Advertisement

ಮತ ಎಣಿಕೆ: ಅರ್ಧದಷ್ಟು ಅಂಚೆ ಮತ ಇನ್ನೂ ಬಂದಿಲ್ಲ

08:41 AM May 22, 2019 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣಾ ಅಖಾಡದ ಮತ ಎಣಿಕೆಗೆ ಇನ್ನೂ ಕೇವಲ 24 ಗಂಟೆ ಮಾತ್ರ ಬಾಕಿ ಇದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಅರ್ಧದಷ್ಟು ಅಂಚೆ ಮತಗಳು ಜಿಲ್ಲಾಡಳಿತಕ್ಕೆ ವಾಪಸ್ಸು ಬಾರದಿರುವುದು, ಅಂಚೆ ಮತಗಳನ್ನು ರಾಜಕೀಯ ಪಕ್ಷಗಳು ಖರೀದಿಸುತ್ತಿವೆ ಎಂಬ ಆರೋಪಕ್ಕೆ ಪುಷ್ಠಿ ನೀಡಿದೆ.

Advertisement

ಜಿಲ್ಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸಿದ್ದ ಅಧಿಕಾರಿ, ಸಿಬ್ಬಂದಿಗೆ 4,477 ಅಂಚೆ ಮತ ಪತ್ರಗಳನ್ನು ವಿತರಿಸಿದೆ. ಆದರೆ ವಿತರಣೆಯಾದ ಅಂಚೆ ಮತ ಪತ್ರಗಳ ಪೈಕಿ ಜಿಲ್ಲಾಡಳಿತಕ್ಕೆ ಮೇ 20ರ ಅಂತ್ಯದವರೆಗೂ ಕೇವಲ 2,380 ಮಾತ್ರ ಸಲ್ಲಿಕೆಯಾಗಿದ್ದು, ಅವುಗಳ ಪೈಕಿ ವಿಎಫ್ಸಿಯಲ್ಲಿ ಒಟ್ಟು 1,024 ಅಂಚೆ ಮತ ಪತ್ರಗಳು ಬಂದಿದ್ದರೆ ಅಂಚೆ ಮುಖಾಂತರ ಇದುವರೆಗೂ ಒಟ್ಟು 1,356 ಸೇರಿ ಒಟ್ಟು 2,380 ಅಂಚೆ ಮತಗಳು ಬಂದಿವೆ.

ತಾಲೂಕುವಾರು ಮಾಹಿತಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿ, ಸಿಬ್ಬಂದಿಗೆ ಚುನಾವಣಾ ಆಯೋಗ ಅಂಚೆ ಮೂಲಕ ಮತ ಚಲಾವಣೆಗೆ ಅವಕಾಶ ನೀಡಿದ್ದು, ಕ್ಷೇತ್ರದ ವ್ಯಾಪ್ತಿಗೆ ಬರುವ ಗೌರಿಬಿದನೂರು ಕ್ಷೇತ್ರದಲ್ಲಿ ಒಟ್ಟು 385 ಅಂಚೆ ಮತ ಪತ್ರಗಳು ವಿತರಣೆ ಆಗಿದ್ದರೆ ಆ ಪೈಕಿ ಇದುವರೆಗೂ ಕೇವಲ ವಿಎಫ್ಸಿಯಲ್ಲಿ 205, ಅಂಚೆ ಮುಖಾಂತರ 60 ಸೇರಿ ಒಟ್ಟು 265 ಅಂಚೆಮತಗಳು ಮಾತ್ರ ಬಂದಿವೆ. ಇನ್ನೂ 120 ಅಂಚೆ ಮತಗಳು ಬರಬೇಕಿದೆ.

ಬಾಗೇಪಲ್ಲಿ ಕ್ಷೇತ್ರ: ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 382 ಅಂಚೆ ಮತ ಪತ್ರಗಳು ವಿತರಣೆಯಾದರೆ ಆ ಪೈಕಿ ಜಿಲ್ಲಾಡಳಿತಕ್ಕೆ ವಿಎಫ್ಸಿಯಲ್ಲಿ 36, ಅಂಚೆ ಮುಖಾಂತರ 3 ಮತ ಸೇರಿ ಒಟ್ಟು 39 ಅಂಚೆ ಮತಗಳು ಸಲ್ಲಿಕೆಯಾದರೆ ಇನ್ನೂ 343 ಅಂಚೆ ಮತಗಳು ಬಾಕಿ ಇವೆ.

ಚಿಕ್ಕಬಳ್ಳಾಪುರ ತಾಲೂಕು: ಒಟ್ಟು 581 ಅಂಚೆ ಮತ ಪತ್ರಗಳ ಪೈಕಿ ವಿಎಫ್ಸಿಯಲ್ಲಿ 171, ಅಂಚೆ ಮುಖಾಂತರ 362 ಸೇರಿ ಒಟ್ಟು 533 ಮತಗಳು ಬಂದಿದ್ದು, ಇನ್ನೂ 48 ಅಂಚೆ ಮತಗಳು ಬಾಕಿ ಇವೆ.

Advertisement

ಯಲಹಂಕ ಕ್ಷೇತ್ರ: ಕ್ಷೇತ್ರದಲ್ಲಿ 1,381 ಅಂಚೆ ಮತ ಪತ್ರಗಳು ವಿತರಣೆಯಾಗಿದ್ದು ಆ ಪೈಕಿ ವಿಎಫ್ಸಿಯಲ್ಲಿ 358 ಹಾಗೂ ಅಂಚೆ ಮುಖಾಂತರ 375 ಅಂಚೆ ಮತಗಳು ಸೇರಿ ಒಟ್ಟು 733 ಮತಗಳ ಸಲ್ಲಿಕೆಯಾಗಿದ್ದು, ಇನ್ನೂ 648 ಮತಗಳು ಸಲ್ಲಿಕೆಯಾಗಿಲ್ಲ.

ಹೊಸಕೋಟೆ ಕ್ಷೇತ್ರ: ಒಟ್ಟು 338 ಅಂಚೆ ಮತ ಪತ್ರಗಳು ಸಲ್ಲಿಕೆಯಾಗಿದ್ದು ವಿಎಫ್ಸಿ ಮುಖಾಂತರ ಇದುವರೆಗೂ 1 ಹಾಗೂ ಅಂಚೆ ಮುಖಾಂತರ 168 ಸೇರಿ ಒಟ್ಟು 169 ಅಂಚೆ ಮತಗಳು ಸಲ್ಲಿಕೆಯಾಗಿದ್ದು, ಇನ್ನೂ 169 ಅಂಚೆ ಮತಗಳು ಬಾಕಿ ಇವೆ.

ದೇವನಹಳ್ಳಿ ಕ್ಷೇತ್ರ: ಒಟ್ಟು 298 ಅಂಚೆ ಮತ ಪತ್ರಗಳು ಸಲ್ಲಿಕೆಯಾಗಿದ್ದು ವಿಫ್ಸಿಯಲ್ಲಿ 60, ಅಂಚೆ ಮುಖಾಂತರ 51 ಸೇರಿ ಒಟ್ಟು 111 ಅಂಚೆ ಮತಗಳು ಮಾತ್ರ ಸಲ್ಲಿಕೆಯಾಗಿದ್ದು, ಇನ್ನೂ 187 ಅಂಚೆ ಮತಗಳು ಬಾಕಿ ಇವೆ.

ದೊಡ್ಡಬಳ್ಳಾಪುರ ಕ್ಷೇತ್ರ: ಒಟ್ಟು 533 ಅಂಚೆ ಮತ ಪತ್ರಗಳು ವಿತರಣೆಯಾದರೆ ಆ ಪೈಕಿ ಜಿಲ್ಲಾಡಳಿತಕ್ಕೆ ವಿಎಫ್ಸಿ ಮುಖಾಂತರ 112, ಅಂಚೆ ಮುಖಾಂತರ 126 ಸೇರಿ ಒಟ್ಟು 238 ಸಲ್ಲಿಕೆಯಾಗಿದ್ದು, 241 ಅಂಚೆ ಮತಗಳು ಬಾಕಿ ಇವೆ.

ನೆಲಮಂಗಲ ಕ್ಷೇತ್ರ: ಕ್ಷೇತ್ರದಲ್ಲಿ ಒಟ್ಟು 579 ಅಂಚೆ ಮತ ಪತ್ರಗಳು ಸಲ್ಲಿಕೆಯಾಗಿದ್ದು, ಆ ಪೈಕಿ ವಿಎಫ್ಸಿಯಿಂದ 81, ಅಂಚೆ ಮುಖಾಂತರ 211 ಸೇರಿ ಒಟ್ಟು 292 ಅಂಚೆ ಮತಗಳು ಸಲ್ಲಿಕೆಯಾಗಿದ್ದು ಇನ್ನೂ 287 ಅಂಚೆ ಮತಗಳು ಸಲ್ಲಿಕೆಯಾಗಬೇಕಿದೆ.

● ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next