರ ನಾಯಕ್, ಜಿಲ್ಲೆಯ ಎಲ್ಲ ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರ್‌ಗಳು ಉಪಸ್ಥಿತರಿದ್ದರು.