Advertisement

ಧ್ವನಿ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆ

04:47 PM Mar 08, 2021 | Team Udayavani |

ದುಬೈ:ಯುಎಇ ಯ ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಕನಕರಾಜ್‌ ಬಾಲಸುಬ್ರಹ್ಮಣ್ಯ ಅವರ ಕಥೆ “ಆಕಾಶ ಜಿಂಕೆ’ ಗೆ ಪ್ರಥಮ ಬಹುಮಾನ ಲಭಿಸಿದೆ.

Advertisement

ಇಂಗ್ಲೆಂಡ್‌ನ‌ ಡಾ| ಪ್ರೇಮಲತಾ ಬಿ. ಅವರ ಕಥೆ “ತರ್ಕ’ ಹಾಗೂ ದುಬಾೖಯ ಇಶಾìದ್‌ ಮೂಡುಬಿದಿರೆ ಅವರ ಕಥೆ “ಅನಾಥ’ ದ್ವಿತೀಯ ಬಹುಮಾನ ಗಳಿಸಿದೆ.
ತೃತೀಯ ಹಾಗೂ ಸಮಾಧಾನಕರ ಬಹುಮಾನಕ್ಕೆ ರಜನಿ ಭಟ್‌ ಅಬುದಾಭಿ ಅವರ ಕಥೆ “ತುಕ್ಕು ಹಿಡಿದ ಎಟಿಎಂ’, ಡಾ| ಸವಿತಾ ನಟರಾಜ (ಬಸಾಪುರ) ಕುವೈಟ್‌ ಅವರ ಕಥೆ “ಮರಳುನಾಡಿನಲ್ಲೊಂದು ಮನೆಯ ಮಾಡಿ’, ಯಶೋಧಾ ಭಟ್‌ ದುಬಾೖ ಅವರ ಕಥೆ “ಸುಭದ್ರಾ’ ಆಯ್ಕೆಯಾಗಿದೆ.

ಪ್ರಥಮ ಬಹುಮಾನ 10 ಸಾವಿರ ರೂ. ಮತ್ತು ಪ್ರಶಸ್ತಿ ಫ‌ಲಕ, ದ್ವಿತೀಯ 5 ಸಾವಿರ ರೂ. ಮತ್ತು ಸಮಾಧಾನಕರ ಬಹುಮಾನವಾಗಿ 1,500 ರೂ. ನೀಡಿ ಗೌರವಿಸಲಾಗುವುದು.
ಸುಪ್ರಸಿದ್ಧ ಸಾಹಿತಿಗಳಾದ ವೈದೇಹಿ, ಕುಂ. ವೀರಭದ್ರಪ್ಪ, ಚಿಂತಾಮಣಿ ಕೊಡ್ಲೆಕೆರೆ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು.

ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಕಥೆಗಾರರು ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ಆಯ್ಕೆ ಮಾಡಿದ ಕಥೆಗಳು ಹಾಗೂ ಆಹ್ವಾನಿತ ಅನಿವಾಸಿ ಕಥೆಗಾರರ ಕಥೆಗಳ ಕಥಾ ಸಂಕಲನ ವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್‌ ರಾವ್‌ ಪಯ್ನಾರ್‌ ತಿಳಿಸಿದ್ದಾರೆ.

ಹೈಸ್ಕೂಲ್‌ ನಲ್ಲಿ ಕನ್ನಡ ಕಲಿ ಕೆಗೆ ಹೆಸರು ನೋಂದಾಯಿಸಿ

Advertisement

ಮಿಲ್ಟಿಟಾಸ್‌:ಅಮೆ ರಿಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷೆಯು ಪಬ್ಲಿಕ್‌ ಹೈಸ್ಕೂಲ್‌ಗ ಳಲ್ಲಿ ಐಚ್ಛಿಕ ವಿದೇಶಿ ಭಾಷೆ ಯಾಗಿ 2020ರಲ್ಲಿ ಸ್ವೀಕೃ ತ ವಾ ಗಿದೆ. ಕ್ಯಾಲಿ ಫೋ ರ್ನಿಯಾ ಕನ್ನ ಡ  ಕೂ ಟದ ನಮ್ಮ ಕನ್ನಡ ಕಲಿ ತಂಡದಿಂದ ಮಕ್ಕ ಳಿಗೆ ಹೈಸ್ಕೂಲ್‌ ಮಟ್ಟ ದಲ್ಲಿ ಕನ್ನಡ ಭಾಷೆ ಯನ್ನು ಕಲಿಸಲು ಫ್ರೆಮೊಂಟ್‌ ಯೂನಿ ಯನ್‌ ಸ್ಕೂಲ್‌ ಡಿಸ್ಟ್ರಿ ಕ್ಟ್‌ನ ಕುಪ ರ್ಟಿನೋ, ಫ್ರೆಮೊಂಟ್‌ ಹೋಮ್‌ ಸ್ಟೇಡ್‌ ಲಿನೊº†ಕ್‌ ಆ್ಯಂಡ್‌ ಮೊಂಟಾ ವಿಸ್ಟಾ ಹೈಸ್ಕೂಲ್‌ನಲ್ಲಿ ಅವ ಕಾ ಶ ವಿದೆ. ಈ ಶಾಲೆಯ ಆಸಕ್ತ ವಿದ್ಯಾ ರ್ಥಿ ಗ ಳು ಶಾಲೆಯಿಂದ ಅನು ಮೋ ದ ನೆ ಪಡೆ ದು ಕೊಂಡು ಎಚ್‌ ಎ ಸ್‌ ಸಿ ಪಿ- 1 (ಹೈಸ್ಕೂಲ್‌ ಕ್ರೆಡಿಟ್‌ ಪ್ರೋಗ್ರಾ ಮ್‌) ರಲ್ಲಿ ನೋಂದಾ ಯಿ ಸಿ ಕೊ ಳ್ಳ ಬ ಹುದು ಎಂದು ಮಿಲ್ಟಿ ಟಾಸ್‌ ಮತ್ತು ಕುಪ ರ್ಟಿನೋ ಕೇಂದ್ರದ ಕನ್ನಡ ಕಲಿ ತಂಡ ಪ್ರಕ ಟ ನೆ ಯಲ್ಲಿ ತಿಳಿ ಸಿ ದೆ.

Advertisement

Udayavani is now on Telegram. Click here to join our channel and stay updated with the latest news.

Next