Advertisement

ಮತ ಜಾಗೃತಿ; ಕೈಯಲ್ಲಿ ಎಷ್ಟು ಹಣ ಸಾಗಿಸಬಹುದು?

11:48 PM Apr 03, 2023 | Team Udayavani |

ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಘೋಷಣೆಯಾಗಿದ್ದು, ಈಗ ಹಣ ಸಾಗಾಟದ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಇದರ ನಡುವೆಯೇ ದಾಖಲೆ ಇಲ್ಲದ ನಗದು ಜಪ್ತಿಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವೊಮ್ಮೆ ಹಣದ ಜರೂರತ್ತಿನಿಂದಾಗಿ ಕೆಲವರು ಕೈಯಲ್ಲಿ ನಗದು ಇರಿಸಿಕೊಂಡು ಹೋಗುತ್ತಿರುತ್ತಾರೆ. ಇಂಥವರು ಸಿಕ್ಕಿಬಿದ್ದು ನಾನಾ ಸಂಕಷ್ಟ , ಕಿರಿಕಿರಿ ಅನುಭವಿಸುತ್ತಾರೆ. ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಬಳಿ ಕೈಯಲ್ಲಿ ನಗದು ಎಷ್ಟಿರಬೇಕು, ಹೆಚ್ಚು ನಗದು ಇದ್ದರೆ ಏನಾಗುತ್ತದೆ ಎಂಬ ಬಗ್ಗೆ ಪ್ರಶ್ನೆಗಳು ಏಳುವುದು ಸಹಜ. ಈ ಬಗ್ಗೆ ಇಲ್ಲಿದೆ ಮಾಹಿತಿ.

Advertisement

ನೀತಿ ಸಂಹಿತೆ ಜಾರಿ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ದಾಖಲೆಗಳು ಇಲ್ಲದೇನೆ ತನ್ನ ಬಳಿ ಗರಿಷ್ಠ 50 ಸಾವಿರ ರೂ. ನಗದು ಇಟ್ಟುಕೊಳ್ಳಬಹುದು. 50 ಸಾವಿರ ಮೇಲ್ಪಟ್ಟು ಇದ್ದರೆ ಅದಕ್ಕೆ ಸಮರ್ಪಕ ದಾಖಲೆಗಳನ್ನು ಹೊಂದಿರಬೇಕು. ಆರ್‌ಬಿಐ  ಮಾರ್ಗಸೂಚಿಗಳ ಪ್ರಕಾರ 2 ಲಕ್ಷ ಮೇಲ್ಪಟ್ಟು ಮೊತ್ತದ ನಗದು ರೂಪದಲ್ಲಿ ಪಾವತಿಗಳನ್ನು ಮಾಡುವಂತಿಲ್ಲ.

ಚೆಕ್‌, ಡಿಡಿ ಅಥವಾ ಆನ್‌ಲೈನ್‌ ಮೂಲಕವೇ ಪಾವತಿ ಆಗಬೇಕು. ಇಲ್ಲದಿದ್ದರೆ ಐಟಿ ನಿಯಮಗಳು ಸಹಿತ ಇತರ ಕಾನೂನು-ನಿಯಮಗಳ ಅನ್ವಯ ಕ್ರಮ ಜರಗಿಸಬೇಕಾಗುತ್ತದೆ. ಹಾಗೆ ನೋಡಿದರೆ ದಾಖಲೆಗಳಿಲ್ಲದೆ 50 ಸಾವಿರದವರೆಗೆ ನಗದು ಇಟ್ಟುಕೊಳ್ಳುವುದು, 50 ಸಾವಿರ ಮೇಲ್ಪಟ್ಟು ನಗದು ಇದ್ದರೆ ಸಮರ್ಪಕ ದಾಖಲೆಗಳನ್ನು ಇಟ್ಟುಕೊಳ್ಳುವುದು, 2 ಲಕ್ಷ ಮೇಲ್ಪಟ್ಟ ಪಾವತಿಗಳನ್ನು ನಗದು ರೂಪದಲ್ಲಿ ಮಾಡುವಂತಿಲ್ಲ ಎಂಬ ನಿಯಮಗಳು ಈಗಾಗಲೇ ಚಾಲ್ತಿಯಲ್ಲಿವೆ. ಆದರೆ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿರುವಾಗ ಇದಕ್ಕೆ ಮಹತ್ವ ಸಿಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next