Advertisement

ಮಹಿಳಾ ಶಕ್ತಿಗೆ ಸಂಪುಟ ಅಸ್ತು

06:10 AM Nov 23, 2017 | Harsha Rao |

ಹೊಸದಿಲ್ಲಿ: ಮಹಿಳಾ ಸಬಲೀಕರಣದತ್ತ ಮಹತ್ವದ ಹೆಜ್ಜೆಯಿಟ್ಟಿರುವ ಕೇಂದ್ರ ಸರಕಾರವು ದೇಶದ ಅತ್ಯಂತ ಹಿಂದುಳಿದ 115 ಜಿಲ್ಲೆಗಳನ್ನು ಆಯ್ಕೆ ಮಾಡಿ, ಅಲ್ಲಿ “ಮಹಿಳಾ ಶಕ್ತಿ ಕೇಂದ್ರ’ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಈ ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆಯೂ ದೊರೆತಿದೆ.

Advertisement

ಇಂಥ ಕೇಂದ್ರಗಳ ಮೂಲಕ ಗ್ರಾಮೀಣ ಮಹಿಳೆಯರನ್ನು ತಲುಪಿ, ಅವರಲ್ಲಿ ಕೌಶಲಾಭಿವೃದ್ಧಿ, ಉದ್ಯೋಗ, ಡಿಜಿಟಲ್‌ ಸಾಕ್ಷರತೆ, ಆರೋಗ್ಯ ಮತ್ತು ಪೌಷ್ಟಿಕಾಂಶದ ಸೌಲಭ್ಯ ಒದಗಿಸುವುದು ಸರಕಾರದ ಉದ್ದೇಶ ವಾಗಿದೆ. ಈ ವರ್ಷದ ಬಜೆಟ್‌ ಭಾಷಣದಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟಿÉ ಅವರೇ 14 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಮಹಿಳಾ ಶಕ್ತಿ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಹೇಳಿ, ಈ ಯೋಜನೆಗಾಗಿ 500 ಕೋಟಿ ರೂ. ಅನುದಾನ ವನ್ನೂ ಘೋಷಿಸಿದ್ದರು.

920 ಕೇಂದ್ರಗಳು: ಇದೀಗ ಕರ್ನಾಟಕದ್ದೂ ಸೇರಿದಂತೆ ದೇಶದ 115 ಹಿಂದುಳಿದ ಜಿಲ್ಲೆಗಳಲ್ಲಿ 920 ಮಹಿಳಾ ಶಕ್ತಿ ಕೇಂದ್ರಗಳನ್ನು ಬ್ಲಾಕ್‌ ಮಟ್ಟದಲ್ಲಿ ಸ್ಥಾಪಿಸಲು ಸಂಪುಟ ಅನುಮತಿ ನೀಡಿದೆ. ಸ್ಥಳೀಯ ಕಾಲೇಜುಗಳ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಪ್ರತಿನಿಧಿಗಳು ಈ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದೂ ಸಚಿವರು ತಿಳಿಸಿದ್ದಾರೆ.

ದಿವಾಳಿತನ ಕಾನೂನು ತಿದ್ದುಪಡಿಗೆ ಅಧ್ಯಾದೇಶ: ದಿವಾಳಿತನ ಕಾಯ್ದೆಯಲ್ಲಿ ಕೆಲವೊಂದು ತಿದ್ದುಪಡಿ ತರುವ ನಿಟ್ಟಿನಲ್ಲಿ ಸದ್ಯದಲ್ಲೇ ಅಧ್ಯಾದೇಶ ತರಲು ಕೇಂದ್ರ ಸಂಪುಟ ನಿರ್ಧರಿಸಿದೆ. ದೇಶದಲ್ಲಿ ದಿವಾಳಿತನದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ನಿಯಮಗಳನ್ನು ಬಿಗಿಗೊಳಿಸುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. 

ನ್ಯಾಯಮೂರ್ತಿಗಳ ವೇತನ ಹೆಚ್ಚಳಕ್ಕೆ ಒಪ್ಪಿಗೆ
ಸುಪ್ರೀಂ ಕೋರ್ಟ್‌ ಹಾಗೂ 24 ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ವೇತನ ಹೆಚ್ಚಳದ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸಂಸತ್‌ನಲ್ಲಿ ಮಂಡಿಸಲಾಗುವುದು ಎಂದು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ತಿಳಿಸಿದ್ದಾರೆ. ವೇತನ ಹೆಚ್ಚಳ ಪ್ರಸ್ತಾಪದಲ್ಲಿರುವಂತೆ, ಇನ್ನು ಮುಂದೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ತಿಂಗಳಿಗೆ 2.80 ಲಕ್ಷ ರೂ. ವೇತನ ಪಡೆದರೆ, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳು ಮತ್ತು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮಾಸಿಕ 2.50 ಲಕ್ಷ ರೂ., ಹೈಕೋರ್ಟ್‌ ಜಡ್ಜ್ಗಳು 2.25 ಲಕ್ಷ ರೂ. ವೇತನ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪರಿಷ್ಕೃತ ವೇತನ ಮತ್ತು ನಿವೃತ್ತ ನ್ಯಾಯಮೂರ್ತಿಗಳ ಪಿಂಚಣಿಯ ಮೊತ್ತವು 2016ರ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಸಿಗಲಿದೆ. 2016ರಲ್ಲಿ ಅಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಟಿ.ಎಸ್‌.ಠಾಕೂರ್‌ ಅವರು ಜಡ್ಜ್ಗಳ ವೇತನವನ್ನು ಹೆಚ್ಚಿಸುವಂತೆ ಸರಕಾರಕ್ಕೆ ಪತ್ರ ಬರೆದಿದ್ದರು.

Advertisement

ಡಿ.15ರಿಂದ ಚಳಿಗಾಲದ ಅಧಿವೇಶನ
ಗುಜರಾತ್‌ ಅಸೆಂಬ್ಲಿ ಚುನಾವಣೆಯ ಎರಡನೇ ಹಂತ ಮುಗಿದ ಮಾರನೇ ದಿನವೇ ಅಂದರೆ ಡಿ.15ರಿಂದ ಸಂಸತ್‌ನ ಚಳಿಗಾಲದ ಅಧಿವೇಶನ ನಡೆಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ. ಕೇಂದ್ರ ಸರಕಾರವು ಅಧಿವೇಶನವನ್ನು ವಿಳಂಬ ಮಾಡುತ್ತಿದ್ದು, ದಿನಾಂಕ ಪ್ರಕಟಿಸುತ್ತಿಲ್ಲ ಎಂದು ವಿಪಕ್ಷಗಳು ಆರೋಪ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಗೃಹ ಸಚಿವ ರಾಜನಾಥ್‌ಸಿಂಗ್‌ ನೇತೃತ್ವದ ಸಂಸದೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ಬುಧವಾರ ಸಭೆ ನಡೆಸಿ, ದಿನಾಂಕದ ಕುರಿತು ಚರ್ಚಿಸಿದ್ದಾರೆ. ಅದರಂತೆ, ಅಧಿ ವೇಶನವು ಡಿ.15ರಿಂದ ಜ.5ರವರೆಗೆ ನಡೆಯುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next