ಮುಂಬಯಿ: ಭಾರತದ ಪ್ರಮುಖ ಟೆಲಿಕಾಂ ಆಪರೇಟರ್, ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐ) ಗುಜರಾತ್‌ನ ಗಾಂಧಿನಗರದಲ್ಲಿ ನಡೆಯುತ್ತಿರುವ 5ಜಿ ಪ್ರಯೋಗಗಳ ಸಮಯದಲ್ಲಿ ತನ್ನ ತಂತ್ರಜ್ಞಾನ ಪಾಲುದಾರ ನೋಕಿಯಾದೊಂದಿಗೆ 5ಜಿ ವಾಯ್‌ಸ್ ಓವರ್ ನ್ಯೂ ರೇಡಿಯೊ (ವಿಓಎನ್‌ಆರ್)ದ ಯಶಸ್ವಿ ಪ್ರಯೋಗ ನಡೆಸಿದೆ.
ವಾಯ್ಸ್ ಓವರ್ ನ್ಯೂ ರೇಡಿಯೋ (ವಿಓಎನ್‌ಆರ್) ಮೂಲಕ ಗ್ರಾಹಕರಿಗೆ 5ಜಿ ಯಲ್ಲಿ ಹೈ- ಡೆಫಿನಿಷನ್ ಧ್ವನಿ ಸೌಲಭ್ಯ ನೀಡುತ್ತದೆ.
ಗುಜರಾತ್‌ನ ಗಾಂಧಿನಗರ ಮತ್ತು ಮಹಾರಾಷ್ಟ್ರದ ಪುಣೆಯಲ್ಲಿ ಸರ್ಕಾರ ಮಂಜೂರು ಮಾಡಿದ 5ಜಿ ತರಂಗಾಂತರದಲ್ಲಿ ವಿಐ 5ಜಿ ಪ್ರಯೋಗಗಳನ್ನು ನಡೆಸುತ್ತಿದೆ.
ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಸಿಟಿಓ ಜಗಬೀರ್ ಸಿಂಗ್ ಮಾತನಾಡಿ, ನಮ್ಮ 5ಜಿ ಪ್ರಯೋಗಗಳ ಸಮಯದಲ್ಲಿ ನಾವು ಉನ್ನತ ನೆಟ್‌ವರ್ಕ್ ಸೌಲಭ್ಯ ನೀಡಲು, ನೋಕಿಯಾದಿಂದ ತಂತ್ರಜ್ಞಾನ ಸೌಲಭ್ಯ ಬಳಸಿಕೊಂಡು 5ಜಿ ನೆಟ್‌ವರ್ಕ್‌ಗಳಲ್ಲಿ ಅತ್ಯುತ್ತಮ ಕರೆ ಗುಣಮಟ್ಟವನ್ನು ಒದಗಿಸುವ ವಿಓಎನ್‌ಆರ್ ಸೇವೆಯನ್ನು ನಾವು ಈಗ ಯಶಸ್ವಿಯಾಗಿ ಪರೀಕ್ಷಿಸಿದ್ದೇವೆ. ಭವಿಷ್ಯದಲ್ಲಿ 5ಜಿ ಬಳಕೆದಾರರಿಗೆ ಧ್ವನಿ ಮತ್ತು ಡೇಟಾ ಸೇವೆಗಳಲ್ಲಿ ಅತ್ಯುತ್ತಮವಾದ ಸೇವೆಗಳನ್ನು ನೀಡುತ್ತೇವೆ ಎಂದರು.
ಈ ಹಿಂದೆ, ವಿಐ ಗಾಂಧಿನಗರದಲ್ಲಿ ನೋಕಿಯಾ ದೊಂದಿಗೆ 5ಜಿ ಪ್ರಯೋಗಗಳ ಸಮಯದಲ್ಲಿ, 4 ಜಿಬಿಪಿಎಸ್‌ಗಿಂತ ಹೆಚ್ಚಿನ ವೇಗವನ್ನು ದಾಖಲಿಸಿತು ಮತ್ತು ಎಐ ಆಧಾರಿತ ವಿಆರ್ ಸ್ಟ್ರೀಮಿಂಗ್, ರೋಲರ್ ಕೋಸ್ಟರ್ ಗೇಮಿಂಗ್, ವಿಆರ್ 5ಜಿ ಸಂಪರ್ಕಿತ ಶಾಲೆಗಳು ಮತ್ತು 360 ಡಿಗ್ರಿ ವಿಆರ್ ಕಂಟೆಂಟ್ ಪ್ಲೇಬ್ಯಾಕ್‌ನಂತಹ ಗ್ರಾಹಕ ಬಳಕೆಯ ಪ್ರಕರಣಗಳನ್ನು ಪ್ರದರ್ಶಿಸಿತು. ಗಾಂಧಿನಗರದಲ್ಲಿ ಗ್ರಾಮೀಣ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸಲು ಮಿಡ್- ಬ್ಯಾಂಡ್‌ನಲ್ಲಿ 5ಜಿ ಬಳಕೆಯನ್ನು ಪ್ರಯೋಗಿಸಿದೆ.