Advertisement

ಬೆಳ್ತಂಗಡಿ: ಮತ ಎಣಿಕೆ ಕಾರ್ಯ ಆರಂಭ; ತಲೆ ತಿರುಗಿ ಬಿದ್ದ ಸಿಬ್ಬಂದಿಗೆ ಗಾಯ

09:56 AM Dec 30, 2020 | Team Udayavani |

ಬೆಳ್ತಂಗಡಿ: ತಾಲೂಕಿನ 46 ಗ್ರಾ.ಪಂ.ಗಳ ಮತ ಎಣಿಕೆ ಪ್ರಕ್ರಿಯೆ ಬೆಳಗ್ಗೆ 8.30 ರಿಂದ ಎಸ್.ಡಿ.ಎಂ. ಪ.ಪೂ. ಹಾಗೂ ಪದವಿ ಕಾಲೇಜಿನಲ್ಲಿ ಆರಂಭಗೊಂಡಿದೆ. ಬೆಳಗ್ಗೆ 8 ಗಂಟೆಗೆ ತಹಶೀಲ್ದಾರ್ ಮಹೇಶ್ ಜೆ., ವೃತ್ತನಿರೀಕ್ಷಕ ಸಂದೇಶ್ ಪಿ.ಜಿ. ಉಪನಿರೀಕ್ಷಕ ನಂದಕುಮಾರ್ ಅವರ ಉಪಸ್ಥಿತಿಯಲ್ಲಿ ಸ್ಟ್ರಾಂಗ್ ರೂಮ್ ತೆರೆಯಲಾಯಿತು.

Advertisement

ಮತ ಎಣಿಕೆ ಕೇಂದ್ರದ ಮುಂಭಾಗ ಮುಂಜಾನೆಯಿಂದಲೇ ಅಭ್ಯರ್ಥಿಗಳ ಪರ ಬೆಂಬಲಿಗರು ಜಮಾಯಿಸಿದ್ದರು. ಬಿರುಸಿನ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಒಟ್ಟು 68 ಟೇಬಲ್ ಗಳಲ್ಲಿ ಏಕಕಾಲದಲ್ಲಿ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲು ಅಂಚೆ ಮತ ಎಣಿಕೆ ಪ್ರಕ್ರಿಯೆ ನಡೆದಿದೆ.

ಇದನ್ನೂ ಓದಿ:LIVE: ಗ್ರಾ.ಪಂ ಮತಎಣಿಕೆ: ಬ್ರಹ್ಮಾವರ ತಾಲೂಕಿನ ಚುನಾವಣಾ ಪ್ರಥಮ‌ ಫಲಿತಾಂಶ ಲಭ್ಯ

ಎಸ್.ಡಿ.ಎಂ. ಪ.ಪೂ.ಕಾಲೇಜಿನಲ್ಲಿ 25 ಗ್ರಾ.ಪಂ.ಗಳ ಮತ ಎಣಿಕೆಗೆ 9 ಕೊಠಡಿಯಲ್ಲಿ 36 ಮೇಜು ಸಿದ್ಧಪಡಿಸಲಾಗಿದೆ. ಪದವಿ ಕಾಲೇಜಿನಲ್ಲಿ 21 ಗ್ರಾ.ಪಂ.ಗಳ ಮತ ಎಣಿಕೆಗೆ 8 ಕೊಠಡಿಯಲ್ಲಿ 32 ಟೇಬಲ್ ಸಿದ್ಧಪಡಿಸಲಾಗಿದೆ. ಒಟ್ಟು 204 ಸಿಬಂದಿ ನಿಯೋಜಿಸಲಾಗಿದ್ದು, 7 ರಿಸರ್ವ್ ತಂಡ ನಿಯೋಹಿಸಲಾಗಿದೆ.

ಸಿಬ್ಬಂದಿ ತಲೆ ತಿರುಗಿ ಬಿದ್ದು ಗಾಯ

Advertisement

ಮತ ಎಣಿಕೆ ಕೇಂದ್ರದಲ್ಲಿ ಕರ್ತವ್ಯ ನಿರತ ವೇಣೂರು ಗ್ರಾಮ ಸಹಾಯಕರೋರ್ವರು ತಲೆ ತಿರುಗಿ ಬಿದ್ದು ತಲೆಗೆ ಗಾಯವಾಗಿದೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.

ಮತ ಎಣಿಕೆ ಕೇಂದ್ರ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಏಕಕಾಲದಲ್ಲಿ 46 ಗ್ರಾ.ಪಂ.ಗಳ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. 624 ಸ್ಥಾನಗಳಿಗೆ 1439 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next