Advertisement

ಛಾಯಾಚಿತ್ರ ಪ್ರದರ್ಶನದ ಮೂಲಕ ಮತ ಜಾಗೃತಿ

09:04 PM Apr 10, 2019 | Lakshmi GovindaRaju |

ಮೈಸೂರು: ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಪ್ರತಿಯೊಬ್ಬ ನಾಗರಿಕರೂ ಮತದಾನ ಮಾಡುವಂತೆ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಜ್ಯೋತಿ ಉದ್ಘಾಟಿಸಿದರು.

Advertisement

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನದ ಬಗ್ಗೆ ಮತದಾರರಿಗೆ ಅರಿವು ಮೂಡಿಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಆಯೋಜಿಸಿರುವ ಮತದಾನ ಜಾಗೃತಿ ಮೂಡಿಸುವ ಛಾಯಾಚಿತ್ರ ಪ್ರದರ್ಶನವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ದಿನನಿತ್ಯ ಸಾವಿರಾರು ಜನರು ಬಸ್‌ನಲ್ಲಿ ವಿವಿಧ ಪ್ರದೇಶಗಳಿಗೆ ತೆರಳಲು ಮೈಸೂರಿನ ಗ್ರಾಮಾಂತರ ಬಸ್‌ ನಿಲ್ದಾಣಕ್ಕೆ ಆಗಮಿಸುತ್ತಾರೆ. ಪ್ರಯಾಣಿಕರಿಗೆ ಚುನಾವಣೆಯಲ್ಲಿ ಮತದಾನ ಮಾಡುವಂತಹ ಸಂದೇಶ ಸಾರುವ ಛಾಯಾಚಿತ್ರ ಪ್ರದರ್ಶನ ನಾಗರಿಕರನ್ನು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಅರಿವು ಮೂಡಿಸುತ್ತದೆ ಎಂದು ತಿಳಿಸಿದರು.

ಬುಧವಾರದಿಂದ ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಅಶಕ್ತರಿಗೆ ಮೊದಲ ಪ್ರಾಶಸ್ತ್ಯ ಅವರಿಗಾಗಿ ವಿಶೇಷ ಸೌಲಭ್ಯ, ಅಕ್ರಮ ಕಂಡಲ್ಲಿ ಚಿತ್ರೀಕರಿಸಿ ಸಿ-ವಿಜಿಲ್‌ ಆ್ಯಪ್‌ ಮೂಲಕ ದೂರು ದಾಖಲಿಸಿ, ಹಣ, ಮದ್ಯ ಹಾಗೂ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದಿರಿ, ಎಲ್ಲರೂ ಚೆನ್ನಾಗಿ ಆಡಿದ್ರೆ ಮ್ಯಾಚ್‌ ಗೆಲ್ಲುತೇ¤ವೆ ಪ್ರತಿಯೊಬ್ಬರು ಓಟ್‌ ಮಾಡಿದ್ರೆ ಪ್ರಜಾಪ್ರಭುತ್ವ ಗೆಲ್ಲುತ್ತದೆ ಎಂಬ ಸಂದೇಶಗಳನ್ನು ಛಾಯಾಚಿತ್ರಗಳಲ್ಲಿ ಹಾಕಲಾಗಿದೆ ಎಂದರು.

ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್‌, ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಕೆಎಸ್ಸಾರ್ಟಿಸಿ ಮೈಸೂರು ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಆರ್‌.ಅಶೋಕ್‌ ಕುಮಾರ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್‌.ರಾಜು, ಜಿಲ್ಲಾ ಸ್ವೀಪ್‌ ಕಾರ್ಯದರ್ಶಿ ಕೃಷ್ಣ, ಸಾಂಖ್ಯೀಕ ಇಲಾಖೆಯ ಸಹಾಯಕ ನಿರ್ದೇಶಕ ಪ್ರಕಾಶ್‌, ಸಹಾಯಕ ಸಾಂಖ್ಯೀಕ ಅಧಿಕಾರಿ ಪ್ರವೀಣ್‌ ಇನ್ನಿತರರು ಈ ವೇಳೆ ಹಾಜರಿದ್ದರು.

Advertisement

ದೇಶ ರೂಪಿಸಿ: ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ ಮತದಾನ ದೇಶವನ್ನು ರೂಪಿಸುತ್ತದೆ. ಮಾಡಿ ಮತದಾನ ಇರಲಿ ದೇಶದ ಮೇಲೆ ಅಭಿಮಾನ, ಮತದಾನದಲ್ಲಿ ಹಿರಿಯರಿಗೆ ಆದ್ಯತೆ ನಾವು ನಾಗರಿಕರಿಗೆ ನೆರವಾಗುತ್ತವೆ, ನಮ್ಮ ದೇಶದ ಭವಿಷ್ಯ ನಿರ್ಮಾಣ ಶಕ್ತಿ ನಮ್ಮ ಓಟಿಗಿದೆ. ಯಾವುದೇ ಮತದಾರ ಮತದಾನದಿಂದ ಹೊರಗುಳಿಯಬಾರದು ಎಂಬ ಚುನಾವಣೆ ಸಂದೇಶ ಸಾರುವ ಸಾಲುಗಳು ಛಾಯಾಚಿತ್ರ ಪ್ರದರ್ಶನದಲ್ಲಿ ನಾಗರಿಕರನ್ನು ಮತದಾನ ಕಡೆಗೆ ಸೆಳೆಯಲಿವೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಜಿಪಂ ಸಿಇಒ ಕೆ.ಜ್ಯೋತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next