ಬೆಂಗಳೂರು: ಜಾಗತಿಕ ಮುಂಚೂಣಿ ಕಾರ್ ತಯಾರಿಕಾ ಕಂಪನಿಯಾದ ವೋಕ್ಸ್ ವ್ಯಾಗನ್ ತನ್ನ ಹೊಸ “ಎಸ್‌ಯುವಿ ಡಬ್ಲ್ಯೂ ಟೈಗನ್’ ಕಾರು ಭಾರತೀಯ ಗ್ರಾಹಕರಿಗೆ ಪರಿಚಯಿಸಿದ್ದು, ಬೆಂಗಳೂರಿನಲ್ಲಿ ಅದರ ಮೊದಲ ಹಂತದ ವಿಶೇಷ ಪೂರ್ವ ವೀಕ್ಷಣೆಗೆ ಚಾಲನೆ ನೀಡಲಾಗಿದೆ.
ಟೈಗನ್ ವಿಶೇಷ ಪೂರ್ವ ವೀಕ್ಷಣೆಯನ್ನು ಖ್ಯಾತ ನಟಿ ಕೃತಿ ಖರಬಂದಾ ಶನಿವಾರ ಅನಾವರಣಗೊಳಿಸಿದರು. ಆ. 21 ಮತ್ತು 22ರಂದು ಬೆಂಗಳೂರಿನಲ್ಲಿ ಟೈಗನ್ ಪೂರ್ವವೀಕ್ಷಣೆ ಇರಲಿದೆ.
ಬೆಂಗಳೂರು ಬಳಿಕ ಆ.28-29ರಂದು ಚೆನ್ನೈನಲ್ಲಿ, ಸೆ. 4-5 ಕೋಯಿಮತ್ತೂರು, ಸೆ. 11-12ರಂದು ಹೈದರಾಬಾದ್, ಮುಂಬೈ, ಸೆ. 18-19ರಂದು ಕೋಲ್ಕತ್ತಾ, ಚಂಡಿಗಢ, ಅಹಮದಾಬಾದನಲ್ಲಿ ಟೈಗನ್ ಪೂರ್ವವೀಕ್ಷಣೆ ನಡೆಯಲಿದೆ. ಬಹು ನಿರೀಕ್ಷಿತ ಈ ಟೈಗನ್ ಸೆಪ್ಟಂಬರ್‌ನಲ್ಲಿ ಮಾರುಕಟ್ಟೆಗೆ ಬಿಡುಗೊಳ್ಳಲಿದೆ.
ಇದನ್ನೂ ಓದಿ:ಈ ಬಾರಿಯ ಐಪಿಎಲ್ ಗೆ ಜೋಸ್ ಬಟ್ಲರ್ ಗೈರು: ರಾಯಲ್ಸ್ ಗೆ ಗ್ಲೆನ್ ಫಿಲಿಪ್ ಸೇರ್ಪಡೆ
ವೋಕ್ಸ್‌ವ್ಯಾಗನ್ ಟೈಗನ್ ಮೊದಲಬ್ರಾಂಡ್ ಭಾರತ 2.0 ಯೋಜನೆಯ ಉತ್ಪನ್ನವಾಗಿದೆ. ಜಾಗತಿಕ ಖ್ಯಾತಿಯ ಟಿಎಸ್‌ಐ ಇಂಜನ್ ತಂತ್ರಜ್ಞಾನದ ಶಕ್ತಿಯನ್ನು ಟೈಗನ್ ಪಡೆದುಕೊಂಡಿದೆ. 1.5ಎಲ್ ಇಂಜನ್‌ನಲ್ಲಿ ಇದು ಲಭ್ಯವಾಗಲಿದೆ. 7-ಸ್ಪೀಡ್ ಡಿಎಸ್‌ಜಿ ಮತ್ತು 6-ಸ್ಪೀಡ್ ಮ್ಯಾನುಯೆಲ್ ಟ್ರಾನ್ಸ್‌ಮಿಷನ್ ಮತ್ತು 1.0ಎಲ್ ಇಂಜನ್ 6-ಸ್ಪೀಡ್ ಅಟೋಮ್ಯಾಟಿಕ್ ಹಾಗೂ ಮ್ಯಾನುಯೆಲ್ ಟ್ರಾನ್ಸ್‌ಮಿಷನ್ ಇದು ಹೊಂದಿದೆ. ದೇಶದಲ್ಲಿ 40ಕ್ಕೂ ಹೆಚ್ಚು ಡೀಲರ್‌ಶಿಪ್ ಗಳನ್ನು ವೋಕ್ಸ್‌ವ್ಯಾಗನ್ ಹೊಂದಿದೆ.
ಬೆಂಗಳೂರಿನ ಪೂರ್ವವೀಕ್ಷಣೆ ವೇಳೆ ಮಾತನಾಡಿದ ವೋಕ್ಸ್‌ವ್ಯಾಗನ್ ಪ್ಯಾಸೆಂಜರ್ ಕಾರ್ ಇಂಡಿಯಾ ಇದರ ಬ್ರಾಂಡ್ ನಿರ್ದೇಶಕ ಆಶಿಶ್ ಗುಪ್ತಾ, ಟೈಗನ್ ಬೋಲ್ಡ್, ಡೈನಾಮಿಕ್ ಮತ್ತು ಜರ್ಮನ್ ತಂತ್ರಜ್ಞಾನದ ಎಸ್ ಯುವಿಡಬ್ಲ್ಯೂ ಭಾರತೀಯ ಗ್ರಾಹಕರಿಗೆ ಬೇಡಿಕೆಗಳ ಪರಿಪೂರ್ಣ ಈಡೇರಿಕೆಯಾಗಿದೆ. ಖರೀದಿಗೆ ಮುಕ್ತ ನೋಂದಣಿ ಆರಂಭವಾದ ಕಳೆದ ಎರಡು ದಿನಗಳಲ್ಲಿ ದೇಶಾದ್ಯಂತ 5 ಸಾವಿರಕ್ಕೂ ಹೆಚ್ಚು ಗ್ರಾಹಕರು ಖರೀದಿಗೆ ನೋಂದಾಯಿಸಿಕೊಂಡಿದ್ದಾರೆ ಎಂದರು