ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿ- ದಾವಣಗೆರೆನಡುವೆ ಮಲ್ಟಿ ಎಕ್ಸೆಲ್ ವೋಲ್ವೋ (ಹವಾ ನಿಯಂತ್ರಿತ) ಬಸ್ ಸಂಚಾರ ಸೇವೆಗೆ ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು. ಹುಬ್ಬಳ್ಳಿಯಿಂದ ಬೆಳಗ್ಗೆ 7:30, 9, 11:30, ಮಧ್ಯಾಹ್ನ 1, ಸಂಜೆ 4 ಹಾಗೂ5 ಗಂಟೆಗೆ ಹೊರಡಲಿದ್ದು, ಇದೇ ವೇಳೆಗೆ ದಾವಣಗೆರೆಯಿಂದಲೂ ಬಸ್‌ಗಳು ಹೊರಡಲಿವೆ. ಬಸ್ ಪ್ರಯಾಣ ದರ 280ರೂ. ನಿಗದಿ ಮಾಡಲಾಗಿದೆ. ಸದ್ಯಕ್ಕೆ ನಾಲ್ಕು ಬಸ್‌ಗಳು ಸಂಚಾರ ಮಾಡಲಿವೆ.
ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಬಸ್ ಸಂಚಾರಕ್ಕೆ ಚಾಲನೆ ನೀಡಿಮಾತನಾಡಿ, ಸದ್ಯ ನಾಲ್ಕು ಬಸ್‌ಗಳನ್ನುಆರಂಭಿಸಲಾಗಿದೆ. ಪ್ರತಿ ಒಂದೂವರೆಗಂಟೆಗೆ ಒಂದರಂತೆ ಬಸ್‌ಗಳು ಸಂಚಾರಮಾಡಲಿವೆ. ಬಹಳ ದಿನಗಳಿಂದಪ್ರಯಾಣಿಕರ ಬೇಡಿಕೆಯಾಗಿತ್ತು.ಹೀಗಾಗಿ ಹೊಸ ಮಲ್ಟಿ ಎಕ್ಸೆಲ್ ವೋಲ್ವೋಬಸ್‌ಗಳನ್ನು ಈ ಮಾರ್ಗಕ್ಕೆ ಬಿಡಲಾಗಿದೆ.ಪ್ರಯಾಣಿಕರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪ್ರೋತ್ಸಾಹ ದರ ನಿಗದಿಮಾಡಲಾಗಿದೆ. ಪ್ರಯಾಣಿಕರು ಈಸೇವೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಬಾಜಪೇಯಿ ಮಾತನಾಡಿ, ಹಾವೇರಿಮತ್ತು ರಾಣಿಬೆನ್ನೂರು ಪ್ರಯಾಣಿಕರಿಗೆನೆರವಾಗಲಿ ಎನ್ನುವ ಕಾರಣಕ್ಕೆ ಎರಡುನಗರದ ಬಸ್ ನಿಲ್ದಾಣಕ್ಕೆ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸುಮಾರು2.45 ತಾಸಿನಲ್ಲಿ ಹುಬ್ಬಳ್ಳಿ-ದಾವಣಗೆರೆ ಬಸ್ ಸಂಚಾರ ಮಾಡಲಿವೆ. ಐಷಾರಾಮಿ ಸಾರಿಗೆಯೊಂದಿಗೆ ಕಡಿಮೆ ಸಮಯದಲ್ಲಿ ತಲುಪಬಹುದಾಗಿದೆ.ಬೇಡಿಕೆ ಬಂದರೆ ಇನ್ನಷ್ಟು ಬಸ್‌ಗಳನ್ನು ಬಿಡಲಾಗುವುದು. ಮುಂದಿನ ದಿನಗಳಲ್ಲಿ ಹುಬ್ಬಳ್ಳಿ-ವಿಜಯಪುರ,ಹುಬ್ಬಳ್ಳಿ-ಗದಗ ಮಾರ್ಗದಲ್ಲೂ ಈ ಸೇವೆವಿಸ್ತರಿಸಲಾಗುವುದು ಎಂದು ತಿಳಿಸಿದರು.ಸಂಸ್ಥೆ ಮಂಡಳಿ ನಿರ್ದೇಶಕರಾದಅಶೋಕ ಮಳಗಿ, ಸಿದ್ದಲಿಂಗೇಶ ಮಠದ,ವಿಭಾಗೀಯ ನಿಯಂತ್ರಣಾ ಧಿಕಾರಿ ಎಚ್. ರಾಮನಗೌಡ್ರ, ವಿಭಾಗೀಯ ಸಾರಿಗೆ ಅಧಿಕಾರಿ ಎಸ್.ಎಂ, ಮುಜಮದಾರ,ಅಧಿಕಾರಿಗಳಾದ ಕಿರಣ ಬಸಾಪುರ,ಸುನೀಲ ವಾಡೇಕರ್, ನಾಗಮಣಿಭೋವಿ, ವೈ.ಎಂ. ಶಿವರಡ್ಡಿ, ಎಸ್.ಎಂ. ಗರಗ, ಅಶೋಕ ಡೇಂಗಿ ಇನ್ನಿತರರಿದ್ದರು.