ಬಂಟ್ವಾಳ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತಿಯಿಂದ ಮೈಸೂರು ವಿಭಾಗ ಮಟ್ಟದ ಪ್ರತಿನಿಧಿಗಳ ಸಂಕಲ್ಪ ಸಮಾವೇಶವು ಜ. 6ರಂದು ಬಿ.ಸಿ.ರೋಡಿನ ಸಾಗರ್ ಆಡಿಟೋರಿಯಂನಲ್ಲಿ ಉದ್ಘಾಟನೆಗೊಂಡಿತು.
ಸಮಾವೇಶವನ್ನು ಉದ್ಘಾಟಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ಈ ವರ್ಷವನ್ನು ಕಾಂಗ್ರೆಸ್ ಪಕ್ಷವು ಹೋರಾಟದ ವರ್ಷವನ್ನಾಗಿ ತೆಗೆದುಕೊಂಡಿದ್ದು, ಹೀಗಾಗಿ ತಳಮಟ್ಟದಿಂದಲೇ ಸ್ಥಳೀಯ ಸಮಸ್ಯೆಗಳ ಕುರಿತು ಹೋರಾಟವನ್ನು ಸಂಘಟಿಸಬೇಕಿದೆ. ಜತೆಗೆ ಹೊರಾಟ ನಾಯಕರ ಮೂಲಕ ಪಕ್ಷ ಕಟ್ಟುವ ಕಾರ್ಯ ಆಗಬೇಕು. ಈ ಸ್ಥಾನವನ್ನು ತಾನು ಅಧಿಕಾರ ಎಂದು ತಿಳಿದುಕೊಳ್ಳದೆ ಜವಾಬ್ದಾರಿಯಾಗಿ ಸ್ವೀಕರಿಸಿದ್ದೇನೆ. ಕಾರ್ಯಕರ್ತರ ಧ್ವನಿಯೇ ಕೆಪಿಸಿಸಿ ಅಧ್ಯಕ್ಷರ ಧ್ವನಿಯಾಗಿದೆ.
ಕೋವಿಡ್ ಸಂಕಷ್ಟದ ಕಾಲಘಟ್ಟದಲ್ಲೇ ಸರಕಾರ ಟ್ಯಾಕ್ಸ್ ಹೆಚ್ಚಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಈ ಬಾರಿ ಸಮಯ ಹೊಂದಾಣಿಕೆ ಮಾಡಿಕೊಂಡು 100ರಿಂದ 150 ಕ್ಷೇತ್ರಗಳಲ್ಲಿ ಸಂಚಾರ ಮಾಡಿ ಪಕ್ಷ ಕಟ್ಟುವ ಕೆಲಸ ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾನೂನು ಅಗತ್ಯವಿರಲಿಲ್ಲ; ಸಿದ್ದರಾಮಯ್ಯ ಹೇಳಿಕೆ ಅವರ ವೈಯಕ್ತಿಕ: ಡಿಕೆಶಿ
ಸಮಾವೇಶದಲ್ಲಿ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಎಐಸಿಸಿ ಕಾರ್ಯದರ್ಶಿ ವಿಷ್ಣುನಾಥನ್, ಮಾಜಿ ಸಚಿವ-ಶಾಸಕ ಯು.ಟಿ.ಖಾದರ್, ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್‌ಕುಮಾರ್, ವಿಧಾನ ಪರಿಷತ್ ವಿಪಕ್ಷ ಮುಖ್ಯಸಚೇತಕ ನಾರಾಯಣ ಸ್ವಾಮಿ, ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಯು.ಬಿ.ವೆಂಕಟೇಶ್, ಪ್ರಮುಖರಾದ ವಿನಯಕುಮಾರ್ ಸೊರಕೆ, ಬಿ.ಎಲ್.ಶಂಕರ್, ಧ್ರುವನಾರಾಯಣ, ವಿ.ಎಸ್.ಉಗ್ರಪ್ಪ, ಡಿ.ಕೆ.ತಾರಾದೇವಿ, ಪುಷ್ಪಾ ಅಮರನಾಥ್, ತನ್ವೀರ್ ಸೇಟ್, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಚಂದ್ರಶೇಖರ್ ಸಿ, ಮೋಟಮ್ಮ ಮೊದಲಾದವರು ಪಾಲ್ಗೊಂಡಿದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ ಸ್ವಾಗತಿಸಿದರು. ಪಕ್ಷದ ಮುಂದಾಳು ವಿ.ಆರ್. ಸುದರ್ಶನ್ ಕಾರ್ಯಕ್ರಮ ನಿರ್ವಹಿಸಿದರು.
ಇದನ್ನೂ ಓದಿ: ಕೇಂದ್ರಾಡಳಿತಕ್ಕೂ ಮುನ್ನ CM ಮುಫ್ತಿ 6 ತಿಂಗಳಲ್ಲಿ 82 ಲಕ್ಷ ಖರ್ಚು: RTIನಲ್ಲಿ ವಿವರ ಬಹಿರಂಗ