Advertisement

ಸಿಟಿ ಸೆಂಟರ್‌ ಮಾಲ್‌ನಲ್ಲಿಸ್ವೀಪ್‌ನಿಂದ ಮತ ಜಾಗೃತಿ

11:03 AM May 12, 2018 | Team Udayavani |

ಕಲಬುರಗಿ: ಸಾರ್ವತ್ರಿಕ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮತದಾನ ಪ್ರಮಾಣ ಹೆಚ್ಚಳಕ್ಕೆ ಅಂತಿಮ ಪ್ರಯತ್ನವಾಗಿ ಸ್ವೀಪ್‌ ಸಮಿತಿಯಿಂದ ನಗರದ ಸೂಪರ್‌ ಮಾರ್ಕೇಟ್‌ ಪ್ರದೇಶದ ಸಿಟಿ ಸೆಂಟರ್‌ ಮಾಲ್‌ನಲ್ಲಿ ಮತದಾನ ಜಾಗೃತಿಗಾಗಿ ಹಾಸ್ಯ ಸಂಜೆ ಆಯೋಜಿಸಲಾಗಿತ್ತು.

Advertisement

ಜಿಲ್ಲೆಯ ಚುನಾವಣೆ ಐಕಾನ್‌ ಹಾಸ್ಯ ಕಲಾವಿದೆ ಇಂದುಮತಿ ಸಾಲಿಮಠ, ಹಾಸ್ಯ ಕಲಾವಿದರಾದ ಗುಂಡಣ್ಣ ಡಿಗ್ಗಿ, ಶಿವರಾಜ ಅಂಡಗಿ, ನವಲಿಂಗ ಹಾಸ್ಯ ಚಟಾಕಿ ಹಾರಿಸುವ ಮೂಲಕ ಕಡ್ಡಾಯವಾಗಿ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು. ಕಲಾವಿದ ಸೂರಜ್‌ ಜೋಶಿ ಮತದಾನ ಜಾಗೃತಿಯ ಸ್ವೀಪ್‌ ಗೀತೆ ಹಾಡಿದರು.

ಸಿಟಿ ಸೆಂಟರ್‌ ಮಾಲ್‌ನ ನೌಕರರು ಮತ್ತು ನೂರಾರು ಸಂಖ್ಯೆಯ ಗ್ರಾಹಕರು ಹಾಸ್ಯ ಸಂಜೆಯ ಸ್ವೀಪ್‌ ಜಾಗೃತಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸ್ವೀಪ್‌ ಸಮಿತಿಯ ಸದಸ್ಯ ಕಾರ್ಯದರ್ಶಿ ಮೈಸೂರು ಗಿರೀಶ, ಕ್ರೀಡಾ ಮತ್ತು ಯುವಸೇವಾ ಇಲಾಖೆಯ ಸಹಾಯಕ ನಿರ್ದೇಶಕ ನಾಡಿಗೇರ, ಪಾಲಿಕೆ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ| ನಾಗರತ್ನ ದೇಶಮಾನೆ, ಸಹಾಯಕ ಕೃಷಿ ನಿರ್ದೇಶಕ ಅನೀಲ ರಾಠೊಡ, ಕ್ಷೇತ್ರ ಶಿಕ್ಷಣಾಧಿಕಾರಿ ಚನ್ನಬಸಪ್ಪ ಮುಧೋಳ, ಮತ್ತಿತರ ಗಣ್ಯರು ಪಾಲ್ಗೊಂಡಿದ್ದರು. ಕಲಬುರಗಿ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷೆ ಹೆಪ್ಸಿಬಾರಾಣಿ ಕೊರ್ಲಪಾಟಿ ಅವರು ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next