Advertisement
ಎಲ್ಲ ಕ್ಷೇತ್ರಗಳಿಗೆ ಡಿ. 10ರಂದು ಮತದಾನ ನಡೆದು ಶೇ. 99.87ರಷ್ಟು ಮತದಾನವಾಗಿತ್ತು. ಬೆಳಗ್ಗೆ 8ರಿಂದ ಎಣಿಕೆ ಆರಂಭವಾಗಲಿದ್ದು, ನಿಗದಿತ ಮತ ಎಣಿಕೆ ಕೇಂದ್ರಗಳಲ್ಲಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ. 20 ಕ್ಷೇತ್ರಗಳಲ್ಲಿ ಒಟ್ಟು 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
Related Articles
ಮಂಗಳೂರು: ವಿಧಾನ ಪರಿಷತ್ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಚುನಾವಣ ಕ್ಷೇತ್ರಕ್ಕೆ ಡಿ. 10ರಂದು ನಡೆದಿರುವ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಲಿದೆ.
Advertisement
ಮಂಗಳೂರಿನ ಪಾಂಡೇಶ್ವರದಲ್ಲಿರುವ ರೊಸಾರಿಯೋ ಪದವಿಪೂರ್ವ – ಪದವಿ ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭಗೊಳ್ಳಲಿದೆ. ಮತಪೆಟ್ಟಿಗೆಗಳನ್ನು ಇಡಲಾಗಿರುವ 10 ಸ್ಟ್ರಾಂಗ್‌ರೂಂಗಳನ್ನು ಬೆಳಗ್ಗೆ 7.30ಕ್ಕೆ ತೆರೆಯಲಾಗುವುದು. ಮತ ಎಣಿಕೆಗೆ 2ಹಾಲ್‌ಗಳಲ್ಲಿ ಒಟ್ಟು 14 ಟೇಬಲ್‌ಗಳನ್ನು ಸಿದ್ಧಗೊಳಿಸಲಾಗಿದೆ. ಪ್ರತಿಯೊಂದು ಟೇಬಲ್‌ನಲ್ಲಿ ಮೂವರು ಎಣಿಕೆ ಸಿಬಂದಿಯಂತೆ ಒಟ್ಟು 52 ಮಂದಿ ಇರುತ್ತಾರೆ. ಒಟ್ಟು 389 ಮತಗಟ್ಟೆಗಳ 6,013 ಮತಗಳು ಎಣಿಕೆಯಾಗಲಿವೆ.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಂಜುನಾಥ ಭಂಡಾರಿ ಹಾಗೂ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ (ಎಸ್‌ಡಿಪಿಐ) ಅಭ್ಯರ್ಥಿ ಶಾಫಿ ಕೆ. ಚುನಾವಣ ಕಣದಲ್ಲಿದ್ದಾರೆ.