Advertisement

ಧ್ವನಿ ಬದಲಾವಣೆ ಕಾರಣಗಳು ಮತ್ತು ಚಿಕಿತ್ಸಾ ಮಾರ್ಗಗಳು

07:00 PM Jan 18, 2020 | Sriram |

ನಮ್ಮ ಸಮಾಜದಲ್ಲಿ ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳು ಬಹಳ ಸಾಮಾನ್ಯವಾಗಿವೆ. ಆದರೆ ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ. ಧ್ವನಿ ಸಮಸ್ಯೆಗಳು ನಮ್ಮ ದೈನಿಕ ಬದುಕಿಗೆ ಅಡ್ಡಿಯಾಗುವ ಕಾಯಿಲೆಯಾಗಿರದೆ ಜೀವನ ಸೌಂದರ್ಯ, ಸುಸ್ವರೂಪಕ್ಕೆ ಸಂಬಂಧಿಸಿದ ತೊಂದರೆಯಾಗಿರುವುದೇ ಇದಕ್ಕೆ ಕಾರಣ.

Advertisement

ಧ್ವನಿ ಸಮಸ್ಯೆಗಳಿಗೆ ಸಂಬಂಧಿಸಿ ಬಳಕೆಯಾಗುವ ಕೆಲವು ವೈದ್ಯಕೀಯ ಪಾರಿಭಾಷಿಕ ಪದಗಳು ಹೀಗಿವೆ:
1. ಡಿಸ್ಫೋನಿಯಾ: ಮಾತನಾಡಲು ಕಷ್ಟವಾಗುವುದು.
2. ಡಿಸಾಥ್ರಿìಯಾ: ಧ್ವನಿ ಸ್ನಾಯುಗಳ ವೈಕಲ್ಯದಿಂದಾಗಿ ಧ್ವನಿ ರೂಪುಗಳ್ಳುವುದಕ್ಕೆ ಕಷ್ಟವಾಗುವುದು.
3. ಡಿಸಾಥ್ರೊìಫೋನಿಯಾ: ಡಿಸ್ಫೋನಿಯಾ+ ಡಿಸಾಥ್ರಿìಯಾ ಸಾಮಾನ್ಯವಾಗಿ ಸಿಎನ್‌ಎಸ್‌ ಕಾಯಿಲೆಗಳಲ್ಲಿ ಉಂಟಾಗುತ್ತದೆ.
4. ಡಿಸೆ#àಸಿಯಾ: ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಅಸಾಮರ್ಥ್ಯ.
5. ದೊರಗು ಸ್ವರ: ಕರ್ಕಶವಾದ ಸ್ವರ.

ಧ್ವನಿ ಸಮಸ್ಯೆಗಳು ಕಾಣಿಸಿಕೊಂಡಾಗ ಸಾಧ್ಯವಾದಷ್ಟು ಬೇಗನೆ ವೈದ್ಯಕೀಯ ಸಹಾಯವನ್ನು ಪಡೆದುಕೊಳ್ಳಬೇಕು. ಸಮಸ್ಯೆಯು ದೀರ್ಘ‌ಕಾಲ ನಿರ್ಲಕ್ಷಿತವಾದರೆ ಅಂತಹ ರೋಗಿಗಳಲ್ಲಿ ಫೊನೇಟ್‌ಗೆ ಪರಿಹಾರಾತ್ಮಕ ವ್ಯವಸ್ಥೆ ರೂಪುಗೊಂಡು ಮೂಲ ಸಮಸ್ಯೆಯ ರೋಗೇತಿಹಾಸವು ಮರೆಮಾಚಲ್ಪಡಬಹುದು.

ಧ್ವನಿ ಸಮಸ್ಯೆಗಳು ಉಂಟಾಗಲು
ಹಲವು ಕಾರಣಗಳಿರುತ್ತವೆ:
1. ಸ್ಟ್ರಕ್ಚರಲ್‌/ ನಿಯೋಪ್ಲಾಸ್ಟಿಕ್‌
2. ಉರಿಯೂತ
3. ನರ-ಸ್ನಾಯುಗಳಿಗೆ ಸಂಬಂಧಿಸಿದ್ದು

– ಎಲ್ಲ ಕಾರಣಗಳು ಕೂಡ ಚಿಕಿತ್ಸೆಗೆ ಒಳಪಡಿಸಬಹುದಾದಂಥವು ಮತ್ತು ಪ್ರಾಣಾಪಾಯಕಾರಿಯಲ್ಲ.
– ಆದರೆ ಕೆಲವು ಪ್ರಕರಣಗಳಲ್ಲಿ ಗ್ಲಾಟಿಕ್‌ ಕಾರ್ಸಿನೋಮಾದ ಅಪಾಯವಿರುತ್ತದೆ.

Advertisement

– ಗ್ಲಾಟಿಕ್‌ ಕಾರ್ಸಿನೊಮಾವು ಸ್ವಲ್ಪ ಸಮಯದ ಬಳಿಕ ಕೀರಲು ಸದ್ದಿನೊಂದಿಗೆ ಧ್ವನಿಯಲ್ಲಿ ಬದಲಾವಣೆಯ ಲಕ್ಷಣಗಳನ್ನು ಪ್ರದರ್ಶಿಸುತ್ತದೆ.

– ಆರಂಭಿಕ ಹಂತಗಳಲ್ಲಿ ಆಗಿರುವ ಹಾನಿಯನ್ನು ಟಾನ್ಸ್‌ಓರಲ್‌ ಮಾರ್ಗದ ಮೂಲಕ ಲೇಸರ್‌ ಸಹಾಯದಿಂದ ಸರಿಪಡಿಸಬಹುದಾಗಿದೆ ಹಾಗೂ ಧ್ವನಿತಂತುವಿನ ಸ್ವರೂಪ ಮತ್ತು ಕಾರ್ಯವನ್ನು ರಕ್ಷಿಸಬಹುದಾಗಿದೆ.

– ಮುಂದುವರಿದ ಹಂತಗಳಲ್ಲಿ ಟೋಟಲ್‌ ಲ್ಯಾರಿಂಜೆಕ್ಟೊಮಿ ಅಗತ್ಯವಾಗಬಹುದು, ಇದರಿಂದ ಶಾಶ್ವತ ಟ್ರೇಕಿಯೊಸ್ಟೊಮಿ ಸ್ಟೊಮಾ ಉಂಟಾಗಬಹುದು.

– ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಾಗೂ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಕ್ರಿಯೆಯ ಬಳಿಕ ಅಗತ್ಯಬಿದ್ದರೆ ಕಿಮೋರೇಡಿಯೋಥೆರಪಿಯ ಮೂಲಕ ರೋಗಿ ಬದುಕುಳಿಯುವ ಸಾಧ್ಯತೆ ಹೆಚ್ಚುತ್ತದೆ.

– ಅತ್ಯಂತ ಮುಂದುವರಿದ ಪ್ರಕರಣಗಳಲ್ಲಿ ಡಿಸ್ಟಾಂಟ್‌ ಮೆಟಾಸ್ಟಾಸಿಸ್‌ ಹೆಚ್ಚು ಸಾಮಾನ್ಯವಾಗಿ ಶ್ವಾಸಕೋಶ ಮತ್ತು ಮಿದುಳಿನಲ್ಲಿ ಉಂಟಾಗಬಹುದಾಗಿದೆ. ಇದಕ್ಕೆ ಉಪಶಾಮಕ ಕಿಮೋಥೆರಪಿಯು ಏಕಮಾತ್ರ ಚಿಕಿತ್ಸಾ ವಿಧಾನವಾಗಿರುತ್ತದೆ.

– ಪ್ರಾಥಮಿಕ ಹಂತಗಳಲ್ಲಿ ಪತ್ತೆಯಾ ದರೆ ಧ್ವನಿಯನ್ನು ಸಂರಕ್ಷಿಸಬಹುದಾಗಿದೆ. ಆದರೆ ರೋಗಪತ್ತೆಯಾಗು ವುದು ವಿಳಂಬವಾದರೆ ರೋಗಿಯು ಲ್ಯಾರಿಂಜೆಕ್ಟೊಮಿಗೆ ಒಳಗಾಗಬೇಕಾಗಬಹುದು ಮತ್ತು ಕೊನೆಯಲ್ಲಿ ಶಾಶ್ವತ ಟ್ರೇಕಿಯೊಸ್ಟೊಮಿ ಸ್ಟೋಮಾ ಹಾಗೂ ಸಂಪೂರ್ಣ ಧ್ವನಿನಷ್ಟ ಅನುಭವವಿಸಬೇಕಾಗಬಹುದು.

-ಡಾ| ಪಾಂಡುರಂಗ ಕಾಮತ್‌,
ಕನ್ಸಲ್ಟಂಟ್‌ ಇಎನ್‌ಟಿ
ಕೆಎಂಸಿ ಆಸ್ಪತ್ರೆ, ಡಾ| ಬಿ. ಆರ್‌. ಅಂಬೇಡ್ಕರ್‌ ವೃತ್ತ ಮತ್ತು ಅತ್ತಾವರ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next