Advertisement
ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್, ಬಿಜೆಪಿ,ಜೆಡಿಎಸ್, ಬಿಎಸ್‌ಪಿ, ಕೆಪಿಜೆಪಿ ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿರುವ 222 ಸದಸ್ಯರು ಪ್ರಮಾಣ ಸ್ವೀಕಾರ ಮಾಡಿದರು.
Related Articles
Advertisement
ಮಾನ್ವಿ ಶಾಸಕ ಜೆಡಿಎಸ್‌ನ ರಾಜಾವೆಂಕಟಪ್ಪ ನಾಯಕ, ದೇವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೆಸರಿನಲ್ಲಿ, ಕುಣಿಗಲ್‌ನ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ದೇವರು ಹಾಗೂ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದು ವಿಶೇಷ.
ರೇವಣ್ಣ ಮತ್ತು ಸ್ವಾತಿ ನಕ್ಷತ್ರ: ಜೆಡಿಎಸ್‌ನ ರೇವಣ್ಣ ಅವರು ತಮ್ಮ ಸರದಿ ಬರದಿದ್ದರೂ ಹಂಗಾಮಿ ಸ್ಪೀಕರ್ ಕೆ.ಜೆ.ಬೋಪಯ್ಯ ಅವರಿಗೆ ಚೀಟಿ ಕಳುಹಿಸಿ 12.48ಕ್ಕೆ ನನಗೆ ಪ್ರಮಾಣ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಲು ಮನವಿ ಮಾಡಿದರು. ಆದರೆ, ಬೋಪಯ್ಯ ಇದಕ್ಕೆ ಒಪ್ಪದಿದ್ದಾಗ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರಲ್ಲಿ ಮನವಿ ಮಾಡಿ 12.48 ನಿಮಿಷಕ್ಕೆ ಸ್ಪೀಕರ್ ಮುಂಭಾಗ ತಾವೇ ಖುದ್ದಾಗಿ ಬಂದು ಒಬ್ಬರೇ ಪ್ರಮಾಣ ಸ್ವೀಕರಿಸಿದರು.
ಆಗ, ಸಿದ್ದರಾಮಯ್ಯ ಅವರು “ಏನ್ ರೇವಣ್ಣ ಇದು’ ಎಂದು ತಮಾಷೆ ಮಾಡಿದರು. ಕಾಂಗ್ರೆಸ್‌ನ ಜಮೀರ್ ಅಹಮದ್ “ನೀನೊಬ್ಬನೇ ಹೋದರೆ ಹೇಗೆ? ನಮ್ಮನ್ನೂ ಒಳ್ಳೆ ಟೈಮ್‌ನಲ್ಲಿ ಪ್ರಮಾಣಕ್ಕೆ ಕರೆದುಕೊಂಡು ಹೋಗಬಹುದಿತ್ತಲ್ಲವೇ?’ ಎಂದು ಕಾಲೆಳೆದರು. ಆರ್.ವಿ.ದೇಶಪಾಂಡೆ, ರೇವಣ್ಣ ಅವರನ್ನು ನೋಡಿ ನಕ್ಕರು. ನಂತರ ಮಾಧ್ಯಮದವರು ರೇವಣ್ಣ ಅವರ ಕುರಿತು “ಏನ್ ಸಾರ್ ನೀವು ಒಳ್ಳೆ ಟೈಂ ನೋಡಿ ಪ್ರಮಾಣ ಸ್ವೀಕಾರ ಮಾಡಿದಿರಾ?’ ಎಂದಾಗ, “ಹಂಗೇನಿಲ್ಲಾ ಸಾ…ನಮುª ಸ್ವಾತಿ ನಕ್ಷತ್ರ ಯಾವ ಟೈಂನಲ್ಲಿ ಪ್ರಮಾಣ ಸ್ವೀಕರಿಸಿದರೂ ನಡೆಯುತ್ತದೆ’ ಎಂದು ಚಟಾಕಿ ಹಾರಿಸಿದರು.
ಕಾಂಗ್ರೆಸ್‌ನ ಅಖಂಡ ಶ್ರೀನಿವಾಸಮೂರ್ತಿ ಪ್ರಮಾಣ ಸ್ವೀಕಾರ ಮಾಡಿದ ನಂತರ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಕಾಲು ಮುಟ್ಟಿ ನಮಸ್ಕರಿಸಿದರು. ನಂತರ ಮೊಗಸಾಲೆಯಲ್ಲಿ ಕುಮಾರ ಸ್ವಾಮಿಯವರ ಕಾಲು ಮುಟ್ಟಿ ನಮಸ್ಕರಿಸಿದರು.
ಔರಾದ್ ಶಾಸಕ ಪ್ರಭು ಚೌಹಾಣ್ ಅವರು ಲಂಬಾಣಿ ಸಮುದಾಯದ ಸಾಂಪ್ರದಾಯಿಕ ಸಮವಸOಉ ಧರಿಸಿಸದನಕ್ಕೆ ಬಂದು ಎಲ್ಲರ ಗಮನ ಸೆಳೆದರು. ಮಧ್ಯಾಹ್ನ 1.30ರ ವೇಳೆಗೆ 207 ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದರು. ಭೋಜನಾ ವಿರಾಮದ ನಂತರ 3.30ಕ್ಕೆ ಮತ್ತೆ ಸದನ ಸೇರಿದಾಗ ಉಳಿದ ಶಾಸಕರು ಪ್ರಮಾಣ ಸ್ವೀಕರಿಸಿದರು. ಸಮಯ ನಿಗದಿ: ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಸದನಕ್ಕೆ ಆಗಮಿಸಿದರೆ ಜೆಡಿಎಸ್
ಸದಸ್ಯರು ಹತ್ತು ನಿಮಿಷ ತಡವಾಗಿ ಆಗಮಿಸಿದರು. ಆಗ, ಸಿದ್ದರಾಮಯ್ಯ ಹಾಗೂ ಆರ್.ವಿ.ದೇಶಪಾಂಡೆ,ರೇವಣ್ಣ ಇದೇ ಸಮಯಕ್ಕೆ ಬರಬೇಕು ಎಂದು ಹೇಳಿದ್ನಾ ಎಂದು ಜೆಡಿಎಸ್ ಸದಸ್ಯರ ಕಾಲೆಳೆದರು. ಮೂಲಗಳ ಪ್ರಕಾರ, ಎಚ್.ಡಿ.ರೇವಣ್ಣ ಅವರು ಜೆಡಿಎಸ್ ಸದಸ್ಯರು 11.10 ನಿಮಿಷಕ್ಕೇ ಸದನಕ್ಕೆ ಹೋಗಬೇಕು ಎಂದು ಹೇಳಿದ್ದರು ಎನ್ನಲಾಗಿದೆ. ಗಣ್ಯರ ಉಪಸ್ಥಿತಿ: ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಎಐಸಿಸಿ ನಾಯಕರಾದ ಗುಲಾಂ ನಬಿ ಆಝಾದ್, ಅಶೋಕ್ ಗೆಹೊÉàಟ್, ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್
ಜಾವಡೇಕರ್, ಉಸ್ತುವಾರಿ ಮುರಳೀಧರ್‌ರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಡಿ.ವಿ.ಸದಾನಂದಗೌಡ, ಕೇಂದ್ರ ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯ್ಲಿ, ಹಿರಿಯ ಮುಖಂಡ ಹರಿಪ್ರಸಾದ್, ಸಂಸದರಾದ ಪ್ರಕಾಶ್ ಹುಕ್ಕೇರಿ, ಡಿ.ಕೆ.ಸುರೇಶ್, ಧ್ರುವನಾರಾಯಣ, ಚಂದ್ರಪ್ಪ, ಪ್ರತಾಪಸಿಂಹ, ಶೋಭಾ ಕರಂದ್ಲಾಜೆ, ರಾಜ್ಯಸಭೆ ಸದಸ್ಯ ಪ್ರೊ. ರಾಜೀವ್‌ಗೌಡ, ಕುಪೇಂದ್ರರೆಡ್ಡಿ, ಪರಿಷತ್ ಸದಸ್ಯರಾದ ವಿ.ಎಸ್.ಉಗ್ರಪ್ಪ, ಆರ್.ಬಿ.ತಿಮ್ಮಾಪುರ, ತೂಪಲ್ಲಿ ನಾರಾಯಣಸ್ವಾಮಿ ಮತ್ತಿತರರು ಗ್ಯಾಲರಿಯಲ್ಲಿದ್ದರು. ಕೆ.ಎಚ್.ಮುನಿಯಪ್ಪ ಅವರು ಪುತ್ರಿ ರೂಪಾ ಶಶಿಧರ್,ಪ್ರಕಾಶ್ ಹುಕ್ಕೇರಿ ಅವರು ಪುತ್ರ ಗಣೇಶ್ ಹುಕ್ಕೇರಿ ಪ್ರಮಾಣ ಸ್ವೀಕಾರವನ್ನು ಕಣ್ತುಂಬಿಕೊಂಡರು. ಕಾಂಗ್ರೆಸ್-ಜೆಡಿಎಸ್‌ನಲ್ಲಿ ಸಂಭ್ರಮ
ಮಧ್ಯಾಹ್ನ ಕಾಂಗ್ರೆಸ್‌ನ ಪ್ರತಾಪಗೌಡ, ಆನಂದ್‌ಸಿಂಗ್ ಅವರು ಸದನಕ್ಕೆ ಬರುತ್ತಲೇ ಬಿಜೆಪಿಯಲ್ಲಿ ಬಹುಮತ ಸಾಬೀತು ಮಾಡುವ ವಿಶ್ವಾಸ ಕುಂದುತ್ತಾ ಹೋಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಮುಖದಲ್ಲಿ ನಗು ಎದ್ದು ಕಾಣುತ್ತಿತ್ತು. ಡಿ.ಕೆ.ಶಿವಕುಮಾರ್ ಅವರಂತೂ ಇಡೀ ದಿನ ಕಾಂಗ್ರೆಸ್ ಶಾಸಕರ ಮೇಲೆ ನಿಗಾ ಇರಿಸಿ ಹೆಡ್‌ಮಾಸ್ಟರ್‌ನಂತೆ ಕೆಲಸ ಮಾಡಿದರು. ಶಾಸಕರ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರ ಟೇಬಲ್‌ಗೆ ಪಕ್ಷದ ವಿಪ್ ತಲುಪಿಸುತ್ತಿದ್ದರು. ಎಲ್ಲರಿಗೂ ವಿಪ್ ತಲುಪುವಂತೆ ನೋಡಿಕೊಂಡರು. ಡಾ.ಜಿ.ಪರಮೇಶ್ವರ್, ಡಿ.ಕೆ.ಶಿವಕುಮಾರ್, ದಿನೇಶ್ ಗುಂಡೂರಾವ್, ರಾಮಲಿಂಗಾರೆಡ್ಡಿ, ಎಂ.ಬಿ.ಪಾಟೀಲ್, ಎಚ್.ಡಿ.ರೇವಣ್ಣ ಚುರುಕಿನಿಂದ ಓಡಾಡುತ್ತಿದ್ದರು. ಎಚ್.ಡಿ.ಕುಮಾರಸ್ವಾಮಿಯವರು ಸದನದಲ್ಲಿದ್ದ ಕಾಂಗ್ರೆಸ್ ಶಾಸಕರ ಕೈ ಕುಲುಕಿ ಶುಭಾಶಯ ಹೇಳಿದರು. ಮಧ್ಯಾಹ್ನದ ನಂತರ ಬಿಜೆಪಿಗೆ ಬಹುಮತ ಸಿಗುವುದು ಅನುಮಾನ ಎಂಬ ಲಕ್ಷಣಗಳು ಕಂಡು ಬರುತ್ತಲೇ ಬಿಜೆಪಿ ನಾಯಕರು ವಿಧಾನಸೌಧದಿಂದ ನಿರ್ಗಮಿಸಿದರು.