Advertisement

Vladimir Putin;ರೈಲಿನಂಥ ಘೋಸ್ಟ್‌ ಕಾರ್‌ನಲ್ಲಿ ವ್ಲಾದಿಮಿರ್‌ ಪುತಿನ್‌ ಪುಟ್ಟಮನೆ

12:07 AM Jul 12, 2023 | Team Udayavani |

ಮಾಸ್ಕೋ: ಸಾಮಾನ್ಯವಾಗಿ ಯಾವುದೇ ದೇಶದ ಪ್ರಧಾನಿ ಹಾಗೂ ಅಧ್ಯಕ್ಷರ ನಿವಾಸಗಳು ಐಷಾರಾಮಿಯಾಗಿರುತ್ತವೆ ಎಂಬುದು ನಮಗೆಲ್ಲ ತಿಳಿದೇ ಇದೆ. ಆದರೆ ಸಂಚರಿಸುವ ವಾಹನವನ್ನೇ ಐಷಾರಾಮಿ ನಿವಾಸದಂತೆ ಹೊಂದಿ­ರುವು­ದನ್ನು ನೋಡಿದ್ದೀರಾ?

Advertisement

ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಅಂಥದ್ದೇ ಐಷಾರಾಮಿ ಹಾಗೂ ರೈಲಿ ನಂಥ ಘೋಸ್ಟ್‌ ಕಾರ್‌ ಅನ್ನು ಹೊಂದಿದ್ದಾರೆ. ಅದರ ಫೋಟೋಗಳು ಇದೀಗ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. 609 ಕೋಟಿ ರೂ. ಮೌಲ್ಯದ ಘೋಸ್ಟ್‌ ಕಾರ್‌ ಎಂದೇ ಕರೆಯಲ್ಪಡುವ ರೈಲಿನಂಥ ವಿಶೇಷ ಕಾರ್‌ ಪುತಿನ್‌ ಅವರಿಗಾಗಿಯೇ ಅಭಿವೃದ್ಧಿಪಡಿಸಲಾಗಿದೆ.

ಅದರಲ್ಲಿ ಸ್ಮಾರ್ಟ್‌ಬೆಡ್‌ ರೂಂ, ಕಿಚನ್‌, ಡೈನಿಂಗ್‌ ಏರಿಯಾ, ಮೀಟಿಂಗ್‌ ಹಾಲ್‌ ಜತೆಗೆ ಪುತಿನ್‌ ಅವರ ವೈಯಕ್ತಿಕ ಕಾಳಜಿಗಾಗಿ ಜಿಮ್‌, ಮಸಾಜ್‌ ಪಾರ್ಲರ್‌, ಟರ್ಕಿಶ್‌ ಬಾತ್‌ ರೂಂ, ಸ್ಟೀಮ್‌ ಸೆಟಪ್‌, ನ್ಪೋರ್ಟ್ಸ್ ಹಾಲ್‌ ಕೂಡ ಇದೆ.

Advertisement

Udayavani is now on Telegram. Click here to join our channel and stay updated with the latest news.

Next