Advertisement

ಟ್ರಂಪ್‌ ವಿಜಯಕ್ಕೆ ಸೈಬರ್‌ ನೆರವಿತ್ತ ಪುತಿನ್‌:ಅಮೆರಿಕ ಗುಪ್ತಚರ ವರದಿ

10:58 AM Jan 07, 2017 | udayavani editorial |

ವಾಷಿಂಗ್ಟನ್‌ : 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರಾಟ್‌ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಎದುರು ಸ್ಪರ್ಧಿಸಿದ್ದ ರಿಪಬ್ಲಿಕನ್‌ ಅಭ್ಯರ್ಥಿ ಡೊನಾಲ್ಡ್‌ ಟ್ರಂಪ್‌ ಅವರ ಗೆಲುವಿಗೆ ಸೈಬರ್‌ ಅಭಿಯಾನದ ಮೂಲಕ ನೆರವಾಗುವ ಯತ್ನಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಆದೇಶಿಸಿದ್ದರು ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಹೇಳಿದೆ.

Advertisement

ರಶ್ಯದ ಉದ್ದೇಶ ಕೇವಲ ಟ್ರಂಪ್‌ ಅವರ ವಿಜಯಕ್ಕೆ ನೆರವಾಗುವುದು ಮಾತ್ರವಲ್ಲ; ಆ ಮೂಲಕ ಅಮೆರಿಕದ ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಜನರ ನಂಬಿಕೆ ಮತ್ತು ವಿಶ್ವಾಸವನ್ನು ನಾಶ ಮಾಡುವುದು ಕೂಡ ಆಗಿತ್ತು. ಜತೆಗೆ ಹಿಲರಿ ಕ್ಲಿಂಟನ್‌ ಜಯವನ್ನು ಅಸಾಧ್ಯಗೊಳಿಸುವುದು ಮತ್ತು ಒಂದೊಮ್ಮೆ ಆಕೆ ಅಮೆರಿಕದ ಅಧ್ಯಕ್ಷೆಯಾಗಿ ಚುನಾಯಿತಳಾದಲ್ಲಿ ಆಕೆಗೆ ಹಾನಿಯುಂಟುಮಾಡುವುದು – ಇವೆಲ್ಲ ಪುತಿನ್‌ ಗೇಮ್‌ ಪ್ಲಾನ್‌ ಆಗಿತ್ತು ಎಂದು ಅಮೆರಿಕದ ಗುಪ್ತಚರ ಸಂಸ್ಥೆಯ ಉನ್ನತ ಅಧಿಕಾರಿಯೋರ್ವರು ಬಿಡುಗಡೆ ಮಾಡಿರುವ ಅವರ್ಗೀಕೃತ ವರದಿಯಲ್ಲಿ ಹೇಳಲಾಗಿದೆ. 

ವರದಿಯು ವರ್ಗೀಕೃತ ವಿವರಗಳನ್ನು ಕೈಬಿಟ್ಟಿದೆಯಾದರೂ ಅಮೆರಿಕದ ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಅಭೂತಪೂರ್ವ  ರೀತಿಯಲ್ಲಿ ಹಸ್ತಕ್ಷೇಪ ನಡೆಸುವುದು ರಶ್ಯದ ಉದ್ದೇಶವಾಗಿತ್ತು ಎಂದು ಹೇಳಿದೆ. 

ಇಲೆಕ್ಟೋರಲ್‌ ಕಾಲೇಜ್‌ನಲ್ಲಿ ಟ್ರಂಪ್‌ ಅವರ ವಿಜಯಕ್ಕೆ ಅಮೆರಿಕದ ಸಂಸತ್ತು ನಿನ್ನೆ ಶುಕ್ರವಾರ ಅಧಿಕೃತ ಪರಿಪತ್ರ ನೀಡಿದೆಯಾದರೂ ಹಿಲರಿ ಕ್ಲಿಂಟನ್‌ ಅವರು ಜನಪ್ರಿಯ ಮತಗಳನ್ನು 30 ಲಕ್ಷದ ಸನಿಹದಲ್ಲಿ ಗೆದ್ದಿರುವುದು ವಿಪರ್ಯಾಸವಾಗಿದೆ ಎಂದು ವರದಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next