Advertisement

ಉಕ್ಕಿದ ಆಕ್ರೋಶ…ಜಯಾ ಸಮಾಧಿ ಮೇಲೆ ಶಶಿಕಲಾ ಶಪಥ; watch

12:47 PM Feb 15, 2017 | Sharanya Alva |

ಚೆನ್ನೈ: ಚೆನ್ನೈನ ಮರೀನಾ ಬೀಚ್ ನಲ್ಲಿರುವ ಮಾಜಿ ಸಿಎಂ ಜೆ.ಜಯಲಲಿತಾ ಅವರ ಸಮಾಧಿ ಬಳಿ ಬಂದ ವಿಕೆ ಶಶಿಕಲಾ ನಟರಾಜನ್ ಅವರು ಮೊದಲು ನಮಸ್ಕರಿಸಿ, ಬಳಿಕ ಮನಸ್ಸಲ್ಲೇ ಮಾತನಾಡಿಕೊಂಡು ಸಮಾಧಿ ಮೇಲೆ ಜೋರಾಗಿ ಕೈಯನ್ನು ತಟ್ಟುವ ಮೂಲಕ ಶಪಥಗೈದಿದ್ದಾರೆ.

Advertisement

ಪೋಯಸ್ ಗಾರ್ಡ್ ನಿಂದ ಹೊರಟ ಶಶಿಕಲಾ ಜಯಾ ಸಮಾಧಿಗೆ ನಮಸ್ಕರಿಸಿ, ದುಃಖದಿಂದ ಶಪಥಗೈದಿರುವ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಜೈಲಿನಿಂದ ವಾಪಸ್ ಬಂದು ಜನರ ಸೇವೆ ಮಾಡಿಯೇ ಮಾಡುತ್ತೇನೆ., ಮತ್ತೆ ಬಂದೇ ಬರ್ತೇನೆ, ಅಧಿಕಾರಕ್ಕೆ ಏರುತ್ತೇನೆ ಎಂದು ಶಶಿಕಲಾ ಶಪಥಗೈದಿರುವುದಾಗಿ ಶಶಿಕಲಾ ಆಪ್ತರು ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿ ವಿವರಿಸಿದೆ.

ಬೆಂಗಳೂರಿನತ್ತ ಶಶಿಕಲಾ ಪ್ರಯಾಣ:
ಜಯಾ ಸಮಾಧಿಗೆ ನಮಸ್ಕರಿಸಿದ ಬಳಿಕ ವಿಕೆ ಶಶಿಕಲಾ ತಮ್ಮ ಬೆಂಬಲಿಗರ ಜೊತೆ ಜಯಲಲಿತಾ ಉಪಯೋಗಿಸುತ್ತಿದ್ದ ಕಾರಿನಲ್ಲೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಸುಧಾಕರನ್ , ಇಳವರಸಿ ಕೂಡಾ ಶಶಿಕಲಾ ಜೊತೆಗಿದ್ದಾರೆ. ಮಧ್ಯಾಹ್ನ ಪರಪ್ಪನ ಅಗ್ರಹಾರದ ಆವರಣದಲ್ಲಿ ವಿಶೇಷ ಕೋರ್ಟ್ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next