Advertisement

ಸಾವಯವ ಸಂತೆಯಲ್ಲಿ ಮತ ಜಾಗೃತಿ ಅಭಿಯಾನ

12:00 PM Apr 01, 2019 | Team Udayavani |

ಮಣ್ಣಗುಡ್ಡೆ : ಇಕೋ ಫ್ರೆಂಡ್ಸ್‌ ಗ್ರೂಪ್‌ ವತಿಯಿಂದ ನಗರದ ಮಣ್ಣಗುಡ್ಡೆಯಲ್ಲಿ ಪ್ರತಿ ರವಿವಾರ ಸಾವಯವ ಸಂತೆ ನಡೆಯುತ್ತಿದ್ದು, ಮತದಾನ ಜಾಗೃತಿಗಾಗಿ ಈ ರವಿವಾರ ‘ಸಾವಯವ ತರಕಾರಿ ಮಾರಾಟಕ್ಕಿದೆ; ನಮ್ಮ ಮತ ಅಲ್ಲ’ ಎಂಬ ಶೀರ್ಷಿಕೆಯಡಿ ಮತ ಜಾಗೃತಿ ಕೈ ಚೀಲ ವಿತರಿಸಲಾಯಿತು.

Advertisement

ಅಲ್ಲದೆ, ತರಕಾರಿಗಳನ್ನಿಡುವ ಟೇಬಲ್‌ ಮೇಲೆ ಕರಪತ್ರ, ಸ್ಟಿಕರ್‌ ಅಂಟಿಸಿ ಮತ ಹಾಕುವಂತೆ ಮನವಿ ಮಾಡಲಾಯಿತು. ಗ್ರಾಹಕರು ಸಂತೆಯಲ್ಲಿ ಸಾವಯವ ತರಕಾರಿ ಹಾಗೂ ಹಣ್ಣುಗಳನ್ನು ಖರೀದಿಸುವ ವೇಳೆ ಗುಂಪಿನ ಯುವಕರು ಮತದಾನ ಮತ್ತು ಮತದಾನದ ದಿನಾಂಕಗಳ ಬಗ್ಗೆ ಮಾಹಿತಿ ನೀಡಿದರು. ಸಂತೆಯಲ್ಲಿ ಮತದಾನ ಜಾಗೃತಿ ಸಂದೇಶ ಫಲಕಗಳನ್ನು ಹಾಕಿ ಮತದಾನದ ಮಹತ್ವವನ್ನು ಸಾರಲಾಯಿತು.

ವಾಹನಗಳಿಗೆ ಜಾಗೃತಿ ಸ್ಟಿಕ್ಕರ್‌
ಸಂತೆಯಲ್ಲಿ ತರಕಾರಿ ಖರೀದಿಸಲು ಬಂದ ಗ್ರಾಹಕರ ಬೈಕು, ಕಾರು ಮತ್ತು ಇತರ ವಾಹನಗಳಿಗೆ ಜಾಗೃತಿ ಸ್ಟಿಕ್ಕರ್‌ ಅಂಟಿಸಲಾಯಿತು. ಸಾವಯವ ಸಂತೆಯಲ್ಲಿ ತರಕಾರಿ ಖರೀದಿ ಮಾಡಿದ ಬಿಲ್‌ಗ‌ಳಲ್ಲಿ ಮತದಾನ ದಿನಾಂಕ ಮುದ್ರಿಸಲಾಗಿದೆ.

ಮತ ಜಾಗೃತಿ ಕೈಚೀಲ ವಿತರಣೆ
ಈ ಬಾರಿ ಕಡ್ಡಾಯವಾಗಿ ಮತದಾನ ಮಾಡಿ ಮತ್ತು ಮತದಾನ ದಿನಾಂಕವನ್ನು ಮುದ್ರಣ ಮಾಡಿದ 5 ಸಾವಿರ ಕೈ ಚೀಲವನ್ನು ಮಣ್ಣುಗುಡ್ಡೆ ಹಾಗೂ ಕದ್ರಿ ವ್ಯಾಪ್ತಿಯ ವಿವಿಧ ಮನೆಗಳಿಗೆ ವಿತರಿಸಲಾಗಿದೆ. ಎ. 7 ಮತ್ತು 14ರಂದು ಮತ ಜಾಗೃತಿ ಕೈಚೀಲ ವಿತರಣೆ ನಡೆಯಲಿದೆ ಎಂದು ಇಕೋ ಫ್ರೆಂಡ್ಸ್‌ ಗ್ರೂಪ್‌ನ ರಾಜೇಶ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next