ಕೀವ್: ಫೆಬ್ರವರಿ 24ರಂದು ಆರಂಭವಾದ ಉಕ್ರೇನ್- ರಷ್ಯಾ ನಡುವಿನ ಯುದ್ಧ ಇನ್ನೂ ಮುಂದಿವರಿದಿದೆ. ಉಕ್ರೇನ್ ನ ಹಲವಾರು ನಗರಗಳಲ್ಲಿ ದಾಳಿ ಮಾಡಿರುವ ರಷ್ಯಾ, ಕೋಟ್ಯಾಂತರ ರೂ ನಷ್ಟಕ್ಕೆ ಕಾರಣವಾಗಿದೆ. ಇದುವರೆಗಿನ ಯುದ್ಧದಲ್ಲಿ ಸುಮಾರು ಮೂರು ಸಾವಿರು ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ರಷ್ಯಾ ವಿರುದ್ಧದ ಕಾಳಗದಲ್ಲಿ ಉಕ್ರೇನ್ ತನ್ನ ಸುಮಾರು ಮೂರು ಸಾವಿರ ಮಂದಿ ಯೋಧರನ್ನು ಕಳೆದುಕೊಂಡಿದೆ. ಸುಮಾರು ಹತ್ತು ಸಾವಿರ ಮಂದಿ ಸೈನಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಎಷ್ಟು ಮಂದಿ ಬದುಕಿ ಉಳಿಯುತ್ತಾರೆಂದು ಹೇಳುವುದು ಕಷ್ಟ ಎಂದು ಝೆಲೆನ್ಸ್ಕಿ ಹೇಳಿಕೊಂಡಿದ್ದಾರೆ.
ಈ ತನ್ಮಧ್ಯೆ, ರಷ್ಯಾದ ವಾಪಸಾತಿ ನಂತರ ಉಕ್ರೇನ್ ರಾಜಧಾನಿ ಕೀವ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ 900 ಕ್ಕೂ ಹೆಚ್ಚು ನಾಗರಿಕರ ಶವಗಳು ಪತ್ತೆಯಾಗಿವೆ. ಅವರಲ್ಲಿ ಹೆಚ್ಚಿನವರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಇದನ್ನೂ ಓದಿ:ಜು.1ರಿಂದ ಪಂಜಾಬ್ ನಲ್ಲಿ 300 ಯೂನಿಟ್ಸ್ ಗೃಹ ಬಳಕೆ ವಿದ್ಯುತ್ ಉಚಿತ: ಭಗವಂತ್ ಮಾನ್
ರಷ್ಯಾದ ಪ್ರದೇಶಗಳ ಮೇಲೆ ಉಕ್ರೇನ್ ದಾಳಿ ಮಾಡಿದ ಬಳಿಕ ಕೀವ್ ಮೇಲೆ ಕ್ಷಿಪಣಿ ದಾಳಿ ನಡೆಸುವುದಾಗಿ ರಷ್ಯಾ ಹೇಳಿಕೊಂಡಿದೆ. ಇದಾದ ಕೆಲ ಸಮಯದಲ್ಲೇ ಉಕ್ರೇನ್ ಅಧ್ಯಕ್ಷರು ಈ ಸಾವು ನೋವಿನ ಲೆಕ್ಕ ನೀಡಿದ್ದಾರೆ.