Advertisement

ಆಪ್ತರಿಂದಲೇ ವ್ಲಾದಿಮಿರ್‌ ಪುಟಿನ್‌ ಹತ್ಯೆ: ಝೆಲೆನ್‌ಸ್ಕಿ

11:00 PM Feb 27, 2023 | Team Udayavani |

ಕೀವ್‌: ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರು ತಮ್ಮ ಆಪ್ತ ವಲಯದಿಂದಲೇ ಹತ್ಯೆಯಾಗಲಿದ್ದಾರೆ ಎಂದು ಉಕ್ರೇನ್‌ ಅಧ್ಯಕ್ಷ ವೊಲಾಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ.

Advertisement

ಯುದ್ಧಕ್ಕೆ 1 ವರ್ಷ ಸಂದ ಹಿನ್ನೆಲೆ ಶುಕ್ರವಾರ ಬಿಡುಗಡೆಯಾದ ಸಾಕ್ಷ್ಯಚಿತ್ರ “ಇಯರ್‌’ನಲ್ಲಿ ಮಾತನಾಡಿರುವ ಝೆಲೆನ್‌ಸ್ಕಿ ಈ ಹೇಳಿಕೆ ನೀಡಿದ್ದಾರೆ. “ಪುಟಿನ್‌ ಆಡಳಿತದ ದೌರ್ಬಲ್ಯವನ್ನು ರಷ್ಯಾದೊಳಗೆ ಅನುಭವಿಸುವ ಕ್ಷಣ ಖಂಡಿತವಾಗಿ ಬರಲಿದೆ. ಪರಭಕ್ಷಕರು ಪರಭಕ್ಷಕನನ್ನೇ ತಿನ್ನುತ್ತಾರೆ. ಅವರು ಹಂತಕನನ್ನೇ ಹತ್ಯೆ ಮಾಡುತ್ತಾರೆ. ಆಗ ನನ್ನ ಮಾತುಗಳನ್ನು ನೆನಪಿಸಿಕೊಳ್ಳುತ್ತಾರೆ. ಅವರು ಹಂತಕನನ್ನು ಹತ್ಯೆ ಮಾಡಲು ಕಾರಣ ಕಂಡುಕೊಳ್ಳುತ್ತಾರೆ. ಇದು ಯಾವಾಗ ಘಟಿಸಲಿದೆ? ಎಂದು ಕೇಳಿದರೆ, ನನಗೆ ಗೊತ್ತಿಲ್ಲ,’ ಎಂದು ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next