Advertisement
ಲೈಫ್ ಬಿಯಾಂಡ್ ಬ್ಯೂಟಿಯೂಟ್ಯೂಬ್ ಲಿಂಕ್- bit.ly/2Iny85z
Since 2018
ಚಂದಾದಾರರು- 1,30,000
ಕೆಟಗರಿ- ಲೈಫ್ಸ್ಟೈಲ್, ಮನೆ ನಿರ್ವಹಣೆ, ಆಹಾರ, ಪ್ರವಾಸ, ಮೇಕಪ್
ಪ್ರಾಯೋಜಕ ಸಂಸ್ಥೆಗಳು- ವಂಡರ್‌ಶೆಫ್, ಮೇಯರ್, ಲೋರಿಯಲ್
– ಅರ್ಪಿತಾ, ಈರೋಡ್
Related Articles
Advertisement
ಸಕ್ಕತ್ ಸ್ಟುಡಿಯೊಯೂಟ್ಯೂಬ್ ಲಿಂಕ್- bit.ly/3arq5R8
Since: 2014
ಕೆಟಗರಿ- ಮನರಂಜನೆ, ಕಿರುಚಿತ್ರ, ಆಲ್ಬಂ ಹಾಡು ಕನ್ನಡದಲ್ಲಿ ಯಾವುದೇ ರೀತಿಯ ವಿಡಿಯೋ ಕಂಟೆಂಟ್ ಮಾಡುವವರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸಕ್ಕತ್ ಸ್ಟುಡಿಯೋಅನ್ನು ಪ್ರಾರಂಭಿಸಿದೆವು. ಸುಮಾರು 5 ಲಕ್ಷಕ್ಕೂ ಹೆಚ್ಚು ಮಂದಿ ಚಂದಾದಾರರಿದ್ದಾರೆ. ಹೊಸಬರು ಏನೇ ವಿಡಿಯೋ ಮಾಡಿದರೂ ಅದನ್ನು ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ತಲುಪಿಸಲು ಸಾಧ್ಯವಾಗುವುದಿಲ್ಲ. ನಮ್ಮ ಚಾನೆಲ್ ಮೂಲಕ ಅವರಿಗೆ ಹೆಚ್ಚಿನ ವೀಕ್ಷಕರು ದೊರಕುತ್ತಿದ್ದರು. ನಿಜ ಹೇಳಬೇಕೆಂದರೆ. ನಮ್ಮ ಯೋಜನೆ ಬೇರೆಯೇ ಇತ್ತು. ಯೂಟ್ಯೂಬ್‌ನ ಮೊರೆ ಹೋಗಿದ್ದು ಕನ್ನಡದಲ್ಲಿ ವಿಡಿಯೋ ಕಂಟೆಂಟ್ ಟ್ರೆಂಡ್ ಯಾವ ರೀತಿ ಇದೆ. ಜನರ ಪ್ರತಿಕ್ರಿಯೆ ಯಾವರೀತಿ ಇದೆ ಮತ್ತು ಆದಾಯ ಮತ್ತಿತರ ವಿಷಯಗಳನ್ನು ತಿಳಿದುಕೊಳ್ಳಬೇಕಿತ್ತು. ಇಷ್ಟು ವರ್ಷದಿಂದ ನಾವು ಕಂಡುಕೊಂಡಿದ್ದು ಇಷ್ಟು. ಕನ್ನಡಕ್ಕೆ ಇತರೆ ದಕ್ಷಿಣ ಭಾರತೀಯ ಭಾಷೆಗಳಿಗೆ ಸಿಗುತ್ತಿರುವಷ್ಟು ಪ್ರೋತ್ಸಾಹ ಸಿಗುತ್ತಿಲ್ಲ. ಉದಾಹರಣೆಗೆ, ಯೂಟ್ಯೂಬ್‌ನ ಟ್ರೆಂಡಿಂಗ್ ಪಟ್ಟಿಯಲ್ಲಿ ತಮಿಳು, ತೆಲುಗು ವ್ಲಾಗರ್‌ಗಳ ವಿಡಿಯೋಗಳೇ ತುಂಬಿರುತ್ತವೆ. ನಮ್ಮವರ ವಿಡಿಯೋಗಳು ಭೂತಕನ್ನಡಿ ಹಿಡಿದು ಹುಡುಕಿದರೂ ಸಿಗದು. ಆ ಭಾಷೆಗಳ ವ್ಲಾಗರ್‌ಗಳಿಗೆ ಹೋಲಿಸಿದರೆ ಕನ್ನಡಿಗ ವ್ಲಾಗರ್‌ಗಳ ಸಂಪಾದನೆ ಕಡಿಮೆ ಎಂದೇ ಹೇಳಬಹುದು. ಅಂದರೆ ಒಂದು ಲಕ್ಷ ವೆಚ್ಚ ಮಾಡಿ ವಿಡಿಯೋ ಮಾಡುವವರಿಗೆ ಇಲ್ಲಿ ರಿಟರ್ನ್ಸ್ ಬರೋದಿಲ್ಲ. ಹೆಚ್ಚಿನ ಖರ್ಚು ಮಾಡದೆ ಮೊಬೈಲ್ ಕ್ಯಾಮರಾದಲ್ಲೇ, ಇರುವ ಸೌಲಭ್ಯಗಳನ್ನೇ ಬಳಸುವ ವ್ಲಾಗರ್‌ಗಳಿಗೆ ಈ ವೇದಿಕೆ ಸೂಕ್ತ. ದಿನವೂ ಡೆಡಿಕೇಟೆಡ್ ಆಗಿ ಮಾಡಿದರೆ ತಿಂಗಳಿಗೆ 35,000- 40,000 ರನದ ಸಂಪಾದನೆ ಮಾಡಬಹುದು.
– ಆರ್.ಜೆ. ಪ್ರದೀಪ, ಬೆಂಗಳೂರು
ಯೂಟ್ಯೂಬ್ ಲಿಂಕ್- bit.ly/32WI7s3
Since: 2016
ಚಂದಾದಾರರು-2,22,000
ಕೆಟಗರಿ- ಮೊಬೈಲ್, ತಂತ್ರಜ್ಞಾನ
ಪ್ರಾಯೋಜಕ ಸಂಸ್ಥೆಗಳು- ನೋಕಿಯಾ, ರಿಯಲ್ ಮಿ, ಟೆಕ್ನೋ ಬೆಳಗಾವಿಯ ಶಿರಗುಪ್ಪಿ ಎಂಬ ಹಳ್ಳಿಯಲ್ಲಿ ನನ್ನ ವಾಸ. ನಮ್ಮದು ಕೃಷಿಕ ಕುಟುಂಬ. ಬಿಸಿಎ ಓದಿ, ಮನೆಯವರಿಗೆ ನೆರವಾಗುತ್ತಿದ್ದೇನೆ. ಅದರ ಜೊತೆಗೆ ಪಾರ್ಟ್‌ಟೈಮ್ ವ್ಲಾಗರ್. ಕನ್ನಡದಲ್ಲಿ ಹೊಸ ಫೋನ್‌ಗಳ ಕುರಿತಾದ ತಾಂತ್ರಿಕ ಮಾಹಿತಿಯನ್ನು ಒದಗಿಸುವ ವಿಡಿಯೋಗಳು ಕಡಿಮೆ. ವ್ಲಾಗಿಂಗ್ ಮಾಡಲು ಅದೇ ನನಗೆ ಪ್ರೇರಣೆ. ಕೆಲ ಕಂಪನಿಗಳು ಅವರ ಹೊಸ ಫೋನುಗಳನ್ನು ನನಗೆ ವಿಮರ್ಶೆ ಮಾಡಲು ಕಳಿಸಿಕೊಡುತ್ತಾರೆ. ಕಳಿಸಿಕೊಡದೆ ಇದ್ದ ಸಮಯದಲ್ಲಿ ಆ ಮೊಬೈಲ್ ಚೆನ್ನಾಗಿದ್ದರೆ ನಾನೇ ಕೈಯಿಂದ ಕೊಂಡುತಂದು ವ್ಲಾಗ್ ಮಾಡುತ್ತೇನೆ. ವ್ಲಾಗಿಂಗ್‌ನಿಂದ ಬರುವ ಆದಾಯದಿಂದಲೇ ಹೊಸ ಫೋನುಗಳನ್ನು ಖರೀದಿಸುತ್ತೇನೆ. ಹೀಗೆ ನನ್ನ ಬಳಿ 10ಕ್ಕು ಹೆಚ್ಚು ಫೋನುಗಳಿವೆ. ಅವುಗಳಲ್ಲಿ ಚೆನ್ನಾಗಿರುವ ಮೊಬೈಲುಗಳನ್ನು ರಿವ್ಯೂ ಮಾಡಿದ ಬಳಿಕ ಸ್ನೇಹಿತರಿಗೆ ಮಾರಿಬಿಡುತ್ತೇನೆ. ಸದ್ಯ ಯೂಟ್ಯೂಬ್‌ನಿಂದ, ತಿಂಗಳಿಗೆ ಸುಮಾರು 20,000 ರೂ. ಆದಾಯ ಬರುತ್ತಿದೆ. ಹಳ್ಳಿಯಲ್ಲಿ ವಾಸ ಮಾಡುತ್ತಿರುವ ನನಗೆ ಇಂದು ಪಾರ್ಟ್‌ಟೈಮ್‌ನಲ್ಲಿ ಇಷ್ಟು ದುಡಿಮೆ ಮಾಡಲು ಸಾಧ್ಯವಾಗಿದೆ ಎನ್ನುವ ಸಂಗತಿಯಿಂದ ಯಾರು ಬೇಕಾದರೂ ಪ್ರೇರಣೆ ಪಡೆದುಕೊಳ್ಳಬಹುದು. ಪೂರ್ಣ ಪ್ರಮಾಣದಲ್ಲಿ, ರೆಗ್ಯುಲರ್ ಆಗಿ ವ್ಲಾಗಿಂಗ್ ಮಾಡುವುದರಿಂದ ಇನ್ನೂ ಹೆಚ್ಚಿನ ಆದಾಯ ಪಡೆಯಬಹುದು.
– ಸೋಮಶೇಖರ್ ಪಾಟೀಲ್, ಬೆಳಗಾವಿ
ಯೂಟ್ಯೂಬ್ ಲಿಂಕ್- bit.ly/39FxtIw
Since 2015
ಚಂದಾದಾರರು- 18,700
ಕೆಟಗರಿ- ಬೈಕ್, ಪ್ರವಾಸ
ಪ್ರಾಯೋಜಕ ಸಂಸ್ಥೆಗಳು- ಕೆಟಿಎಂ ನನಗೆ ಚಿಕ್ಕಂದಿನಿಂದಲೂ ಬೈಕ್ ಎಂದರೆ ವಿಶೇಷ ಆಕರ್ಷಣೆ. ಕಾರು, ಬಸ್ಸುಗಳಲ್ಲಿ ಪ್ರಯಾಣ ಮಾಡುವುದಕ್ಕಿಂತ ಬೈಕ್‌ನಲ್ಲಿ ಹೋಗುವುದು ತುಂಬಾ ಖುಷಿ ಕೊಡುತ್ತಿತ್ತು. ಐ.ಟಿ. ಉದ್ಯೋಗ ಸೇರಿ ಸ್ವಂತದ್ದೊಂದು ಬೈಕ್ ಕೊಂಡ ಮೇಲಂತೂ ವಾರಾಂತ್ಯಗಳಲ್ಲಿ ಬೈಕ್ ಸವಾರಿ ಹೊರಡುವುದು ದಿನಚರಿಯಾಯಿತು. ನಾನು ಹಲವು ಮೋಟೋ ವ್ಲಾಗರ್‌ಗಳನ್ನು ಯೂಟ್ಯೂಬ್‌ನಲ್ಲಿ, ಫೇಸ್‌ಬುಕ್‌ನಲ್ಲಿ ಫಾಲೋ ಮಾಡುತ್ತಿದ್ದೆ. ಹೆಲ್ಮೆಟ್‌ಗೆ ಗೋ ಪ್ರೊ ಕ್ಯಾಮೆರಾ ಫಿಟ್ ಮಾಡಿಕೊಂಡು ನೂರಾರು ಕಿ.ಮೀ ತನಕ ರೈಡಿಂಗ್, ಬೈಕ್ ಮತ್ತಿತರ ವಿಚಾರಗಳ ಬಗ್ಗೆ ಮಾತಾಡಿಕೊಂಡು ಹೋಗುವ ಮೋಟೋ ವ್ಲಾಗರ್‌ಗಳ ದೊಡ್ಡ ದಂಡೇ ಯೂಟ್ಯೂಬ್‌ನಲ್ಲಿದೆ. ಲಕ್ಷಾಂತರ ಮಂದಿ ಅವರನ್ನು ಪಾಲೋ ಮಾಡುತ್ತಾರೆ. ಅವರಲ್ಲಿ ನಾನೂ ಒಬ್ಬನಾಗಿದ್ದೆ. ಕನ್ನಡದಲ್ಲಿ ಮಾತ್ರ ಮೋಟೋ ವ್ಲಾಗಿಂಗ್ ಇನ್ನೂ ಜನಪ್ರಿಯವಾಗಿಲ್ಲ. ಹೀಗಾಗಿ ನಾನೇ ಮೋಟೋ ವ್ಲಾಗಿಂಗ್ ಶುರುಮಾಡಿದೆ. ಬಹುತೇಕ ಮೋಟೋ ವ್ಲಾಗರ್‌ಗಳು ಗೋ ಪ್ರೋ ಎಂಬ ಪಾಕೆಟ್ ಕ್ಯಾಮೆರಾವನ್ನು ಬಳಸುತ್ತಾರೆ ಅದು ತುಸು ದುಬಾರಿ. ಹೀಗಾಗಿ ಶುರುವಿನಲ್ಲಿ ಎಸ್.ಜೆ ಕ್ಯಾಮ್ ಎಂಬ ಕಡಿಮೆ ಬೆಲೆಯ ಕ್ಯಾಮೆರಾವನ್ನು ಬಳಸುತ್ತಿದ್ದೆ. ನಂತರ ಗೋ ಪ್ರೊ ಕ್ಯಾಮೆರಾ ಕೊಂಡುಕೊಂಡೆ. ಸೋಲೋ ರೈಡ್ ಹೋಗುವುದರ ಜೊತೆಗೆ ನಮ್ಮದೇ ತಂಡವೂ ಇದೆ. ನನ್ನ ವ್ಲಾಗ್‌ಗಳನ್ನು ನೋಡಿ ಕೆಟಿಎಂ ಸಂಸ್ಥೆ ಅವರ ಬೈಕ್ ಲಾಂಚ್ ಕಾರ್ಯಕ್ರಮಗಳಿಗೆ ಆಹ್ವಾನಿಸಿತ್ತು. ಅದು ಬಿಟ್ಟರೆ ಯೂಟ್ಯೂಬ್‌ನ ಆಟೊಮೊಬೈಲ್ ಸಂಬಂಧಿ ಜಾಹೀರಾತುಗಳಿಂದ 8,000- 10,000 ರೂ. ದುಡ್ಡು ಬರುತ್ತಿದೆ. ಆದರೆ ನಾನು ಸಂಪಾದನೆಯ ಉದ್ದೇಶ ಇಟ್ಟುಕೊಂಡು ಮಾಡಿದ್ದಲ್ಲ. ನನ್ನಿಂದ ಒಂದಷ್ಟು ಮಂದಿಗೆ ಬೈಕ್ ರೈಡಿಂಗ್‌ನಲ್ಲಿ ಆಸಕ್ತಿ ಮೂಡಿದರೆ, ಸುರಕ್ಷಿತ ರೈಡಿಂಗ್ ಕುರಿತು ತಿಳಿದುಕೊಂಡರೆ ಅಷ್ಟೇ ಸಾಕು.
– ಕಿರಣ್, ಚಿಕ್ಕಮಗಳೂರು
ಯೂಟ್ಯೂಬ್ ಲಿಂಕ್- bit.ly/2TJmo2E
Since: 2018
ಚಂದಾದಾರರು-10,800
ಕೆಟಗರಿ-ಲೈಫ್ಸ್ಟೈಲ್, ಫ್ಯಾಷನ್, ಆಹಾರ, ಪ್ರವಾಸ, ಮೇಕಪ್
ಪ್ರಾಯೋಜಕ ಸಂಸ್ಥೆಗಳು- ಪಾಂಡ್ಸ್, ಲೋರಿಯಲ್, ಓಷನ್ ಪರ್ಲ್ ರೆಸಾರ್ಟ್ ಶಾರ್ಟಿ ಡೂವೊಪ್ ಎಂದರೆ ಎತ್ತರ ಕಡಿಮೆ ಇರುವ ಹುಡುಗಿ ಎಂದರ್ಥ. ಅದು ನಾನಾಗಿರುವುದರಿಂದ ಅದನ್ನೇ ವ್ಲಾಗ್‌ಗೆ ನಾಮಕರಣ ಮಾಡಿದೆ. ಮುಂಚಿನಿಂದಲೂ ಕಂಟೆಂಟ್ ಸೃಷ್ಟಿಸುವುದೆಂದರೆ ನನಗೆ ಎಲ್ಲಿಲ್ಲದ ಆಸಕ್ತಿ. ವ್ಲಾಗಿಂಗ್ ಮಾಡುವುದಕ್ಕೆ ಮೊದಲು ಬ್ಲಾಗ್ ಬರೆಯುತ್ತಿದ್ದೆ. ವ್ಲಾಗ್‌ಗಳ ಟ್ರೆಂಡ್ ಶುರುವಾದ ಮೇಲೆ ಅದಕ್ಕೆ ಶಿಫ್ಟ್ ಆದೆ. ನಾನು ವ್ಲಾಗಿಂಗ್‌ಗಾಗಿ ವಿಶೇಷ ತಯಾರಿಯನ್ನೇನೂ ಮಾಡಿಕೊಂಡಿಲ್ಲ. ಅಥವಾ ವಿಶೇಷ ಉಪಕರಣಗಳನ್ನು ಖರೀದಿಸಿಲ್ಲ. ಮೆನ್‌ಸ್ಟ್ರೆವಲ್ ಕಪ್ಸ್, ಪಿಂಪಲ್, ಬಟ್ಟೆ ಶಾಪಿಂಗ್ ಹೀಗೆ ಹದಿಹರೆಯದ ಹುಡುಗಿಯ ಬದುಕಿಗೊಂದು ಇಣುಕುನೋಟವನ್ನು ನನ್ನ ವ್ಲಾಗ್‌ಗಳು ಕೊಡುತ್ತವೆ. ಡಿಎಸ್‌ಎಲ್‌ಆರ್ ಕ್ಯಾಮೆರಾದಲ್ಲಿ ಶೂಟ್ ಮಾಡುತ್ತೇನೆ. ಮೇಕಪ್ ಇರಲಿ, ಹೊಸ ದಿರಿಸೇ ಇರಲಿ ರೆಕಾರ್ಡ್ ಮಾಡಲೆಂದು ಕೊಂಡುಕೊಳ್ಳುವುದಿಲ್ಲ. ಕೊಂಡುಕೊಂಡಾಗ ವ್ಲಾಗ್ ಮಾಡುತ್ತೇನೆ, ಅಷ್ಟೆ. ಶೂಟಿಂಗ್ ಆದ ನಂತರ ವಿಡಿಯೋವನ್ನು ನಾನೇ ಲ್ಯಾಪ್‌ಟಾಪ್‌ನಲ್ಲಿ ಎಡಿಟ್ ಮಾಡಿ ಯೂಟ್ಯೂಬ್‌ಗ ಅಪ್‌ಲೋಡ್ ಮಾಡ್ತೀನಿ. ಮೊದಲ ವರ್ಷ ಆದಾಯವೇನೂ ಬರುತ್ತಿರಲಿಲ್ಲ. ನಾನು ಹವ್ಯಾಸಿಯಾಗಿದ್ದರಿಂದ, ನನ್ನ ಖುಷಿಗಷ್ಟೇ ವ್ಲಾಗಿಂಗ್ ಮಾಡುತ್ತಿದ್ದೆ. ಹೀಗಾಗಿ 5,000 ರೂ.ಮೊತ್ತವನ್ನು ಗೂಗಲ್ ನನ್ನ ಖಾತೆಗೆ ಜಮೆ ಮಾಡುತ್ತಿದ್ದರು. ನಿರಂತರವಾಗಿ ಕನಿಷ್ಟ ವಾರಕ್ಕೊಂದು ವಿಡಿಯೊ ಅಪ್‌ಲೋಡ್ ಮಾಡುತ್ತಾ ಬಂದರೆ ಖಂಡಿತ ಇದರಿಂದ ಸಂಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು. ಆಗ ಗೂಗಲ್‌ನ ಜಾಹೀರಾತು ಮೂಲವಲ್ಲದೆ, ಇತರೆ ದಾರಿಗಳೂ ತೆರೆದುಕೊಳ್ಳುತ್ತವೆ. ಪಾಂಡ್ಸ್, ಲೋರಿಯಲ್ ಮುಂತಾದ ಸಂಸ್ಥೆಗಳು ನಮ್ಮನ್ನು ಗುರುತಿಸುತ್ತಾರೆ. ನನ್ನ ರೆಸ್ಟಾರೆಂಟ್ ರಿವ್ಯೂ ನೋಡಿ ಓಷನ್ ಪರ್ಲ್ ಎಂಬ ರೆಸಾರ್ಟಿನವರು ನನ್ನನ್ನು ಕರೆಸಿ ವ್ಲಾಗ್ ಮಾಡಿಸಿದ್ದರು. ಇದರಿಂದೆಲ್ಲಾ ಆದಾಯ ಹೆಚ್ಚಿಸಿಕೊಳ್ಳಬಹುದು. ಎಂಜಿನಿಯರಿಂಗ್ ಮುಗಿಸಿ ಈಗ ಮಾಸ್ಟರ್ ಓದಲು ಜರ್ಮನಿಗೆ ತೆರಳುತ್ತಿದ್ದೇನೆ. ನನಗೆ ಒಂದು ಐಡೆಂಟಿಟಿ ನೀಡಿರುವ ವ್ಲಾಗಿಂಗ್‌ಅನ್ನು ವಿದೇಶದಲ್ಲೂ ಮುಂದುವರಿಸುತ್ತೇನೆ. – ಸೌಮ್ಯ ಎಂ.ಬಿ., ಧಾರವಾಡ