Advertisement

ಕೀವ್ ನಲ್ಲಿ ಹಿನ್ನಡೆ : ರಷ್ಯಾ ಸೈನ್ಯಕ್ಕೆ ಹೊಸ ಜನರಲ್ ನೇಮಿಸಿದ ಪುತಿನ್

01:17 PM Apr 10, 2022 | Team Udayavani |

ಮಾಸ್ಕೋ : ಉಕ್ರೇನ್ ನಡುವಿನ ಯುದ್ಧದಲ್ಲಿ ರಷ್ಯಾ ಮಿಲಿಟರಿ ಕೀವ್ ನಗರವನ್ನು ಪೂರ್ಣವಾಗಿ ವಶಪಡಿಸಿಕೊಳ್ಳಲು ವಿಫಲವಾದ ಬೆನ್ನಲ್ಲೇ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಸೈನ್ಯಕ್ಕೆ ಹೊಸ ಜನರಲ್ ನೇಮಕ ಮಾಡಿದ್ದಾರೆ. ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ನೇಮಿಸಿದ್ದಾರೆ. ರಷ್ಯಾದ ದಕ್ಷಿಣ ಮಿಲಿಟರಿ ಜಿಲ್ಲೆಯ ಕಮಾಂಡರ್ ಉಕ್ರೇನ್‌ನಲ್ಲಿ ಯುದ್ಧವನ್ನು ಮುನ್ನಡೆಸಲಿದ್ದಾರೆ.

Advertisement

ಡ್ವೊರ್ನಿಕೋವ್ ಅವರನ್ನು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಥಿಯೇಟರ್ ಕಮಾಂಡರ್ ಎಂದು ಹೆಸರಿಸಲಾಗಿದೆ.

ಮೇ 9 ರಂದು ನಡೆಯಲಿರುವ `ವಿಜಯ ದಿನ ಆಚರಣೆಯ ಮೊದಲು ಯುದ್ಧಭೂಮಿಯಲ್ಲಿ ಭಾರಿ ಪ್ರಗತಿಯೊಂದಿಗೆ ಪುತಿನ್ ಅವರ ಮುಂದೆ ಕಾಣಿಸಿಕೊಳ್ಳುವ ಗುರಿಯನ್ನು ರಷ್ಯಾದ ಜನರಲ್ ಹೊಂದಿದ್ದಾರೆ ಎಂಬ ಊಹಾಪೋಹವಿದೆ. ಮಿಲಿಟರಿ ವಿಶ್ಲೇಷಕರು ಮತ್ತು ಗುಪ್ತಚರ ಮೌಲ್ಯಮಾಪನಗಳೊಂದಿಗೆ ಪರಿಚಿತವಾಗಿರುವ ಯುಎಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಸಿಎನ್‌ಎನ್ ಭಾನುವಾರ ಈ ವರದಿ ಮಾಡಿದೆ.

ಮೇ 9 “ವಿಜಯ ದಿನ” ರಷ್ಯಾದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ, ಏಕೆಂದರೆ ಇದು ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ಮೇಲೆ ಸೋವಿಯತ್ ಒಕ್ಕೂಟದ ವಿಜಯದ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ.

ಉತ್ತರ ಉಕ್ರೇನ್‌ನಿಂದ ರಷ್ಯಾ ನಿರ್ಗಮನಕ್ಕೆ ಮುಂದಾಗಿದೆ ಎಂಬುದಕ್ಕೆ ಪುರಾವೆಗಳನ್ನು ತೋರಿಸುತ್ತದೆ ಎಂದು ಶನಿವಾರ ಇಂಗ್ಲೆಂಡ್ ಮಿಲಿಟರಿ ಗುಪ್ತಚರ ಮಾಹಿತಿ ನೀಡಿದೆ. ಏತನ್ಮಧ್ಯೆ, ರಷ್ಯಾದ 13 ವೈಮಾನಿಕ ಗುರಿಗಳನ್ನು ಶನಿವಾರ ನಾಶಪಡಿಸಲಾಗಿದೆ ಎಂದು ಉಕ್ರೇನ್‌ನ ವಾಯುಪಡೆಯು ಮಾಹಿತಿ ನೀಡಿದೆ.

Advertisement

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶನಿವಾರ ಕೈವ್‌ನಲ್ಲಿ ಭೇಟಿಯಾಗಿ. ಉಕ್ರೇನಿಯನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಉಕ್ರೇನ್‌ಗೆ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next