Advertisement
ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಎನ್‌ಜಿಟಿ ಮುಖ್ಯಸ್ಥ ನ್ಯಾ| ಆದರ್ಶ್ ಕುಮಾರ್ ಗೋಯೆಲ್, ಕಂಪೆನಿಯಲ್ಲಿ ಸುರಕ್ಷಾ ನಿಯಮಗಳನ್ನು ಸರಿಯಾಗಿ ಪಾಲಿಸಲಾಗಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈಗ ಮಧ್ಯಾಂತರವಾಗಿ ವಿಧಿಸಲಾಗಿರುವ ದಂಡವನ್ನು, ಕಂಪೆನಿಯ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿ ವಿಧಿಸ ಲಾಗಿದೆ. ಈ ದಂಡವನ್ನು ಕಂಪೆನಿಯು ವಿಶಾಖಪಟ್ಟಣ ಜಿಲ್ಲಾಧಿ ಕಾರಿ ಕಚೇರಿಯಲ್ಲಿ ಪಾವತಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಎನ್‌ಜಿಟಿಯ ಮುಂದಿನ ಆದೇಶಗಳಿಗೆ ಕಂಪೆನಿ ಬದ್ಧವಾಗಿರಬೇಕು’ ಎಂದು ಸೂಚಿಸಿದರು.
ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ, ಎಲ್‌ಜಿ ಪಾಲಿಮರ್ಸ್ ಇಂಡಿಯಾ, ಆಂಧ್ರ ಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶಾಖ ಪಟ್ಟಣ ಜಿಲ್ಲಾಧಿಕಾರಿಯವರಿಗೂ ನೋಟಿಸ್ ಜಾರಿ ಗೊಳಿಸಿರುವ ಎನ್‌ಜಿಟಿ, ಮೇ 18ರಂದು ಈ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದ್ದು ಅಂದು ತಾನು ನೀಡಿ ರುವ ನೋಟಿಸ್‌ಗೆ ಪ್ರತ್ಯುತ್ತರ ನೀಡಬೇಕೆಂದು ಸೂಚಿಸಿದೆ. ಸಮಿತಿ ರಚನೆ
ಅನಿಲ ಸೋರಿಕೆಯ ಹಿಂದಿನ ಲೋಪದೋಷಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಐವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ನ್ಯಾ| ಆದರ್ಶ್ ಕುಮಾರ್ ರಚಿಸಿದ್ದಾರೆ. ಎನ್‌ಜಿಟಿಯಲ್ಲಿ ಈ ಪ್ರಕರಣದ ಮುಂದಿನ ವಿಚಾರಣೆ ಮೇ 18ರಂದು ಜರಗಲಿದ್ದು ಅಷ್ಟರೊಳಗೆ ಈ ಸಮಿತಿ ತನ್ನ ವರದಿ ಸಲ್ಲಿಸಬಹುದು ಎಂದು ನಿರೀಕ್ಷಿಸಲಾಗಿದೆ.